ಜೀ ಕನ್ನಡ ಕರ್ನಾಟಕದಲ್ಲಿ ಮಕ್ಕಳ ದಿನಾಚರಣೆಯನ್ನು ‘ಬಣ್ಣಿಸು’ ಬಯಸಿದ ಚಿತ್ರ ಬರೆಯೋಣ ದೊಂದಿಗೆ ಆಚರಿಸಿದೆ
ಬೆಂಗಳೂರು, 12 ನೇ ನವೆಂಬರ್ 2019: ಮಕ್ಕಳ ದಿನಾಚರಣೆ 2019 ರ ಅಂಗವಾಗಿ ಜೀ ಕನ್ನಡದ ಪ್ರತಿಭೆಗಳು ಒಂದು ದಿನವನ್ನು ಸರ್ಕಾರಿ ಶಾಲಾ ಮಕ್ಕಳೊಂದಿಗೆ ಕಳೆಯುವ ಮೂಲಕ ನವೆಂಬರ್ 11, 2019 ರಂದು ಮಂಡ್ಯ ಮತ್ತು ಗದಗ ನಗರಗಳಿಗೆ ಭೇಟಿ ಮಾಡುವ ಮೂಲಕ ಕಾತರತೆಯಿಂದ ನಿರೀಕ್ಷಿಸುವಂತೆ ಮಾಡಿತ್ತು. ಕರ್ನಾಟಕದಾದ್ಯಂತ ಕನ್ನಡದ ಜನಪ್ರಿಯ ನಂ 1 ಮನರಂಜನಾ ವಾಹಿನಿಯಾದ, ಜೀ ಕನ್ನಡ, 2019 ರ ವಿಶೇಷ ಮಕ್ಕಳ ದಿನಾಚರಣೆ ಅಭಿಯಾನವಾದ, ಬಣ್ಣಿಸು ಮೂಲಕ ಉತ್ತರ ಮತ್ತು ದಕ್ಷಿಣ ಕರ್ನಾಟಕದಾದ್ಯಂತ ನಮ್ಮ ಭವಿಷ್ಯದ ಪೀಳಿಗೆಯೊಂದಿಗೆ ಯಶಸ್ವಿಯಾಗಿ ತೊಡಗಿತ್ತು. ಅಭಿಯಾನದ ಉಪಶೀರ್ಷಿಕೆಯನ್ನು ವಿಸ್ತರಿಸಿದರೆ, ಬಣ್ಣಿಸು ಬಯಸಿದ ಚಿತ್ರ ಬರೆಯೋಣ ಎಂದರೆ ’ನಮ್ಮ ಇಚ್ಛೆಗಳನ್ನು ಚಿತ್ರರೂಪಕ್ಕೆ ತರೋಣ’ ಎಂದರ್ಥ, ಇದು ಯುವಪೀಳಿಗೆಗೆ ಸ್ಫೂರ್ತಿ ನೀಡಿ ಅವರೊಳಗಿನ ಪ್ರತಿಭೆಯನ್ನು ಸಾಧಿಸಲು ನೆರವಾಗಲಿದೆ. ಮನರಂಜನೆ ಮತ್ತು ಶಿಕ್ಷಣದ ಶುದ್ಧ ಮಿಶ್ರಣವಾಗಿರುವ ಇದು ಸೃಜನಾತ್ಮಕತೆಗೆ ಪ್ರಾಮುಖ್ಯತೆ ನೀಡುವುದರೊಂದಿಗೆ ನಮ್ಮ ಭೂಮಿಯನ್ನು ರಕ್ಷಿಸುವ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ’ಪರಿಸರ ರಕ್ಷಿಸಿ’ ತತ್ವ ಆಧರಿಸಿದ ಚಿತ್ರಕಲಾ ಸ್ಪರ್ಧೆ ಆಯೋಜಿಸಿತ್ತು..
