ಜೀ಼ ಕನ್ನಡದಲ್ಲಿ ಹೊಸ ಧಾರಾವಾಹಿ “ಪರಮಾವತಾರಿಶ್ರೀಕೃಷ್ಣ”

ಕನ್ನಡದ ಜನಪ್ರಿಯ ವಾಹಿನಿ ಜೀ಼ ಕನ್ನಡ ಇದೀಗ “ಪರಮಾವತಾರಿಶ್ರೀಕೃಷ್ಣ” ಪ್ರಾರಂಭಿಸುತ್ತಿದೆ. ಜೂನ್  22,2020ರಂದು ಸಂಜೆ 6ರಿಂದ 7ರವರೆಗೆ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರಸಾರವಾಗಲಿರುವ ಈ ಧಾರಾವಾಹಿ ಶ್ರೀಕೃಷ್ಣನ ಲೀಲೆಗಳನ್ನು ಕನ್ನಡ ಕಿರುತೆರೆ ವೀಕ್ಷಕರಿಗೆ ಉಣಬಡಿಸಲಿದೆ.

ಶ್ರೀಕೃಷ್ಣನಪಾತ್ರ ಎಲ್ಲರಿಗೂ ಚಿರಪರಿಚಿತ. ಹುಟ್ಟಿಗೂ ಮೊದಲೇ ತನ್ನ ಮಾವ ಕಂಸನ ಬೆದರಿಕೆಯ ನಡುವೆ ಜನ್ಮತಳೆದು ಕಂಸನನ್ನುಕೊಂದು ಪಾರಮ್ಯ ಸಾಧಿಸು ವಕೃ ಷ್ಣನಲೀಲೆಗಳು ಅಪಾರ. ಬೆಣ್ಣೆಕದಿಯುವ ಮುದ್ದುಕೃಷ್ಣ, ಗೋಪಿಕೆಯರೊಂದಿಗೆ ಆಡುವತುಂಟಕೃಷ್ಣ ನಂತರ ಕುರುಕ್ಷೇತ್ರದಲ್ಲಿ ಪಾಂಡವರಪರವಾಗಿ ನಿಂತು ರ‍್ಜುನನಿಗೆ ಭಗವದ್ಗೀತೆ ಬೋಧಿಸಿ ಯುದ್ಧದಲ್ಲಿ ಅವರಿಗೆ ಗೆಲುವು ತಂದು ಕೊಡುತ್ತಾನೆ.

ವಿಷ್ಣುವಿನ ಅವತಾರ ಶ್ರೀಕೃಷ್ಣನ ಕುರಿತು ಹಲವು ಕುತೂಹಲಗಳು ಜನರಲ್ಲಿವೆ. ದೇವರಾದ ಕೃಷ್ಣನು ಬೆಣ್ಣೆಕದಿಯುತ್ತಿದ್ದುದು ಏಕೆ? ರಾಧೆ-ಕೃಷ್ಣೆಯರ ಪ್ರೇಮದ ನಡುವೆಯೂ ಕೃಷ್ಣ ಏಕೆ ರಾಧೆಯನ್ನು ವರಿಸಲಿಲ್ಲ? ಇಂತಹ ಹಲವು ಪ್ರಶ್ನೆಗಳಿಗೆ ಈ ಧಾರಾವಾಹಿ ಉತ್ತರಿಸುತ್ತದೆ.

ಶ್ರೀಕೃಷ್ಣನಜೀವನ, ಬಲರಾಮನೊಂದಿಗೆ ಸೋದರಪ್ರೇಮ, ರಾಧೆಯೊಂದಿಗೆಪ್ರೀತಿ, ಕುರುಕ್ಷೇತ್ರದಲ್ಲಿ ಮುತ್ಸದ್ದಿತನ, ಭಗವದ್ಗೀತೆ ಬೋಧಿಸಿದ ಕೃಷ್ಣನಜೀವನದ ಅಸಂಖ್ಯ ಆಯಾಮಗಳಿವೆ. ಈ ಧಾರಾವಾಹಿಯಲ್ಲಿ ಶ್ರೀಕೃಷ್ಣತುಂಟ, ಸದಾಶಾಂತಸ್ವಭಾವದ, ಅಗತ್ಯವಿದ್ದಾಗ ಪ್ರತಿರೋಧ ತೋರುವ ಅಂಧ ವಿಶ್ವಾಸಗಳನ್ನುನಿರಾಕರಿಸುವ ಎಲ್ಲರ ಪ್ರೀತಿಗಳಿಸಿದ ವ್ಯಕ್ತಿಯಾಗಿರುತ್ತಾನೆ. ಅದೇ ರೀತಿ ಕೃಷ್ಣನೊಂದಿಗೆ ಬೆಣ್ಣೆ ಕದಿಯುವ ರಾಧೆಧರ‍್ಯವಂತೆ, ತಾಳ್ಮೆಯುಳ್ಳವಳು,  ಕ್ಷಮೆ ನೀಡುವವಳು, ಕೃಷ್ಣನನ್ನು ಪ್ರೀತಿಸುವ ವ್ಯಕ್ತಿಯಾಗಿರುತ್ತಾಳೆ.

