ಯುವರಾಜ್ ಕುಮಾರ್ ಎರಡನೇ ಸಿನಿಮಾ ಗೆ PRK- KRG-JP ನಿರ್ಮಾಣ!

ಯುವ ರಾಜ್‌ ಕುಮಾರ್ 2ನೇ ಸಿನಿಮಾ ಆಯುಧ ಪೂಜೆ ಸಂಭ್ರಮದಲ್ಲಿ ಇಂದು ಘೋಷಣೆ ಆಗಲಿದೆ.

‘ಒಂದೊಳ್ಳೆಯ ಕಂಟೆಂಟ್ ಇರುವ ಚಿತ್ರ ಇದಾಗಿದ್ದು, ಡಿಫರೆಂಟ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಈ ಚಿತ್ರವನ್ನು ಡೈರೆಕ್ಟರ್ ರೋಹಿತ್ ಪದಕಿ ನಿರ್ದೇಶನ ಮಾಡುತ್ತಿದ್ದಾರೆ. ನಿರ್ಮಾಣದ ಹೊಣೆಯನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ವಹಿಸಿಕೊಂಡಿದ್ದಾರೆ’ ಎಂದು  ಯುವ ರಾಜ್‌ ಕುಮಾರ್ ತಿಳಿಸಿದ್ದಾರೆ.

ಈ ಚಿತ್ರಕ್ಕೆ ಇನ್ನೂಳಿದ ಕಲಾವಿದರ ಆಯ್ಕೆ ಆಗಬೇಕಿದೆ. ‘ರತ್ನನ್ ಪ್ರಪಂಚ’ ನಿರ್ದೇಶಕನ ಜೊತೆ ಯುವ ರಾಜ್‌ ಕುಮಾರ್ ಹೊಸ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಮೂಡಿದೆ. ಚಿತ್ರದ ಹೆಚ್ಚಿನ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ.

ಅಪ್ಪು ಆಸೆಯಂತೆ ಪಿಅರ್’ಕೆ ಯಲ್ಲಿ ಯುವರಾಜ್ ಕುಮಾರ್ ಅವರ 2ನೇ ಚಿತ್ರ ನಿರ್ಮಾಣವಾಗಲಿದೆ. ಯುವ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕಿಯಾಗಿದ್ದಾರೆ.

ಅಪ್ಪು ಕನಸಿಗಾಗಿ ಎರಡು ದೊಡ್ಡ ನಿರ್ಮಾಣ ಸಂಸ್ಥೆಗಳು ಕೈ ಜೋಡಿಸಿವೆ. ಪಿಅರ್ ಕೆ ಜೊತೆ ಜಯಣ್ಣ ಫಿಲಂಸ್, ಕೆಅರ್ ಜಿ ಸ್ಟೂಡಿಯೋ ಸೇರಿ ಯುವ ಅವರ 2ನೇ ಸಿನಿಮಾ ನಿರ್ಮಾಣ ಮಾಡುತ್ತಿವೆ. ಮೂರು ದಿಗ್ಗಜ‌ ಸಂಸ್ಥೆಗಳ ನೇತೃತ್ವದಲ್ಲಿ ಯುವರಾಜ್ ಕುಮಾರ್ ಅವರ ಎರಡನೇ ಚಿತ್ರ ನಿರ್ಮಾಣ ಆಗುತ್ತಿದೆ.

ಈ ಸುದ್ದಿಗಳ ನಡುವಲ್ಲೇ ನಿರ್ಮಾಪಕ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಅವರು ಮಾಡಿರುವ ಪೋಸ್ಟ್ ವೊಂದು ಸಿನಿಮಾ ಕುರಿತು ಮತ್ತಷ್ಟು ಸುಳಿವುಗಳನ್ನು ನೀಡಿದೆ. “‘Back on track onto the next, a good week this is going to be!” ಎಂದು ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್ ಯುವರಾಜ್ ಕುಮಾರ್ ಅವರ 2ನೇ ಚಿತ್ರ ಕುರಿತ ಊಹಾಪೋಹಗಳಿಗೆ ಪುಷ್ಠಿ ನೀಡಿದೆ.

ಯುವ ರಾಜ್​ಕುಮಾರ್  ‘ಯುವ’ ಸಿನಿಮಾದಿಂದ ಕನ್ನಡ ಬೆಳ್ಳಿತೆರೆ ಮೇಲೆ ಮೊದಲ ಚಿತ್ರದಲ್ಲೇ ಅಬ್ಬರಿಸಿದ್ದರು. ಇದೀಗ ಎರಡನೇ ಚಿತ್ರ ಮಾಡಲು ರೆಡಿಯಾಗಿದ್ದಾರೆ.

ರಾಜ್ಸೋತ್ಸವಕ್ಕೆ ಪೋಸ್ಟರ್,  ಚಿತ್ರದ ಟೈಟಲ್ ಘೋಷಣೆ ಆಗಲಿದೆ. ವರ್ಷಾಂತ್ಯಕ್ಕೆ ಸಿನಿಮಾ ಸೆಟ್ಟೇರಿ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆಯಿದೆ.

—–

Be the first to comment

Leave a Reply

Your email address will not be published. Required fields are marked *

Translate »
error: Content is protected !!