ಮಂಡ್ಯ ಮತ್ತು ಗದಗದ ಶಾಲಾ ಮಕ್ಕಳು ತಮ್ಮ ಪ್ರತಿಭೆ ಮತ್ತು ಸೃಜನಾತ್ಮಕತೆಯನ್ನು ವ್ಯಕ್ತಪಡಿಸುವ ಈ ಅಪರೂಪದ ಅವಕಾಶ ನೀಡುತ್ತಿರುವ ಜೀ ಕನ್ನಡದ ಬಣ್ಣಿಸು ಚಿತ್ರಕಲಾ ಸ್ಪರ್ಧೆಗೆ ನೋಂದಾಯಿಸುವ ಮೂಲಕ ತಮ್ಮ ದಿನವನ್ನು ಆರಂಭಿಸಿದ್ದು ಇದು ಸರ್ಕಾರಿ ಶಾಲಾ ಮಕ್ಕಳಿಗೆ ಅದ್ಭುತ ದಿನವಾಗಿತ್ತು. ಜೀ ಕನ್ನಡ ತನ್ನ ಪ್ರತಿಭಾ ವೇದಿಕೆಗೆ ಹೆಸರುವಾಸಿಯಾಗಿದ್ದು, ಇದರೊಂದಿಗೆ ವಾಹಿನಿ ಇಂದಿನ ಯುವಪೀಳಿಗೆಗೆ ಸ್ಫೂರ್ತಿ ನೀಡಿತು. ಸರ್ಕಾರಿ ಶಾಲೆಯ 1 ರಿಂದ 5 ನೇ ತರಗತಿಯ 300 ಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ (ಮಂಡ್ಯದಿಂದ 150 ಮತ್ತು ಗದಗದಿಂದ 150) ಅರ್ಜಿ ಸಲ್ಲಿಸಿದ್ದು ಈ ಮಕ್ಕಳು ಜೀ ಕನ್ನಡ ಬ್ರಾಂಡ್ ನ ಡ್ರಾಯಿಂಗ್ ಹಾಳೆ ಮತ್ತು ಬಣ್ಣದ ಪೆನ್ಸಿಲ್ ಗಳನ್ನು ಒಳಗೊಂಡ ಬಣ್ಣದ ಕಿಟ್ ಹಿಡಿದು ಆಗಮಿಸಿದ್ದರು. ಮಂಡ್ಯ ಮತ್ತು ಗದಗ ಶಾಲೆಗಳ ಮಕ್ಕಳು 5 ಪ್ರತಿಷ್ಠಿತ ತೀರ್ಪುಗಾರರಿಂದ ತರಬೇತಿ ಪಡೆದರು ಹಾಗೂ ಇವರಿಗೆ ಸ್ಪರ್ಧೆ ಪೂರ್ಣಗೊಳಿಸಲು 1- ಗಂಟೆ ಕಾಲಾವಕಾಶ ನೀಡಲಾಗಿತ್ತು. ಕಾಮಿಡಿ ಕಿಲಾಡಿಗಳು ಸೀಸನ್ 2 ರ ಮಡೇನೂರು ಮನು, ಕಾಮಿಡಿ ಕಿಲಾಡಿಗಳು ಸೀಸನ್ 2 ರ ಮಂಥನ, ಮತ್ತು ಸ ರೆ ಗ ಮ ಪ ಲಿಟ್ಲ್ ಚಾಂಪ್ಸ್ ಸೀಸನ್ 14 ರ ಸೃಜನ್ ಪಟೇಲ್ ತೀರ್ಪುಗಾರರಾಗ್ದ್ದು ಮಂಡ್ಯದಲ್ಲಿ ಒಂದು ದಿನದ ಈ ಚಟುವಟಿಕೆಯ ಸಂಪೂರ್ಣ ಭಾಗವಾಗಿದ್ದರೆ, ಗದಗದಲ್ಲಿ ಸ ರೆ ಗ ಮ ಪ ಸೀಸನ್ 11 ರ ಶ್ರೀ ರಾಮ್ ಕಸರ್ ಮತ್ತು ಸ ರೆ ಗ ಮ ಪ ಲಿಟ್ಲ್ ಚಾಂಪ್ಸ್ ಸೀಸನ್ 16 ರ ಸಂಗೀತಾ ತೀರ್ಪುಗಾರರಾಗಿದ್ದರು.
