ಡಾಲಿ ಧನಂಜಯ್ ಮತ್ತು ಸತ್ಯ ದೇವ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿಲೀಸ್ ಆಗಿದೆ.
‘ZEBRA’ ಎನ್ನುವ ಸ್ಪೆಷಲ್ ಶೀರ್ಷಿಕೆಯನ್ನು ಗಣರಾಜ್ಯೋತ್ಸವದ ದಿನ ಸಿನಿಮಾ ತಂಡ ಅನೌನ್ಸ್ ಮಾಡಿದೆ.
ತೆಲುಗು ಭಾಷೆಯಲ್ಲಿ ರೆಡಿ ಆಗುವ ಈ ಚಿತ್ರ ಏಕಕಾಲಕ್ಕೆ ಬೇರೆ ಭಾಷೆಯಲ್ಲೂ ರಿಲೀಸ್ ಆಗಲಿದೆ. ಧನಂಜಯ್ ಫ್ಯಾನ್ ಇಂಡಿಯಾ ಮಟ್ಟದಲ್ಲಿ ಬೇರೆ ರೀತಿಯಲ್ಲಿ ಮಿಂಚಲಿದ್ದಾರೆ.
‘ZEBRA’ ಚಿತ್ರದ 50 ದಿನದ ಚಿತ್ರೀಕರಣ ಮೊನ್ನೆ ಮುಗಿದಿದೆ. ಮುಂದಿನ ಚಿತ್ರೀಕರಣಮುಂಬೈ, ಕೋಲ್ಕತ್ತಾ, ಹೈದ್ರಾಬಾದ್ನಲ್ಲಿ ಮಾಡಲಾಗುತ್ತಿದೆ.
‘ZEBRA’ ಚಿತ್ರಕ್ಕೆ ಕೆಜಿಎಫ್ ಚಿತ್ರ ಖ್ಯಾತಿಯ ರವಿ ಬಸ್ರೂರು ಸಂಗೀತ ಕೊಟ್ಟಿದ್ದು, ನಿರೀಕ್ಷೆ ಹುಟ್ಟಿಸಿದ್ದಾರೆ.
‘ZEBRA’ ಚಿತ್ರದ ನಿರ್ದೇಶಕ ಈಶ್ವರ್ ಕಾರ್ತಿಕ್ . ಸಿನಿಮಾ ಕಳೆದ ವರ್ಷ ಶುರು ಆಗಿತ್ತು. ಸೆಪ್ಟೆಂಬರ್ 30 ರಂದು ಚಿತ್ರದ ಮುಹೂರ್ತ ನಡೆದಿತ್ತು.
___

Be the first to comment