ಯುವರಾಜ್

ಸ್ಟಾರ್ ವಾರ್ಸ್‌ಗೆ ಯುವ ಪ್ರತಿಕ್ರಿಯೆ

ಸ್ಟಾರ್ ವಾರ್ ಗೆ ಸಂಬಂಧಿಸಿದಂತೆ ಎಕ್ಕ ಚಿತ್ರದ ನಾಯಕ ಯುವ ರಾಜ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ರಾಮನಗರದ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವದಲ್ಲಿ ಯುವ ರಾಜ್ ಕುಮಾರ್ ಹಾಗೂ ಎಕ್ಕ ಚಿತ್ರತಂಡ ಭಾಗಿಯಾಗಿತ್ತು. ಯುವ ರಾಜ್ ಕುಮಾರ್ ವೇದಿಕೆಯಲ್ಲಿ ಮಾತನಾಡುವಾಗ ದರ್ಶನ್ ಅಭಿಮಾನಿಗಳು ಡಿ ಬಾಸ್ ಎಂದು ಜೋರಾಗಿ ಕೂಗಾಡಿದ್ದಾರೆ. ಈ ಸಂದರ್ಭದಲ್ಲಿ ಯುವ ಅವರು, ಬೇರೆ ಬೇರೆ ನಟರ ಅಭಿಮಾನಿಗಳು ಕೂಡ ಇಲ್ಲಿಗೆ ಬಂದಿದ್ದಾರೆ. ಇದು ಖುಷಿಯ ವಿಚಾರ. ನಿಮ್ಮೆಲ್ಲರ ಆಶೀರ್ವಾದ ಇರಲಿ. ನಿಮ್ಮ ಪ್ರೀತಿ ಇರಲಿ. ಆ ದೇವರು ನಿಮ್ಮೆಲ್ಲರನ್ನು ಚೆನ್ನಾಗಿ ಇಟ್ಟಿರಲಿ ಎಂದು ಹೇಳಿದ್ದಾರೆ.

ಬಳಿಕ ಅವರು, ಕೊನೆಯದಾಗಿ ಮ್ಯಾಟರ್ ಮುಗಿಸೋಣ. ಆಟ ಶುರು ಮಾಡಿದವನು ರಾಜ. ಅದನ್ನು ಆಡಿ ಮುಗಿಸೋನೆ ಎಕ್ಕ ಎಂದು ಡೈಲಾಗ್ ಹೊಡೆದರು. ಈ ಸಂದರ್ಭದಲ್ಲಿ ಅಪ್ಪು ಅಭಿಮಾನಿಗಳು ಅಪ್ಪು… ಎಂದು ಘೋಷಣೆ ಕೂಗಿ ಕೌಂಟರ್ ಕೊಟ್ಟ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ಬೆಂಗಳೂರಿಗೆ ಸಾವಿರ ಜನ ಬರ್ತಾರೆ ಹೋಗ್ತಾರೆ. ಇರೋದು ಒಬ್ಬರೇ ಅಪ್ಪು. ಲೋಕಲ್ ‘ ಎಂದು ಯುವ ಮತ್ತೊಂದು ಡೈಲಾಗ್ ಹೊಡೆದಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿ ಸೇರಿದ್ದವರು ಚಪ್ಪಾಳೆ ಹೊಡೆದಿದ್ದಾರೆ.

ದರ್ಶನ್ ಅವರ ಡೆವಿಲ್ ಚಿತ್ರ ಹಾಗೂ ಯುವ ಅವರ ಎಕ್ಕ ಚಿತ್ರದ ಬಗ್ಗೆ ಸ್ಟಾರ್ ವಾರ್ ಆರಂಭ ಆಗಿದೆ. ಯುವ ಅವರನ್ನು ಜೂನಿಯರ್ ಅಪ್ಪು ಎಂದು ಕರೆಯಲಾಗುತ್ತದೆ. ಹಿಂದೆ ದರ್ಶನ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿಗಳ ಜಟಾಪಟಿ ತಾರಕಕ್ಕೆ ಹೋಗಿತ್ತು. ಈಗ ಮತ್ತೆ ಸ್ಟಾರ್ ವಾರ್ ಆರಂಭ ಆಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!