ಆರೋಗ್ಯಕರ ಆದರೆ ಲವಲವಿಕೆಯ ಸೃಜನಾತ್ಮಕ ಸ್ಪರ್ಧೆಯಲ್ಲಿ ಎರಡೂ ನಗರಗಳಿಂದ 3 ವಿಜೇತರನ್ನು ಆಯ್ಕೆ ಮಾಡಿದ್ದು, ವಿಜೇತರು ಜೀ ಕನ್ನಡದಿಂದ ವಿಜೇತ ಪ್ರಮಾಣಪತ್ರ ಮತ್ತು ಸ್ಮರಣಿಕೆಯನ್ನು ಸ್ವೀಕರಿಸಿದ್ದು, ಇದು ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಒಳಗಿನ ಕಲೆಯನ್ನು ಹೊರತರಲು ಪ್ರೋತ್ಸಾಹ ನೀಡಿತು. ಈ ಮೂಲಕ, ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಅರ್ಥಮಾಡಿ ಅಪ್ಪಿಕೊಳ್ಳಲು ಮಾತ್ರವಲ್ಲದೇ, ಮರೆಯಲಾಗದ ಬುದ್ಧಿಮಾತನ್ನು ಹೇಳಿದ ಪ್ರೀತಿಪಾತ್ರ ಪ್ರತಿಭಾವಂತ ಕಲಾವಿದರೊಂದಿಗೆ ಸಮಯವನ್ನೂ ಕಳೆಯುವ ಅವಕಾಶ ದೊರೆಯಿತು. ತಮ್ಮ ಬೆಳವಣಿಗೆಯ ಮೂಲಕ ವೈಯಕ್ತಿಕ ಹೋರಾಟಗಳು ಅವರ ಅತ್ಯುತ್ತಮ ಯಶಸ್ಸಿಗೆ ಕಾರಣವಾಗಿದ್ದು, ಇದು ಎಲ್ಲಾ ವಿದ್ಯಾರ್ಥಿಗಳಿಗೆ ಸ್ಫೂರ್ತಿದಾಯಕ ದಿನವಾಗುವ ಮೂಲಕ ಅದ್ಭುತ ಗುರಿಯ ಪ್ರಯಾಣ ಮುಂದುವರೆಸಲು ಕಾರಣವಾಯಿತು.
ಸ ರೆ ಗ ಮ ಪ ಲಿಟ್ಲ್ ಚಾಂಪ್ ಸೀಸನ್ 14 ರ ಸೃಜನ್ ಪಟೇಲ್ ಹೀಗೆ ಹೇಳಿದ್ದಾರೆ,” ಕೆಳಮಧ್ಯಮ ಹಿನ್ನೆಲೆಯಿಂದ ಬಂದ ನಾನು ನನ್ನ ಪ್ರತಿಭೆಯನ್ನು ಗುರುತಿಸಲು ಮತ್ತು ಸ್ಥಾಪಿಸಲು ಯಾವುದೇ ಮಾನದಂಡ ಅಥವಾ ಪ್ರೋತ್ಸಾಹವಿರಲಿಲ್ಲ. ಮನೆಯಲ್ಲಿ ಹೆಚ್ಚಾಗಿ ಹಾಡುತ್ತಿದ್ದ ನನ್ನನ್ನು ಅಜ್ಜಿ ಮತ್ತು ಶಿಕ್ಷಕಿ ಜೀ ಕನ್ನಡದ ಸ ರೆ ಗ ಮ ಪ ಆಡಿಷನ್ ಗೆ ಕಳುಹಿಸಲು ನಿರ್ಧರಿಸಿದರು. ಮೊದಲ ಸುತ್ತನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ನಂತರ, ಮುಂದಿನ ಸುತ್ತಿಗೆ ಬೆಂಗಳೂರಿಗೆ ಪ್ರಯಾಣಿಸಲು ನನಗೆ ಅಸಾಧ್ಯವಾಗಿತ್ತು. ಅದಕ್ಕಾಗಿ ನನ್ನ ಕುಟುಂಬ ನಮ್ಮ ಮನೆಯಲ್ಲಿದ್ದ, ಏಕಮಾತ್ರ ಆದಾಯದ ಮೂಲವಾಗಿದ್ದ ಹಸುವನ್ನು ಮಾರಿದರು, ಇದು ನನಗೆ ಸ ರೆ ಗ ಮ ಪ ಲಿಟ್ಲ್ ಚಾಂಪ್ಸ್ ಸೀಸನ್ 14 ರ ಸ್ಪರ್ಧಿಯಾಗಲು ನೆರವಾಯಿತು, ಅದು ನನ್ನನ್ನು ಇಂದು ಇಲ್ಲಿಯವರೆಗೂ ತಂದಿದೆ. ಪ್ರತಿಭೆ ನಿಜಕ್ಕೂ ಒಂದು ಆಸ್ತಿಯಾಗಿದ್ದರೂ, ನಿಮ್ಮ ಕುಟುಂಬ ಹಾಗೂ ಸ್ನೇಹಿತರ ನೆರವಿನೊಂದಿಗೆ ಮುನ್ನುಗ್ಗಿ ಅದನ್ನು ತೋರಿಸಬೇಕು. ನನ್ನ ಹಸುವನ್ನು ಮರಳಿ ಪಡೆಯಲು ಮತ್ತು ಈ ಪ್ರಯತ್ನದುದ್ದಕ್ಕೂ ನನಗೆ ನೆರವು ನೀಡಿದ ಜೀ ಕನ್ನಡಕ್ಕೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ .”
ಕಾಮಿಡಿ ಕಿಲಾಡಿಗಳು ಸೀಸನ್ 2 ರ ಮಡಿನೂರು ಮನು ಹೀಗೆ ಹೇಳಿದ್ದಾರೆ, ” ನಾನು ಬೆಳೆಯುವಾಗ, 10 ರೂಪಾಯಿ ಇಟ್ಟುಕೊಳ್ಳುವುದೂ ನನಗೆ ನಿಜಕ್ಕೂ ಕಷ್ಟವಾಗಿತ್ತು. ಮನೆಯಲ್ಲಿ ಕಠಿಣವಾದ ಹಣಕಾಸಿನ ಪರಿಸ್ಥಿತಿ ಎದುರಿಸಿದಾಗ, ನಾನು ಏನಾದರೂ ಮಾಡಲೇಬೇಕೆಂದು ದೃಢವಾಗಿ ನಿರ್ಧರಿಸಿದೆ. ಆದರೆ, ನನ್ನ ಊರಿನಲ್ಲಿ ನಟನೆ, ನೃತ್ಯ, ಹಾಡು, ಓಟ ಅಥವಾ ಚಿತ್ರಕಲೆ ಯಾವುದೇ ಪ್ರತಿಭೆಯಿರಲಿ ಅದನ್ನು ತೋರಿಸಲು ಇಂತಹ ಅವಕಾಶ ದೊರೆಯುತ್ತಿರಲಿಲ್ಲ. ನನ್ನ ಕುಟುಂಬದ ಬೆಂಬಲ ಅತ್ಯಂತ ಕಡಿಮೆ ಇದ್ದುದರಿಂದ, ನಟಿಸಬೇಕೆನ್ನುವ ನನ್ನ ಆಸೆಗಾಗಿ ಇಂತಹ ವೇದಿಕೆ ಹುಡುಕುತ್ತಾ ಬೆಂಗಳೂರಿಗೆ ಬಂದೆ. ನಾನೀಗ ಕಾರಿನ ಮಾಲೀಕನಾಗಿದ್ದೇನೆ ಮತ್ತು ಇಂದು ನಾನು ಏನಾಗಿದ್ದೇನೋ ಅದಕ್ಕಾಗಿ ಜೀ ಕನ್ನಡಕ್ಕೆ ಧನ್ಯವಾದ ತಿಳಿಸಲು ಬಯಸುತ್ತೇನೆ.”
