ಫೆ.17ರಿಂದ ಹೊಸ ರೂಪದಲ್ಲಿ ನಾಗಿಣಿ 2

ಈಚಿನ ದಿನಗಳಲ್ಲಿ ಪ್ರೇಕ್ಷಕರಿಗೆ ಬೆಳ್ಳಿತೆರೆಯಷ್ಟೇ ಅತ್ಯುತ್ತಮ ಗುಣಮಟ್ಟದ ಮನರಂಜನೆ ನೀಡುವಂಥ ಹಲವಾರು ಕಾರ್ಯಕ್ರಮಗಳನ್ನು ಕಿರುತೆರೆಯ ಜೀ ಕನ್ನಡ ವಾಹಿನಿ ನೀಡುತ್ತಿದೆ. ನಾಲ್ಕು ವರ್ಷಗಳಿಂದ  ಕಾರ್ಯಕ್ರಮ ನಿರೂಪಣೆಯಲ್ಲಿ ಹೊಸತನ ಮೈಗೂಡಿಸಿಕೊಳ್ಳುವ ಮೂಲಕ ಕನ್ನಡಿಗರಿಗೆ ಸಂಪೂರ್ಣ ಮನರಂಜನೆಯನ್ನು ಇದು ನೀಡುತ್ತಿದೆ. ಕಳೆದ 4 ವರ್ಷಗಳಿಂದ ಜನಪ್ರಿಯ ಧಾರಾವಾಹಿಯಾಗಿ ಪ್ರಸಾರವಾಗುತ್ತಿದ್ದ ನಾಗಿಣಿ ಇತ್ತೀಚೆಗಷ್ಟೇ ಪ್ರಸಾರವನ್ನು ನಿಲ್ಲಿಸಿತ್ತು. ಪ್ರಸಾರವಾದ ಅಷ್ಟೂ ದಿನ ಟಿಆರ್‌ಪಿ ರೇಟಿಂಗ್‌ನಲ್ಲಿದ್ದ ನಾಗಿಣಿ ಜೀ ವಾಹಿನಿ ಇನ್ನೂ ಹೆಚ್ಚು ಹೆಚ್ಚು ಜನರನ್ನು ತಲುಪುವಂತೆ ಮಾಡಿತ್ತು. ಈಗ ಅದೇ ನಾಗಿಣಿ ಹೊಸ ರೂಪದಲ್ಲಿ ಪ್ರೇಕ್ಷಕರ ಮನ ಗೆಲ್ಲೋಕೆ ಮತ್ತೊಮ್ಮೆ ವೀಕ್ಷಕರ ಮನೆಗಳಿಗೆ  ಬರ‍್ತಿದ್ದಾಳೆ. ಅಂದರೆ ನಾಗಿಣಿ ಭಾಗ 2 ಆರಂಭವಾಗುತಿದೆ. ಹೌದು, ಇದೇ ಸೋಮವಾರದಿಂದ ಪ್ರತಿ ರಾತ್ರಿ ೯ ಗಂಟೆಗೆ ನಾಗಿಣಿಯ ಹೊಸ ಆರ್ಭಟವನ್ನು ಕರ್ನಾಟಕದ ಜನತೆ ಕಣ್ತುಂಬಿಕೊಳ್ಳಲಿzರೆ. ನಾಗಿಣಿ ಭಾಗ ಒಂದರಲ್ಲಿದ್ದ  ಗ್ರಾಫಿಕ್ಸ್ ವೈಭವ ಇಲ್ಲಿ ದುಪ್ಪಟ್ಟಾಗುತ್ತಿದೆ. ಕನ್ನಡದಲ್ಲಿ ಇದೇ ಮೊದಲಬಾರಿಗೆ ಅದ್ದೂರಿ ಗ್ರಾಫಿಕ್ಸ್‌ನ ಕೈಚಳಕವನ್ನು ಇಲ್ಲ ಕಾಣನಹುದಾಗಿದೆ. ಈಗಾಗಲೇ ಪ್ರಸಾರವಾಗುತ್ತಿರುವ ಪ್ರೋಮೋಗಳಲ್ಲಿ ಇದು ಕಾಣುತ್ತಿದೆ. ಕಿರುತೆರೆಯಿಂದಲೇ ಫೇಮಸ್ ಆದ ನಟ ಜಯರಾಮ್ ಕಾರ್ತಿಕ್(ಜೆಕೆ) ಈ ಭಾಗದ ಪ್ರಮುಖ ಆಕರ್ಷಣೆ. ಇವರ ಜೊತೆ ಹಿರಿತೆರೆಯ ನಟ, ನಿರ್ದೇಶಕ ಮೋಹನ್ ಮತ್ತೊಂದು ಆಕರ್ಷಣೆ.

