ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ಜೀವನಗಾಥೆ ಚಲನಚಿತ್ರ ಆಗಿ ತೆರೆ ಮೇಲೆ ಬರುತ್ತಿದೆ!
ಭೂಷಣ್ ಕುಮಾರ್ ಅವರ ಟಿ ಸಿರೀಸ್ ಸಂಸ್ಥೆ ಮತ್ತು ರವಿ ಭಾಗಚಂದಕಾ ಅವರ ಸಹನಿರ್ಮಾಣದಲ್ಲಿ ಯುವಿ ಬಯೋಪಿಕ್ ರೆಡಿಯಾತ್ತಿದೆ. ಇದೇ ಸಂಸ್ಥೆ ಈ ಹಿಂದೆ ಕ್ರಿಕೆಟ್ನ ದೇವರು ಸಚಿನ್ ತೆಂಡೂಲ್ಕರ್ ಅವರ ಬಯೋಪಿಕ್ ‘ಸಚಿನ್; ಎ ಬಿಲಿಯನ್ ಡ್ರೀಮ್ಸ್’ ರೆಡಿ ಮಾಡಿತ್ತು. ಬಯೋಪಿಕ್ನಲ್ಲಿ ಯುವಿ ಪಾತ್ರವನ್ನು ರಣವೀರ್ ಸಿಂಗ್ ಅಥವಾ ವಿಕ್ಕಿ ಕೌಶಾಲ್ ಮಾಡುವ ಸಾಧ್ಯತೆ ಇದೆ.
ಪಂಜಾಬ್ ರಾಜ್ಯದ ಎಡಗೈ ಬ್ಯಾಟ್ಸ್ ಮನ್, ಆಲ್ರೌಂಡರ್ ಯುವರಾಜ್ ಸಿಂಗ್, 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಟೂರ್ನಿಗಳಲ್ಲಿ ಭಾರತ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಯುವಿಗೆ ಕ್ಯಾನ್ಸರ್ ಕಾಡಿತ್ತು. ಆದರೂ ಛಲ ಬಿಡದೇ ಹೋರಾಡಿ ಗುಣಮುಖರಾಗಿದ್ದ ಅವರು 2012ರಲ್ಲಿ ಮತ್ತೆ ಕ್ರಿಕೆಟ್ಗೆ ಮರಳಿದ್ದರು. 2019ರ ಜೂನ್ 10ರಂದು ಯುವಿ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದರು.
”ಲಕ್ಷಾಂತರ ಜನರಿಗೆ ನನ್ನ ಬಯೋಪಿಕ್ ತಲುಪಿಸುತ್ತಿರೋದು ಖುಷಿ ಕೊಟ್ಟಿದೆ” ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.
Be the first to comment