ಸ ರೆ ಗ ಮ ಪ ಸೀಸನ್ 11 ರ ಶ್ರೀ ರಾಮ್ ಕಸರ್ ಹೀಗೆ ಹೇಳಿದ್ದಾರೆ, ” ನನ್ನ ತಾಯಿ, ತಂದೆ ಮತ್ತು ನಾವೆಲ್ಲಾ ನಾನು ಬೆಳೆಯುವಾಗ ಬೇರೆಯದೇ ಆಗಬೇಕೆಂದುಕೊಂಡಿದ್ದೆವು, ಆದರೆ ಸಂಗೀತ ನನ್ನ ಅಂತಿಮ ಗುರಿಯಾಗಿತ್ತು. ನನ್ನ ಪ್ರಯಾಣದಲ್ಲಿ, ನಾನು ಅನೇಕ ಆಡಿಷನ್ ಗಳಿಗೆ ಹೋಗಿದ್ದೇನೆ, ಆದರೆ ಜೀ ಕನ್ನಡ ನನ್ನ ಮೇಲೆ ಮತ್ತು ನನ್ನ ಪ್ರತಿಭೆಯ ಮೇಲೆ ವಿಶ್ವಾಸ ಹೊಂದಿತ್ತು. ಇಂದು, ನಾನು ಯಾವುದೇ ನಗರ, ರಾಜ್ಯ, ಅಥವಾ ದೇಶಕ್ಕೆ ಪ್ರಯಾಣಿಸಲಿ, ನನ್ನ ಹೆಸರಿನೊಂದಿಗೆ ವಾಹಿನಿಯ ಹೆಸರೂ ಇರುತ್ತದೆ. ಆದ್ದರಿಂದ, ನಿಮ್ಮೆಲ್ಲರಿಗೂ ನಾನು ನಿಮ್ಮ ಆಸಕ್ತಿಯನ್ನು ಹಿಂಬಾಲಿಸಿ ನಿಮ್ಮನ್ನು ತೋರಿಸಿಕೊಳ್ಳಲು ಸೂಕ್ತ ವೇದಿಕೆ ಹುಡುಕಿ ಎಂದು ಸಲಹೆ ನೀಡುತ್ತೇನೆ.”
ಸ ರೆ ಗ ಮ ಪ ಲಿಟ್ಲ್ ಚಾಂಪ್ಸ್ ಸೀಸನ್ 16 ರ ಸಂಗೀತಾ ಹೀಗೆ ಹೇಳಿದ್ದಾರೆ, ” ನಿಮ್ಮೆಲ್ಲರಿಗೂ ಮುಂಗಡವಾಗಿ ಮಕ್ಕಳ ದಿನಾಚರಣೆಯ ಶುಭಾಶಯಗಳು. ನಾನು ಗದಗದವಳು ಎನ್ನುವ ಹೆಮ್ಮೆ ನನಗಿದೆ, ನಿಮ್ಮೆಲ್ಲರಿಗೂ ನಾನು ಶುಭಾಶಯ ತಿಳಿಸುತ್ತಿದ್ದೇನೆ ಹಾಗೂ ನಿಮ್ಮ ಕನಸನ್ನು ಸಾಧಿಸಲು ಯಾವುದೂ ನಿಮಗೆ ಅಡ್ಡಿಯಾಗದಿರಲಿ ಎಂದು ಆಶಿಸುತ್ತೇನೆ. ವ್ಯಕ್ತಿಗೆ ಅಗತ್ಯವಿರುವ ಎಲ್ಲಾ ಬೆಂಬಲ ದೊರೆಯುವುದು, ನಿಜಕ್ಕೂ ಸುಲಭವಲ್ಲ, ಆದರೆ, ಅದಕ್ಕಾಗಿ ಹೋರಾಡಬೇಕು. ನನ್ನ ಅಂಧತ್ವ ನನ್ನ ಗುರಿ ಸಾಧಿಸಲು ನನಗೆ ಎಂದೂ ಅಡ್ಡಿಯಾಗಲಿಲ್ಲ. ನೀವೆಲ್ಲರೂ ನಿಮ್ಮ ಅಭದ್ರತೆಯನ್ನು ಮೀರಿ ಹೊರಬನ್ನಿ ಎಂದು ಸಲಹೆ ನೀಡುತ್ತೇನೆ.”
