‘ಯಾವೋ ಇವೆಲ್ಲಾ’ ಶೀಘ್ರ ತೆರೆಗೆ

ಶಿವಮೊಗ್ಗದ ಹರೀಶ್ ಸಾ.ರಾ. ಈ ಸಿನಿಮಾದಲ್ಲಿ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ ‘ಯಾವೋ ಇವೆಲ್ಲಾ’ ಚಿತ್ರ ಶೀಘ್ರ ತೆರೆಗೆ ಬರಲಿದೆ.

‘ಮದುವೆಗೆ ಸಂಬಂಧಿಸಿದ ಕಥೆ ಇದಾಗಿದೆ. ಪೋಷಕರು ತಮ್ಮ ಮಕ್ಕಳು ಚಿಕ್ಕವರಿರುವಾಗ ಸಂಬಂಧಿಕರಿಗೆ ಕೊಟ್ಟು ಮದುವೆ ಮಾಡಬೇಕೆಂದುಕೊಂಡಿರುತ್ತಾರೆ. ಮದುವೆ ವಯಸ್ಸಿಗೆ ಬಂದಾಗ ಶ್ರೀಮಂತರ ಮನೆಯಿಂದ ಪ್ರಸ್ತಾಪ ಬಂದರೆ ಹಿಂದಿನ ಮಾತನ್ನು ಮರೆಯುತ್ತಾರೆ. ದೂರದ ಬೆಟ್ಟ ನುಣ್ಣಗೆ ಎಂಬಂತೆ ಹತ್ತಿರದ ಸಂಬಂಧಗಳಿಗೆ ಮೊದಲ ಆದ್ಯತೆ ಕೊಡಿ ಎಂಬ ಸಂದೇಶ ಈ ಸಿನಿಮಾದಲ್ಲಿದೆ’ ಎಂದು ನಿರ್ದೇಶಕರು ಹೇಳಿದ್ದಾರೆ.

ಶಿಲ್ಪಾ ನಾಯಕ್ ಚಿತ್ರದ ನಾಯಕಿ ಆಗಿ ನಟಿಸಿದ್ದಾರೆ. ಹರ್ಷ ಕಾಗೋಡ್ ಸಂಗೀತ, ಗಿರೀಶ್‌ ಶಿರಗನಹಳ್ಳಿ ಛಾಯಾಗ್ರಹಣ, ಸುನಯ್ ಎಸ್.ಜೈನ್ ಸಂಕಲನ ಚಿತ್ರಕ್ಕಿದೆ. ಬೆಂಗಳೂರು, ಹೆಸರಘಟ್ಟ, ಕನಕಪುರ ಮೊದಲಾದೆಡೆ ಚಿತ್ರೀಕರಣ ಮಾಡಲಾಗಿದೆ.

ರಾಶ್ರೀ ಆರ್ಟ್ಸ್ ಅಡಿಯಲ್ಲಿ ಸುಜಾತ ಎಸ್. ಅವರು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!