ಜೀ಼ಕನ್ನಡ ವಾಹಿನಿಯ ಗಟ್ಟಿಮೇಳ ನಟರೊಂದಿಗೆ ಮೀಟ್-ಅಂಡ್-ಗ್ರೀಟ್

ಜೀ಼ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ‘ಗಟ್ಟಿಮೇಳ’ಮತ್ತು ಅದರ ಪಾತ್ರಗಳಾದ ವೇದಾಂತ್ (ರಕ್ಷಿತ್) ಮತ್ತು ಅಮೂಲ್ಯ(ನಿಶಾ) ಕರ್ನಾಟಕದ ಪ್ರತಿಯೊಂದು ಮನೆಯ ಮಾತಾಗಿದ್ದಾರೆ. ಗಟ್ಟಿಮೇಳ, ಅವರ ಉತ್ಸಾಹಿ ಅಭಿಮಾನಿಗಳಿಗಾಗಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಲು ನಿರ್ಧರಿಸಿ,

ಜೀ಼ಕನ್ನಡದ ಸಾಮಾಜಿಕ ಜಾಲತಾಣದಲ್ಲಿ ರಸಪ್ರಶ್ನೆ ಸ್ಪರ್ಧೆಯನ್ನುಆಯೋಜಿಸಿ ಕನ್ನಡದ ಎಲ್ಲ ವೀಕ್ಷಕರ ಕುತೂಹಲ ಕೆರಳಿಸಿತು. ಆಗಸ್ಟ್ 2ರ ಶುಕ್ರವಾರ ದಂದು ರಸಪ್ರಶ್ನೆ ಸ್ಪರ್ಧೆಯನ್ನು ಮುಕ್ತಾಯ ಗೊಳಿಸಲು ವೇದಾಂತ್ಮತ್ತು ಅಮೂಲ್ಯ ವಿಜೇತರೊಂದಿಗೆ ಮೀಟ್-ಅಂಡ್-ಗ್ರೀಟ್ಅನ್ನು ಬೆಂಗಳೂರಿನ ನಾಗರಭಾವಿಯಲ್ಲಿ ಆಯೋಜಿಸಿದರು.

ಸ್ಪರ್ಧೆಯ ಅನುಸಾರ, ಜೀ಼ಕನ್ನಡ ಸಾಮಾಜಿಕ ಜಾಲತಾಣದಲ್ಲಿ ಪ್ರತಿ ಸಂಚಿಕೆಯ ಕೊನೆಯಲ್ಲಿ ಒಂದು ಪ್ರಶ್ನೆಯನ್ನು ಕೇಳಲಾಗುವುದು. ಸ್ಪರ್ಧಿಗಳು ಸರಿಯಾದ ಉತ್ತರವನ್ನು ‘ಕಾಮೆಂಟ್’ ವಿಭಾಗದಲ್ಲಿ ಉತ್ತರಿಸಬೇಕು. ಈ ಕೆಳಗಿನ ಅದೃಷ್ಟವಿ ಜೇತರು ತಮ್ಮ ಅತ್ಯಂತ ಪ್ರೀತಿಯ ಕಲಾವಿದರಾದ ವೇದಾಂತ್ಮತ್ತು ಅಮೂಲ್ಯ ಅವರೊಂದಿಗೆ ಸಂಜೆ ಕಳೆಯಲು ಅವಕಾಶವನ್ನು ಪಡೆದರು -ಮೇಘು ರಾಧಿಕಾ, ವಿನಯ್, ಮೇಘನಾ ರಾಮಚಂದ್ರ, ಗೌತಮ್ಗೋಪಿನಾಥ್, ಹರಿಣಿಶಂಕರ್, ಅರುಣ್, ಸಂಗೀತ, ಚಂದನಾಭರತ್, ಜಯಶ್ರೀಶೆಟ್ಟಿ, ಜಯಶ್ರೀಪ್ರಸಾದ್, ಭುವನ, ಲಕ್ಷ್ಮಿಶ್ರೀದೀಕ್ಷಿತ್, ಮೇಘಾಸಜ್ಜನ್, ಅರುಣ್, ಸಂತೋಷ್ಮ ತ್ತುಸೌಮ್ಯಕಿರಣ್.