5 ನೇ ತರಗತಿಯ ಚೈತನ್ಯ ಪೋಷಕರು ಹೀಗೆ ಹೇಳಿದ್ದಾರೆ, “ನನ್ನ ಮಗಳು ಜೀ ಕನ್ನಡದ ಸಕಾರಾತ್ಮಕತೆ ಮತ್ತು ಒರಟುತನವಿಲ್ಲದ ಕಮಲಿಯ ಪಾತ್ರದೊಂದಿಗೆ ತನ್ನನ್ನು ಹೋಲಿಸಿಕೊಳ್ಳುತ್ತಾಳೆ. ಅದು ಆರಂಭವಾದ ದಿನದಿಂದಲೂ ಅವಳು ಅದನ್ನು ನೋಡುತ್ತಿದ್ದು ದೊಡ್ಡ ಕನಸು ಕಾಣುತ್ತಿದ್ದಾಳೆ ಮತ್ತು ಕಮಲಿಯಂತೆ ಆಗಲು ಬಯಸಿದ್ದಾಳೆ. ಆಕೆ ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು ಅಥವಾ ಮೈಸೂರಿನಂತಹ ದೊಡ್ಡ ನಗರಕ್ಕೆ ಪ್ರಯಾಣಿಸಲು, ಮತ್ತು ಮರಳಿ ಆಕೆಯ ನಗರ ಹಾಗೂ ಗದಗದ ಜನರ ಬಳಿ ಬರಲು ಆಶಿಸುತ್ತಾಳೆ. ನಾನು ಅವಳ ಬೆಳವಣಿಗೆಯನ್ನು ನೋಡಿ ಹೆಮ್ಮೆಪಡುತ್ತೇನೆ, ತಮ್ಮ ಮಕ್ಕಳ ಆಕಾಂಕ್ಷೆ ಹಾಗೂ ಕನಸುಗಳಿಗೆ ನೆರವಾಗಬೇಕೆಂದು ನಾನು ಪೋಷಕರಲ್ಲಿ ಮನವಿ ಮಾಡುತ್ತೇನೆ. ಸರ್ಕಾರಿ ಶಾಲೆಯೊಂದಿಗೆ ನಮ್ಮ ನಗರದಲ್ಲಿ ಮಕ್ಕಳ ದಿನಾಚರಣೆ ಆಚರಿಸಲು ಆಯ್ಕೆ ಮಾಡಿದ್ದಕ್ಕಾಗಿ ಜೀ ಕನ್ನಡಕ್ಕೆ ಧನ್ಯವಾದ ಹೇಳಲು ಬಯಸುತ್ತೇನೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಯಾವಾಗಲೂ ಪಕ್ಷಪಾತವಿದೆ, ಆದರೆ ಪ್ರತಿಯೊಬ್ಬ ಪೋಷಕರೂ ಸಾರ್ವಜನಿಕ ಶಿಕ್ಷಣ ವ್ಯವಸ್ಥೆ ವಿದ್ಯಾರ್ಥಿಗಳಿಗೆ ಸಮಾನ ಅವಕಾಶ ನೀಡುವುದರಿಂದ ಅದರಲ್ಲಿ ವಿಶ್ವಾಸ ಇಡಬೇಕು .”
