ಜೀ಼ ಕನ್ನಡದಲ್ಲಿ 800 ಕಂತುಪೂರೈಸಿದ “ಬ್ರಹ್ಮಗಂಟು”

ಜೀ಼ಕನ್ನಡ ವಾಹಿನಿಯ ಅತ್ಯಂತ ಜನಪ್ರಿಯ ಧಾರಾವಾಹಿ “ಬ್ರಹ್ಮಗಂಟು”ಇದೀಗ 800 ಕಂತುಗಳನ್ನುಪೂರೈಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ದಪ್ಪಗಿದ್ದರೂ ಮಗುವಿನ ಮುಗ್ಧಮನಸ್ಸು ಹೊಂದಿದ ಚಿತ್ರದ ನಾಯಕಿ ಗೀತಾ ಪ್ರೀತಿಗೆ ಆಕೆಯ ಪತಿ ಲಕ್ಕಿ ಮಾರು ಹೋಗುವ, ಈ ದಾರಿಯಲ್ಲಿ ಅವರು ಎದುರಿಸುವ ಕಷ್ಟ ಸುಖಗಳ ಈ ಧಾರಾವಾಹಿಯನ್ನು ಕನ್ನಡ ಕಿರುತೆರೆ ವೀಕ್ಷಕರು ಅಪಾರವಾಗಿ ಸ್ವಾಗತಿಸಿ, ಮೆಚ್ಚಿಹಾರೈಸಿದ್ದಾರೆ.

ಮೇ 8,2017ರಲ್ಲಿ ಪ್ರಾರಂಭವಾದ ಈ ಧಾರಾವಾಹಿ ಸತತವಾಗಿ ಮೂರು ರ‍್ಷಗಳು ಕಳೆದರೂ ಯಶಸ್ವಿಯಾಗಿ ಪ್ರಸಾರವಾಗುತ್ತಿದೆ.
ಶೃತಿ ನಾಯ್ಡು ನರ‍್ಮಾಣ, ನರ‍್ದೇಶನ ದ ಈ ಧಾರಾವಾಹಿಯಲ್ಲಿ ಗೀತಾ ಆಗಿ ಗೀತಾ ಭಾರತಿ ಭಟ್ಮನೋಜ್ಞ ಅಭಿನಯ ನೀಡಿ ವೀಕ್ಷಕರ ಮನಗೆದ್ದಿದ್ದಾರೆ. ಭರತ್ಬೋಪಣ್ಣಲಕ್ಕಿಯಾಗಿ, ಗೀತಾ ಪತಿಯಾಗಿ ಉತ್ತಮ ಅಭಿನಯ ನೀಡಿದ್ದಾರೆ. ನರಸಿಂಹನಾಗಿ ಹಿರಿಯ ಟಿ.ಎಸ್.ನಾಗಾಭರಣ, ಸುಮತಿಯಾಗಿ ಸ್ವಾತಿ, ದತ್ತನಾಗಿ  ರಕ್ಷ ಗೌಡ, ಪಿಂಕಿಯಾಗಿ ಶೋಭಿತಾ ಶಿವಣ್ಣ, ಗಿರಿಜಾ ಪಾತ್ರದಲ್ಲಿ ಗಾಯತ್ರಿ ಪ್ರಭಾಕರ್, ಪ್ರಣತಿಯಾಗಿ ಯುಕ್ತಿ ನಾಯ್ಡು ಹಾಗೂ ವೀಣಾರಾವ್ ನಟಿಸಿದ್ದಾರೆ.

ಧಾರಾವಾಹಿಯ ಜನಪ್ರಿಯತೆ ಕುರಿತು ಜೀ಼ ಕನ್ನಡದ ಬ್ಯುಸಿನೆಸ್ ಹೆಡ್  ರಾಘವೇಂದ್ರ ಹುಣಸೂರು, “ಬ್ರಹ್ಮಗಂಟು ಜೀ಼ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು. ಈ ಧಾರಾವಾಹಿಯಲ್ಲಿನ ಗೀತಾ ನಮ್ಮನಡುವಿನಲ್ಲಿರುವ ಎಷ್ಟೋ ಮಹಿಳೆಯರ ಪ್ರತಿನಿಧಿ. ಎಷ್ಟೋ ಯುವತಿಯರು ಈ ಪಾತ್ರದಲ್ಲಿ ತಮ್ಮನ್ನು ಕಂಡಿದ್ದಾರೆ. ಗೀತಾ ಹಾಗೂ ಲಕ್ಕಿಯ ಜೀವನ ಹಲವರಿಗೆ ಮರ‍್ಗ ತೋರಿದೆ. ಧಾರಾವಾಹಿಯ ನಿಜ ಜೀವನಕ್ಕೆ ಹತ್ತಿರವಾದ ಕಥಾ ನಿರೂಪಣೆ ಈ ಧಾರಾವಾಹಿಯ ಯಶಸ್ಸಿಗೆ ಕಾರಣ. ಇದೀಗ ೮೦೦ ಕಂತುಗಳನ್ನು ಪೂರೈಸಿದ ಧಾರಾವಾಹಿಯ ನಿರ್ಮಾಪಕಿ ಶೃತಿ ನಾಯ್ಡು ಅವರಿಗೆ ನಮ್ಮ ಕೃತಜ್ಞತೆಗಳು.

ನಮ್ಮ ಎಲ್ಲ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳನ್ನು ಆದರಿಸಿ ಹಾರೈಸುತ್ತಿರುವ ಕನ್ನಡ ಕಿರುತೆರೆ ವೀಕ್ಷಕರಿಗೂ ನನ್ನ ವಂದನೆಗಳು”ಎಂದರು.

This Article Has 2 Comments
  1. Pingback: Digital Transformation companies

  2. Pingback: sex determination system of birds

Leave a Reply

Your email address will not be published. Required fields are marked *

Translate »
error: Content is protected !!