ಶ್ರೀಕೃಷ್ಣನತಾಯಿ ಯಶೋದೆ ಮಗನನ್ನು ಮುದ್ದಿಸು ಅವನ ಚೇಷ್ಟೆಗಳಿಗೆ ಶಿಕ್ಷಿಸುವ ಮಮತಾಮಯಿತಾಯಿ. ಕಂಸದುರಾಸೆಯ, ಸ್ವರ‍್ಥದಕೃಷ್ಣನನ್ನು ನಾಶಮಾಡಲು ಬಯಸುವದುಷ್ಟ. ನಂದ ಎಲ್ಲರನ್ನೂ ಸ್ನೇಹಮಯವಾಗಿ ಕಾಣುವ ಎಲ್ಲರಿಗೂ ನೆರವಾಗುವ ಸಮಸ್ಯೆಗಳನ್ನು ಪರಿಹರಿಸು ವಶಾಂತಸ್ವಭಾವದವ್ಯಕ್ತಿ.  ಕಂಸನ ಸೋದರಿ ದೇವಕಿ ದೇವರನ್ನುನಂಬಿ ಕೃಷ್ಣನನ್ನು ಉಳಿಸಿಕೊಳ್ಳುವುದರಲ್ಲಿ ಯಶಸ್ವಿ ಯಾಗುವಧೀ ರೋದಾತ್ತಮಹಿಳೆ. ಮಾಹಿಷ್ಮತಿಯ ರಾಜ ವಸುದೇವಯೋಧ ಹಾಗೂ ಕಾಳಜಿ ವಹಿಸುವ ಪತಿಯಾಗಿರುತ್ತಾನೆ. ಶೇಷನಾಗನ ಅವತಾರ ಬಲರಾಮಕೃಷ್ಣನ ಕುರಿತು ಅಪಾರ ಪ್ರೀತಿ ಹೊಂದಿರುತ್ತಾನೆ.  ಪೌರಾಣಿಕ ಧಾರಾವಾಹಿಗಳನ್ನು ಇಷ್ಟಪಡುತ್ತಿರುವ ಕನ್ನಡಕಿರುತೆರೆ ವೀಕ್ಷಕರಿಗೆ ಇದು ಮನರಂಜನೆಯರ ಸದೌತಣ ಬಡಿಸುವು ದರಲ್ಲಿ ಸಂಶಯವಿಲ್ಲ.

ಜೀ಼ ಕನ್ನಡದಲ್ಲಿ “ಪರಮಾವತಾರ ಶ್ರೀಕೃಷ್ಣ” ಧಾರಾವಾಹಿ ಪ್ರಸಾರ ಕುರಿತು ಜೀ಼ಕನ್ನಡ ಬ್ಯುಸಿನೆ ಸ್ಹೆಡ್ರಾ ಘವೇಂದ್ರ ಹುಣಸೂರು, “ಕನ್ನಡವೀಕ್ಷಕರು ಸದಾ ಪೌರಾಣಿಕ ಧಾರಾವಾಹಿಗಳನ್ನು ಬಹಳ ಇಷ್ಟಪಟ್ಟು ವೀಕ್ಷಿಸುತ್ತಾರೆ. ಜೀ಼ಕನ್ನಡ ವೀಕ್ಷಕರ ಅಭಿರು ಅರಿತು ಅದಕ್ಕೆ ತಕ್ಕಂತೆ ಕರ‍್ಯಕ್ರಮಗಳನ್ನು ರೂಪಿಸುತ್ತಾಬಂದಿದೆ. ಈ ಸಾಲಿಗೆ ಪರಮಾವತಾರ ಶ್ರೀಕೃಷ್ಣಸರ‍್ಪಡೆಯಾಗಿದೆ. ಶ್ರೀಕೃಷ್ಣಬಾಲ್ಯ, ಕೌಮರ‍್ಯ, ಯೌವನ ಹಾಗೂ ಕುರುಕ್ಷೇತ್ರದಲ್ಲಿ ಪಾಂಡವರಪರವಾಗಿ ನಿಂತು ಹೋರಾಟ ನಡೆಸು ವವರೆಗೆ ಅತ್ಯಂತರ‍್ಣ ರಂಜಿತ ಹಾಗೂ ಕುತೂಹಲಕಾರಿ  ವ್ಯಕ್ತಿತ್ವ. ಶ್ರೀಕೃಷ್ಣನಬಾಲಲೀಲೆಗಳು, ಸೋದರಪ್ರೇಮ, ರಾಧೆಯ ಪ್ರೀತಿ ಎಲ್ಲವೂ ಜೀ಼ ಕನ್ನಡ ವೀಕ್ಷಕರಿಗೆ ಮನರಂಜನೆಯ ಹೊಸ ಎತ್ತರಕ್ಕೆ ಕೊಂಡೊಯ್ಯುವುದರಲ್ಲಿ ಅನುಮಾನವಿಲ್ಲ”ಎನ್ನುತ್ತಾರೆ.

ಜೂನ್  22,2020ರಂದು ಸಂಜೆ 6ರಿಂದ 7ರವರೆಗೆ ಸೋಮವಾರದಿಂದ ಶುಕ್ರವಾರವಾರದವರೆಗೆ ಪ್ರಸಾರವಾಗಲಿದೆ. ಇನ್ನೇಕೆ ತಡ ಮನೆಯಲ್ಲಿ ಮನೆ ಮಂದಿ ಜೊತೆ ಕುಳಿತು ಸಮಯ ಕಳೆಯುವ ಇದೇ ಹೊತ್ತಿನಲ್ಲಿ ಮತ್ತೊಮ್ಮೆ ನಿಮ್ಮ ನೆಚ್ಚಿನ ಜೀ಼ ಕನ್ನಡ ವಾಹಿನಿಯಲ್ಲಿ“ಪರಮಾವತಾರಶ್ರೀಕೃಷ್ಣ”ಧಾರಾವಾಹಿ ಕುಟುಂಬದ ಜೊತೆ ನೋಡಿಆನಂದಿಸಿ.

Be the first to comment

Leave a Reply

Your email address will not be published. Required fields are marked *

Translate »
error: Content is protected !!