ಪ್ರತಿಯೊಬ್ಬ ಅಭಿಮಾನಿಗಳು ಎಲ್ಲಿಂದ ಬಂದಿದ್ದಾರೆ ಎಂಬುದನ್ನು ಕಂಡುಕೊಳ್ಳುವ ಮೂಲಕ ಸಂವಾದಾತ್ಮಕ ಅಧಿವೇಶನವನ್ನು ಪ್ರಾರಂಭಿಸಿದರು.  ಗಟ್ಟಿಮೇಳ ನಟರಿಗೆ ಮತ್ತು ಧಾರಾವಾಹಿಯ ಗೌರವವಾಗಿ ಸೌಮ್ಯ ಕಿರಣ್ಅವರು ತಾನು ಬರೆದ ಕವಿತೆಯನ್ನು ಓದಿದರು. ಪ್ರಬಲವಾದ ಮಾತುಗಳುಳ್ಳ ಕವಿತೆ, ವೇದಾಂತ್‌ಗೆ ಆ ಕಾಗದದ ತುಣುಕನ್ನು ಅವರ ಅಭಿಮಾನಿಗಳ ಎಲ್ಲ ರೀತಿಯ ಪ್ರೀತಿಯ ನೆನಪಿನಕಾಣಿಕೆಯಾಗಿ ಹಿಡಿದಿಡಲು ಒತ್ತಾಯಿಸಿದವು. ಕುಂದಾಪುರದ ವಿನಯ್ತನ್ನ ಗೆಳತಿಯೊಂದಿಗಿನ ಸಂಬಂಧಕ್ಕೆ, ಪಾತ್ರಗಳನ್ನು ಪರಸ್ಪರ ಸಂಬಂಧಿಸುವ ಮೂಲಕ ಧಾರಾವಾಹಿಗೆ ತನ್ನವೈಯಕ್ತಿಕ ಸಂಪರ್ಕವನ್ನು ಸ್ಪಷ್ಟಪಡಿಸಿದರು. ಸಂತೋಷ್ತನ್ನ ತಾಯಿಯೊಂದಿಗೆ ದೂರದರ್ಶನದಲ್ಲಿ ಒಂದು ಕಂತು ನೋಡಿದ ನಂತರ ಜೀ಼ 5 ಆ್ಯ ಪ್ಅನ್ನು ಡೌನ್‌ಲೋಡ್ಮಾಡುವಮೂಲಕ ಕಾರ್ಯಕ್ರಮದ ಮೇಲಿನ ಪ್ರೀತಿಯನ್ನುಸ್ಥಾಪಿಸಿದರು. ಮನರಂಜನೆಯ ಸಂಜೆ ವಿಜೇತರ ಹಲವಾರು ಪ್ರಶ್ನೆಗಳನ್ನು ಒಳಗೊಂಡಿತ್ತು. ವೇದಾಂತ್ಅ ಮೂಲ್ಯಳನ್ನು ಸಮಯಕ್ಕೆ ತಕ್ಕಂತೆ ಕೀಟಲೆ ಮಾಡಿದ ಮನರಂಜನಾ ಅಂಶಗಳು, ವಿಜೇತರಿಗೆ ನಿಜ ಜೀವನದಲ್ಲಿ ಧಾರಾವಾಹಿ ಪ್ರದರ್ಶನದ ಅನುಭವವನ್ನುನೀಡಿತು. ಅನಾವಶ್ಯ ಕಥೆ ಎಳೆಯುವುದನ್ನು ಒಳಗೊಂಡಿರದ ಗಟ್ಟಿ ಮೇಳದಂತಹ ಧಾರಾವಾಹಿಗೆ ಸಾಕ್ಷಿಯಾಗಲು ಎಲ್ಲಾ ವಿಜೇತರು ಸರ್ವಾನುಮತದಿಂದ ಒಪ್ಪಿದರು.

ಜೀ಼ಕನ್ನಡ ವಾಹಿನಿಯ ಇನ್‌ಸ್ಟಾಗ್ರಾಮಲ್ಲಿ ಮೀಟ್-ಅಂಡ್-ಗ್ರೀಟ್ಅನ್ನುಲೈವ್ಆಗಿಸೆರೆಹಿಡಿಯಲಾಗಿದೆ. ವೇದಾಂತ್- ಅಮುಲ್ಯರ ಅದ್ಭುತ ಪ್ರದರ್ಶನಕ್ಕಾಗಿ, ವಿಜೇತರು ನಟರಿಗೆ ಕೃತಜ್ಞತೆ ಯನ್ನು ವ್ಯಕ್ತಪಡಿಸುತ್ತ, ತಂಡವು 500 ಸಂಚಿಕೆಗಳಮೈಲಿಗಲ್ಲನ್ನುದಾಟಲಿಎಂದುಹಾರೈಸಿದರು. ತೆರೆಯಮೇಲಿನಪ್ರದರ್ಶನವನ್ನುಅದ್ಭುತಬ್ಯಾಕ್-ಎಂಡ್ತಂಡವು ನೇರವಾಗಿ ಪ್ರಭಾವಿಸುತ್ತದೆ ಎಂದುವೇದಾಂತ್ಮತ್ತು ಅಮೂಲ್ಯಒಪ್ಪಿಕೊಂಡಿದ್ದಾರೆ. ತಾಂತ್ರಿಕತಂಡವುಹೆಚ್ಚುಭರವಸೆಹೊಂದಿದರೆ, ಪ್ರೇಕ್ಷಕರಿಗೂಉತ್ತಮಅನುಭವವಿರುತ್ತದೆಎಂದುವೇದಾಂತ್- ಅಮೂಲ್ಯನಂಬುತ್ತಾರೆ. ಅತ್ಯುತ್ತಮ ತಂಡದೊಂದಿಗೆ ನಂಬಲಾಗದ ಪ್ರದರ್ಶನವನ್ನು ನಿಯೋಜಿಸಿದ್ದಕ್ಕಾಗಿ ಅವರು ಜೀ಼ ಕನ್ನಡ ವಾಹಿನಿಗೆ ಧನ್ಯವಾದ ಅರ್ಪಿಸಿದರು. ವೇದಾಂತ್ಮತ್ತು ಅಮೂಲ್ಯ ಅವರು ಸಂಜೆ ಅಂತ್ಯದ ವೇಳೆಗೆ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಸ್ಪರ್ಧೆಯು ಮುಂದುವರಿಯುತ್ತದೆ ಮತ್ತು ಎರಡನೇ ಗುಂಪಿನ ಅದೃಷ್ಟ ವಿಜೇತರೊಂದಿಗೆ ತೊಡಗಿಸಿಕೊಳ್ಳಲು ಅವರು ಎದುರು ನೋಡುತ್ತಿದ್ದಾರೆ ಎಂದು ಘೋಷಿಸಿದರು.

 

Be the first to comment

Leave a Reply

Your email address will not be published. Required fields are marked *

Translate »
error: Content is protected !!