ಈಗಾಗಲೇ ಕಿರುತೆರೆಯಲ್ಲಿ ಹೆಸರಾಗಿರುವ ನಮ್ರತಾ ಇಲ್ಲಿ ಹೊಸ ನಾಗಿಣಿಯಾಗಿ ಮಿಂಚಲಿzರೆ, ನಿನಾದ್, ಪ್ರಣವ್, ಜೆನ್ನಿಫರ್, ಸೂರ್ಯಕಿರಣ್ ಮುಂತಾದವರು ಉಳಿದ ಪಾತ್ರಗಳಲ್ಲಿದ್ದಾರೆ. ಸಿನಿಮಾ ಸ್ಟೈಲ್ ಮೇಕಿಂಗ್ ನಾಗಿಣಿ ಭಾಗ ಎರಡರ ಪ್ರಮುಖ ಆಕರ್ಷಣೆ. ಕೊಡಚಾದ್ರಿ, ಚಿಕ್ಕಮಂಗಳೂರು, ಮೂಡಬಿದ್ರೆ ಸಕಲೇಶಪುರ, ಕೋಟಿಲಿಂಗದಂಥ ಪ್ರವಾಸಿ ತಾಣಗಳಲ್ಲಿ ನಾಗಿಣಿಯ ಚಿತ್ರೀಕರಣ ನಡೆಸಲಾಗುತ್ತಿದೆ. ಈಗಾಗಲೇ ಸುಮಾರು ಒಂದು ಕೋಟಿ ರೂ. ವೆಚ್ಚದ ಅದ್ದೂರಿಸೆಟ್ ನಾಗಿಣಿಗಾಗಿಯೇ ಸಿದ್ಧವಾಗಿದೆ. ಅಲ್ಲದೆ ಪ್ಯಾಂಟಮ್ ಕ್ಯಾಮರಾದಲ್ಲಿ ನಾಗಿಣಿಯ ಅಷ್ಟೂ ವೈಭವವನ್ನು ಸೆರೆಹಿಡಿಯಲಾಗುತ್ತಿದೆ. ಮನುಷ್ಯನ ದುರಾಸೆ, ಅಹಂಕಾರ, ದೈವದ ಬಗ್ಗೆ ಆತನಿಗಿರುವ ನಿರ್ಲಕ್ಷೆ ಹಾಗೂ ಅದರಿಂದ ಆತ ಅನುಭವಿಸುವ ನೋವು, ನಿರಾಸೆಗಳನ್ನು ಹೇಳೋ ಪ್ರಯತ್ನವನ್ನ ನಾಗಿಣಿ-೨ರ ಮೂಲಕ ಹೇಳಲಾಗುತ್ತಿದೆ.

ಇದೊಂದು ಕಾಲ್ಪನಿಕ ಕಥೆಯಾಗಿದ್ದು, ಅದಕ್ಕೆ  ಈಗಿನ ಕಾಲಘಟ್ಟದ ನೈಜ ದೃಶ್ಯಗಳನ್ನು ಹೆಣೆದು ಪ್ರೇPಕರ ಮುಂದಿಡಲಿzವೆ. ಯಾವುದೇ ಮೂಡನಂಬಿಕೆಗಳನ್ನು ಪ್ರೋತ್ಸಾಹಿಸದೆ, ಕೇವಲ ಮನರಂಜನೆಯನ್ನು ಮಾತ್ರ  ದೃಷ್ಟಿಯಲ್ಲಿಟ್ಟುಕೊಂಡು ಇಡೀ ಧಾರಾವಾಹಿಯನ್ನು ರೂಪಿಸಲಾಗಿದೆ. ತನ್ನವರನ್ನು ನಾಗಮಣಿಯ ದುರಾಸೆಯಿಂದ ಕಳೆದುಕೊಂಡ ನಾಗಿಣಿ, ನಾಗಲೋಕದಿಂದ ಭೂಮಿಗೆ ಬಂದು ಸೇಡು ತೀರಿಸಿಕೊಳ್ಳುವ ತೀರ್ಮಾನ ತೆಗೆದುಕೊಳ್ಳುತ್ತಾಳೆ. ಭೂಲೋಕಕ್ಕೆ ಬಂದಮೇಲೆ ನಾಗಿಣಿ ಅನುಭವಿಸುವ ಮಾನವ ಸಹಜ ಸನ್ನಿವೇಶಗಳೇ ನಾಗಿಣಿಯ ಪ್ರಮುಖ ಕಥಾಹಂದರ ಎಂದು ಜೀ ಕನ್ನಡ ವಾಹಿನಿಯ ರಾಘವೇಂದ್ರ ಹುಣಸೂರು ಅವರು  ಹೇಳುತ್ತಾರೆ.  ಈಗಾಗಲೇ ಕಿರುತೆರೆಯಲ್ಲಿ ಸಾಕಷ್ಟು ಜನಪ್ರಿಯ ಧಾರಾವಾಹಿಗಳನ್ನು ನೀಡಿದ ರಾಮ್‌ಜೀ ಈ ಧಾರಾವಾಹಿಯ ನಿರ್ಮಾಣ ಮತ್ತು ಪ್ರಧಾನ ನಿರ್ದೇಶನದ ಹೊಣೆ ಹೊತ್ತಿzರೆ. ಇದೇ ಫೆ. 17 ರಿಂದ ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ೯ಕ್ಕೆ ನಾಗಿಣಿ-2 ಪ್ರಸಾರವಾಗಲಿದೆ.

This Article Has 1 Comment
  1. Pingback: DevOps services company

Leave a Reply

Your email address will not be published. Required fields are marked *

Translate »
error: Content is protected !!