ಜೀ ಕನ್ನಡದಲ್ಲಿ ಡಿಸೆಂಬರ್ 20ರಂದು ಸರಿಗಮಪ ಸೀಸನ್ 17 ಗ್ರಾಂಡ್ ಫಿನಾಲೆ

ಜನವರಿ ತಿಂಗಳಲ್ಲಿ ಸರಿಗಮಪ ಸೀಸನ್-17 ಪ್ರಾರಂಭವಾದಾಗ ಅಭೂತಪೂರ್ವ ಪ್ರತಿಕ್ರಿಯೆ ಲಭಿಸಿತ್ತು. 10,000ಕ್ಕೂ ಹೆಚ್ಚು ಮಂದಿ ಮೆಗಾ ಆಡಿಷನ್ ನಲ್ಲಿ ಭಾಗವಹಿಸಿದ್ದರು. ಅವರಲ್ಲಿ ಶ್ರೇಷ್ಠ 30 ಮಂದಿ ಗಾಯಕರನ್ನು ಆಯ್ಕೆ ಮಾಡುವುದು ನಿಜಕ್ಕೂ ಸವಾಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಈ ರಿಯಾಲಿಟಿ ಶೋ ನಂತರ ಪ್ರಾರಂಭವಾಗಿದ್ದು ಈ ಅವಧಿಯಲ್ಲಿ ಡಿಜಿಟಲ್ ಮಾಧ್ಯಮದಲ್ಲಿ ಮನರಂಜನೆ ಮುಂದುವರಿದಿತ್ತು. ಸಾಮಾಜಿಕ ಮಾಧ್ಯಮದಲ್ಲಿ ಮನರಂಜನೆಯನ್ನು ಮುಂದುವರಿಸಿದ್ದ ಸರಿಗಮಪ ತಂಡವು ನಂತರ ಜುಲೈ ತಿಂಗಳಲ್ಲಿ ಮತ್ತೆ ಟಿ.ವಿ. ಪ್ರಸಾರ ಪ್ರಾರಂಭಿಸಿತು. ಶ್ರೀನಿಧಿ ಶಾಸ್ತ್ರಿ ಕ್ವಾರ್ಟರ್ ಫೈನಲ್ ಕಂತಿನಿಂದ ನೇರವಾಗಿ ಫಿನಾಲೆ ತಲುಪಿದ ಹೆಗ್ಗಳಿಕೆ ಪಡೆದಿದ್ದಾರೆ.

ಡಿಸೆಂಬರ್ 20ರಂದು ಸರಿಗಮಪ ಗ್ರಾಂಡ್ ಫಿನಾಲೆ ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಹಾಗೂ ನಿರೀಕ್ಷೆಯ ಸರಿಗಮಪ ಸೀಸನ್ 17 ಸಮಾರೋಪದ ಹಂತಕ್ಕೆ ಬಂದಿದೆ. ಸೀಸನ್ ನಿಂದ ಸೀಸನ್ ಗೆ ಅತ್ಯಂತ ಜನಪ್ರಿಯವಾಗುತ್ತಿರುವ ಕನ್ನಡಕ್ಕೆ ಅಪರೂಪದ ಗಾಯಕರನ್ನು ನೀಡುತ್ತಿರುವ ಸರಿಗಮಪ ಕಾರ್ಯಕ್ರಮದ ವಿಜೇತರು ಯಾರಾಗುತ್ತಾರೆ ಎಂಬ ಕುತೂಹಲ ಮೂಡಿಸಿದೆ. ಜನರೂ ಅತ್ಯಂತ ನಿರೀಕ್ಷೆಯಿಂದ ಸರಿಗಮಪ ವಿಜೇತರಿಗೆ ಬೆಂಬಲ ಸೂಚಿಸಲು ಸಜ್ಜಾಗಿದ್ದಾರೆ.

ಖ್ಯಾತ ಸಂಗೀತ ನಿರ್ದೇಶಕ ಡಾ.ಹಂಸಲೇಖ, ಖ್ಯಾತ ಗಾಯಕರಾದ ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್ ಮತ್ತು ಸಂಗೀತ ಸಂಯೋಜಕ ಅರ್ಜುನ್ ಜನ್ಯಾ ಕಾರ್ಯಕ್ರಮದಾದ್ಯಂತ ಅಭ್ಯರ್ಥಿಗಳಿಗೆ ಉತ್ಸಾಹ ತುಂಬಿದ್ದು ಶ್ರೇಷ್ಠ ಗಾಯಕರನ್ನು ಆಯ್ಕೆ ಮಾಡಲಿದ್ದಾರೆ.ಎಂದಿನಂತೆ ಖ್ಯಾತ ನಿರೂಪಕಿ ಅನುಶ್ರೀ ತಮ್ಮ ಅರಳು ಹುರಿದ ಮಾತುಗಳಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಾರೆ.

ಜೀ ಕನ್ನಡದ ಸರಿಗಮಪ ಸೀಸನ್ 17 ಗ್ರಾಂಡ್ ಫಿನಾಲೆ ತಲುಪಿದೆ. ಕನ್ನಡದ ಅತ್ಯಂತ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಒಂದಾಗಿರುವ ಸರಿಗಮಪ ಗ್ರಾಂಡ್ ಫಿನಾಲೆಯಲ್ಲಿ ವಿಜೇತರನ್ನು ಆಯ್ಕೆ ಮಾಡಲು ವಿವಿಧ ಸಂಕೇತಗಳನ್ನು ನೀಡಲಾಗಿದೆ. ಜನರು ಅವರಿಗೆ ನೀಡಲಾದ ಕೋಡ್ ಸಂಖ್ಯೆಗೆ ಮತ ನೀಡುವ ಮೂಲಕ ವಿಜೇತರನ್ನು ಆಯ್ಕೆ ಮಾಡಬಹುದು.
ಅಶ್ವಿನ್ ಶರ್ಮಾ(ASHW), ಶರಧಿ ಪಾಟೀಲ್(SHAR), ಕಂಬದ ರಂಗಯ್ಯ(KAMB), ಕಿರಣ್ ಪಾಟೀಲ್(KIRA), ಶ್ರೀನಿಧಿ ಶಾಸ್ತ್ರಿ(SHRE) ಟೈಪ್ ಮಾಡಿ ಅವರಿಗೆ ವೀಕ್ಷಕರು ತಮ್ಮ ಮತ ನೀಡಿ ಆಯ್ಕೆ ಮಾಡಬಹುದಾಗಿದೆ.
ಸರಿಗಮಪ -17 ಗ್ರಾಂಡ್ ಫಿನಾಲೆ ಡಿಸೆಂಬರ್ 20, 2020ರಂದು ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!