ಮಂಡ್ಯದ ಶಿಕ್ಷಕಿ ಹೀಗೆ ಹೇಳಿದ್ದಾರೆ, “ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಇಂದು ಅತ್ಯದ್ಭುತ ಶೋ ಎಂದು ನಾನು ಭಾವಿಸುತ್ತೇನೆ, ಪ್ರತಿಯೊಬ್ಬ ಚಿಕ್ಕ ಮಗುವೂ ಇದನ್ನು ಅನುಸರಿಸಿ ಸಾಮಾನ್ಯ ಮನುಷ್ಯನ ಹೋರಾಟಗಳನ್ನು ಅರ್ಥಮಾಡಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ಈ ವೇಗವಾಗಿ ಬೆಳೆಯುತ್ತಿರುವ ಪ್ರಪಂಚದಲ್ಲಿ, ಎಲ್ಲರಿಗೂ ಜೀವನದ ಆರಾಮದಾಯಕತೆ ಅಥವಾ ಅನುನಯ ದೊರೆಯುವುದಿಲ್ಲ. ಆದ್ದರಿಂದ, ತಮ್ಮ ಕನಸುಗಳನ್ನು ಸಾಕಾರಗೊಳಿಸಲು ನಮ್ಮ ನಾಯಕರು ಅದನ್ನು ತೆಗೆದುಕೊಂಡು ಹೋಗುವ ಧೈರ್ಯ ಹಾಗೂ ದೃಢತೆ ನಿಜಕ್ಕೂ ಮೆಚ್ಚುವಂತಹುದು. ನನ್ನ ಒಬ್ಬ ವಿದ್ಯಾರ್ಥಿ ಸಾಧಕರ ಸೀಟ್ ನಲ್ಲಿ ಕುಳಿತುಕೊಳ್ಳಬಹುದು ಮತ್ತು ನನ್ನನ್ನು ನನ್ನ ವಿದ್ಯಾರ್ಥಿಗೆ ಆಶೀರ್ವದಿಸಲು ವಿಶೇಷ ಅತಿಥಿಯಾಗಿ ಆಹ್ವಾನಿಸುವ ಅವಕಾಶ ದೊರೆಯುತ್ತದೆಂದು ಭಾವಿಸುತ್ತೇನೆ. ಈ ಅತ್ಯದ್ಭುತ ಶೋ ಗಾಗಿ ರಮೇಶ್ ಅರವಿಂದ್ ಮತ್ತು ಜೀ ಕನ್ನಡಕ್ಕೆ ಹೃತ್ಪೂರ್ವಕ ಧನ್ಯವಾದಗಳು.”
ಈ ಯಶಸ್ವೀ ಅಭಿಯಾನ ವಿದ್ಯಾರ್ಥಿಗಳಿಗೆ ವಿಶ್ವದ ಯಾವುದೇ ಭಾಗದಲ್ಲಿ ವಾಸಿಸುತ್ತಿರಲಿ ನಮ್ಮ ಪರಿಸರ ಉಳಿಸುವ ಜಾಗೃತಿ, ಈ ಬದಲಾವಣೆಯನ್ನು ತರಲು ನಮ್ಮಲ್ಲಿರುವ ಪ್ರತಿಯೊಬ್ಬರ ಶಕ್ತಿಯ ಬಗ್ಗೆ ಅರಿವು ಮೂಡಿಸಿತು. ವಿದ್ಯಾರ್ಥಿಗಳು ಸಸಿ ನೆಡುವುದು, ನೀರು ಸಂರಕ್ಷಣೆ ಮತ್ತು ಉತ್ತಮ ನಾಳೆಗಾಗಿ ಪ್ಲಾಸ್ಟಿಕ್ ಬಳಕೆಯ ಮಿತಿ ಇತ್ಯಾದಿ ವಿವಿಧ ವಿಷಯಗಳನ್ನು ಬಳಸಿ ಸುಂದರವಾದ ಚಿತ್ರಕಲೆ ಮಾಡುವ ಮೂಲಕ ಇದರ ಸಾರವನ್ನು ತಿಳಿಸಲಾಯಿತು. ಎಲ್ಲಾ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ತಾರೆಗಳೂ ಸೇರಿ, ಈ ವರ್ಷದ ಮಕ್ಕಳ ದಿನಾಚರಣೆಯಲ್ಲಿ ಭಾಗವಹಿಸಿದ ಪ್ರತಿಯೊಬ್ಬರಿಗೂ ವಿಶೇಷ ಊಟದೊಂದಿಗೆ ಸಂತೋಷದಿಂದ ಮುಕ್ತಾಯವಾಯಿತು.
@Bcinemas
Be the first to comment