2006ರಲ್ಲಿ ಕನ್ನಡ ಜೀ ವಾಹಿನಿ ಶುರುವಾಗಿ ಇಂದು ಟಿಆರ್‍ಪಿದಲ್ಲಿ ನಂ.1 ಸ್ಥಾನ ಗಳಿಸಿಕೊಂಡಿದೆ. ವಾಹಿನಿಗೆ ಹದಿಮೂರು ವರ್ಷ ತುಂಬಿದ ಶುಭ ಸಂದರ್ಭದಲ್ಲಿ ಸಂಸ್ಥೆಯು ಧಾರವಾಹಿಗಳ ನಿರ್ಮಾಪಕರುಗಳನ್ನು ಗೌರವಿಸಲಾಯಿತು. ಅತಿಥಿಯಾಗಿ ಆಗಮಿಸಿದ್ದ ಜಗ್ಗೇಶ್ ಎಂದಿನಂತೆ ಹಳೆಯ ದಿನಗಳನ್ನು ನೆನಪು ಮಾಡಿಕೊಂಡು, ವಾಹಿನಿಯು ಹಲವು ಪ್ರತಿಭೆಗಳನ್ನು ಪರಿಚಯಿಸುತ್ತಿದೆ. ಹಿರಿತರೆಯಲ್ಲಿ ತಮ್ಮ ಪ್ರಭಾವ ತೋರಿಸಿದರೆ ಹೆಚ್ಚು ಜನರಿಗೆ ತಲುಪುವುದಿಲ್ಲ. ಇಂತಹ ಚಾನಲ್‍ಗಳ ಮೂಲಕ ನಮ್ಮಂತ ಕಲಾವಿದರು ಮನ-ಮನೆಗಳಲ್ಲಿ ತಲುಪಿದ್ದೇವೆ. ಇದಕ್ಕೆ ಚಿರಋಣಿಯಾಗಿದ್ದೇವೆಂದು ಆಂಗಿಕ ಭಾಷೆಯಲ್ಲಿ ಮಾತನಾಡಿ ನಗಿಸಿದರು.
ಅಮೇರಿಕಾದವರಿಗೆ ಹದಿಮೂರು ಕೆಟ್ಟ ಸಂಖ್ಯೆ. ನಮಗೆ ಇದು ಒಳ್ಳೆಯದೆಂದು ಹೇಳಿದ ಡಾ.ಹಂಸಲೇಖಾ ‘ಓಂ’ ಚಿತ್ರದ ಸಂದರ್ಭದಲ್ಲಿ ಉಪೇಂದ್ರ ಸನ್ನಿವೇಶಗಳನ್ನು ಯಾವ ರೀತಿ ಚಿತ್ರಿಸಲಾಗುತ್ತದೆಂದು ಡಾ.ರಾಜ್‍ಕುಮಾರ್‍ಗೆ ಹೇಳಿದ ಘಟನೆಯನ್ನು ನೆನಪಿಸಿಕೊಂಡು, ಇಂದು ವಾಹಿನಿಯು ಒಂದು ಆಗಿರುವುದು ದೊಡ್ಡದಲ್ಲ. ಒಂದಾಗಿರೋದು ದೊಡ್ಡ ವಿಷಯವಾಗಿದೆ ಎಂದರು.
ವಿಕೆಂಡ್ ವಿಥ್ ರಮೇಶ್ ಕಾರ್ಯಕ್ರಮ ನೆಡೆಸುವಂತೆ ಮಾತು ಶುರುಮಾಡಿದ ರಮೇಶ್‍ಅರವಿಂದ್ ಪ್ರೋಮೋ ಸಿದ್ದಪಡಿಸಿದ ತಂತ್ರಜ್ಘರ ಕೆಲಸ ಸೂಪರ್. ಟೆಕ್ಕಿ ಕಂಪೆನಿಗಳು ಚೆಕ್‍ಲಿಸ್ಟ್ ಮಾಡುವಂತೆ ಇಲ್ಲಿನವರು ಪ್ರತಿಯೊಂದನ್ನು ಜಾಗರೂಕರಾಗಿ ನಿರ್ವಹಿಸುತ್ತಾರೆ. ಹಿರಿಯರು,ಕಿರಿಯರು ಅಂತ ನೋಡದೆ ಎಲ್ಲಾ ಕೆಲಸವನ್ನು ಚೆನ್ನಾಗಿ ಮಾಡುತ್ತಾರೆ, ತಂಡದಲ್ಲಿ ಶ್ರದ್ದೆ, ಶಿಸ್ತು, ಗೆಳತನ ಇರುವುದರಿಂದಲೇ ಮೊದಲ ಸ್ಥಾನಕ್ಕೆ ಬಂದಿದೆ ಅಂತ ಮಾತಿಗೆ ವಿರಾಮ ಹಾಕಿದರು.
ಮುಖ್ಯಮಂತ್ರಿಚಂದ್ರು, ಆಶಾಲತಾ, ಸೃಜನ್‍ಲೋಕೇಶ್, ಸುನೇತ್ರಾಪಂಡಿತ್, ಧಾರಾವಾಹಿ ಕಲಾವಿದರು ಸಂಭ್ರಮದಲ್ಲಿ ಪಾಲ್ಗೋಂಡಿದ್ದರು. ಪ್ರಾರಂಭದಲ್ಲಿ ಚಾನಲ್ ಮುಖ್ಯಸ್ಥ ರಾಘವೇಂದ್ರಹುಣಸೂರು ಜೀ ನಡೆದು ಬಂದ ದಾರಿಯನ್ನು ಮೆಲುಕು ಹಾಕಿ ಇದೇ ಪ್ರೋತ್ಸಾಹ ಮುಂದೆಯೂ ನೀಡಬೇಕೆಂದು ಕೋರಿದರು. ಕೊನೆಯಲ್ಲಿ ಷಾಂಪೇನು ತೆರೆದು, ಕೇಕ್ ಕತ್ತರಿಸುವುದರೊಂದಿಗೆ ಸುಂದರ ಕಾರ್ಯಕ್ರಮಕ್ಕೆ ಮಂಗಳ ಹಾಡಲಾಯಿತು.
Pingback: barbie sex dolls