ಕೊರೊನಾ ಭಯದಿಂದ ಎಲ್ಲೆಡೆ ಚಟುವಟಿಕೆಗಳು ಬಂದ್ ಆಗಿವೆ. ಥಿಯೇಟರ್ಗಳು ಕೂಡಾ ಬಂದ್ ಆಗಿವೆ. ಸದ್ಯದ ಪರಿಸ್ಥಿತಿಯಲ್ಲಿ ಮಾರ್ಚ್ 31 ವರೆಗೂ ಬಂದ್ ತಿಳಿದಿರುವ ವಿಚಾರ. ಆದರೆ ಚಿತ್ರಮಂದಿರಗಳು ಬಂದ್ ಆದರೇನಂತೆ. ಟಿವಿ ಇದೆಯಲ್ಲ, ಜನರು ಈಗ ಮನೆಯಲ್ಲೇ ಕುಳಿತು ಸಿನಿಮಾ ನೋಡಬಹುದು.
ಇನ್ನು ವೀಕ್ಷಕರಿಗಾಗಿ ಜೀ ಪಿಕ್ಚರ್ಸ್ ಮುಂದಿನ 12 ದಿನಗಳಿಗೆ 12 ಹೊಸ ಕನ್ನಡ ಚಿತ್ರಗಳನ್ನು ವೀಕ್ಷಕರಿಗಾಗಿ ಪ್ರಸಾರ ಮಾಡುತ್ತಿದೆ. ಸದ್ಯಕ್ಕೆ ಮೂರು ಸಿನಿಮಾಗಳ ಪಟ್ಟಿಯನ್ನು ಬಹಿರಂಗ ಮಾಡಿದೆ. ಜೀ ವಾಹಿನಿ ಪ್ರಕಾರ ಇವೆಲ್ಲಾ ವರ್ಲ್ಡ್ ಟೆಲಿವಿಜನ್ ಪ್ರೀಮಿಯರ್ ಸಿನಿಮಾಗಳು. ಜೀ ಪಿಕ್ಚರ್ ಪ್ರಾರಂಭ ಆಗಿದ್ದೇ ಈ ವರ್ಷ ಮಾರ್ಚ್ 1ಕ್ಕೆ. ಈ ವಾಹಿನಿಯಲ್ಲಿ 350ಕ್ಕೂ ಹೆಚ್ಚು ಕನ್ನಡ ಚಿತ್ರಗಳ ಸಂಗ್ರಹಣೆ ಇದೆ. ಥ್ರಿಲ್ಲರ್, ಆ್ಯಕ್ಷನ್, ಕಾಮಿಡಿ, ಸೆಂಟಿಮೆಂಟ್, ರೊಮ್ಯಾಂಟಿಕ್, ಕೌಟುಂಬಿಕ ಸಿನಿಮಾಗಳನ್ನು ಜೀ ಪಿಕ್ಚರ್ಸ್ ಪಟ್ಟಿ ಮಾಡಿದೆ. ಮಾರ್ಚ್ 19 – ‘ಜಾಲಿ ಬಾರು ಪೋಲಿ ಹುಡುಗರು’ ಸಿನಿಮಾ ಪ್ರಸಾರವಾಗುತ್ತಿದೆ. ಈ ಚಿತ್ರವನ್ನು ಕಾರಂಜಿ ಶ್ರೀಧರ್ ನಿರ್ದೇಶಿಸುತ್ತಿದ್ದು ಇದರಲ್ಲಿ ಡಾರ್ಲಿಂಗ್ ಕೃಷ್ಣ ಹಾಗೂ ಮಾನಸಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ.
ಮಾರ್ಚ್ 20 ರಂದು ಹಾರರ್ ಅಂಶವುಳ್ಳ ‘ಒಂದು ಕಥೆ ಹೇಳ್ಳಾ’ ಸಿನಿಮಾ ಇದೆ. ಗಿರೀಶ್ . ಜಿ ಈ ಚಿತ್ರವನ್ನು ನಿರ್ದೇಶಿಸಿದ್ದು ವೀಕೆಂಡ್ಗಾಗಿ ಹೊರಗೆ ಹೋಗುವ ಐವರು ಸ್ನೇಹಿತರು ಏನೆಲ್ಲಾ ಸಮಸ್ಯೆ ಎದುರಿಸಿದ್ದಾರೆ ಎಂಬುದನ್ನು ಸಿನಿಮಾದಲ್ಲಿ ಹೇಳಲಾಗಿದೆ. ಇನ್ನು ಮಾರ್ಚ್ 21 ರಂದು ‘ಕಾಳಿದಾಸ ಕನ್ನಡ ಮೇಷ್ಟ್ರು’ ಪ್ರದರ್ಶನವಾಗಲಿದೆ. ಖ್ಯಾತ ಗೀತರಚನೆಕಾರ ಕವಿರಾಜ್ ನಿರ್ದೇಶನದ ಎರಡನೇ ಸಿನಿಮಾ ಇದು. ನವರಸ ನಾಯಕ ಜಗ್ಗೇಶ್ ಹಾಗೂ ಮೇಘನಾ ಗಾಂವ್ಕರ್ ಅಭಿನಯದ ಈ ಸಿನಿಮಾ ಕಳೆದ ವರ್ಷ ಬಿಡುಗಡೆ ಆಗಿ ಮೆಚ್ಚುಗೆ ಪಡೆದಿತ್ತು
Be the first to comment