ಸಮಂತಾ ನಟನೆಯ ಯಶೋದಾ ಸಿನಿಮಾದ ಕನ್ನಡದ ಟ್ರೇಲರ್ ನ್ನು ‘ಸಿಂಪಲ್ ಸ್ಟಾರ್’ ರಕ್ಷಿತ್ ಶೆಟ್ಟಿ ಬಿಡುಗಡೆ ಮಾಡಲಿದ್ದಾರೆ.
ಅಕ್ಟೋಬರ್ 27ರಂದು ಸಂಜೆ 5:36ಕ್ಕೆ ಟ್ರೇಲರ್ ಬಿಡುಗಡೆ ಆಗಲಿದೆ. ಬೇರೆ ಭಾಷೆಗಳ ಟ್ರೈಲರ್ ಗಳನ್ನು ಆಯಾ ಭಾಷೆಗಳ ಖ್ಯಾತ ನಟರು ಬಿಡುಗಡೆ ಮಾಡಲಿದ್ದಾರೆ.
ಸಮಂತಾ ರುತ್ ಪ್ರಭು ನಟನೆಯ ಬಹುನಿರೀಕ್ಷಿತ ಯಶೋದಾ ಚಿತ್ರ ಬಿಡುಗಡೆಗೆ ಸಿದ್ದವಾಗಿದೆ. ನವೆಂಬರ್ 11ರಂದು ಜಗತ್ತಿನಾದ್ಯಂತ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲ್ಲಿ ಏಕಕಾಲಕ್ಕೆ ಚಿತ್ರ ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರದ ಬಹುನಿರೀಕ್ಷಿತ ಟ್ರೇಲರ್ ಬಿಡುಗಡೆಯಾಗಲಿದೆ.
‘ಯಶೋದಾ’ ಒಂದು ಹೊಸ ಶೈಲಿಯ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದೆ. ಈ ಚಿತ್ರವನ್ನು ಶಿವಲೆಂಕ ಕೃಷ್ಣ ಪ್ರಸಾದ್ ತಮ್ಮ ಶ್ರೀದೇವಿ ಮೂವಿ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಿಸಿದ್ದಾರೆ. ಹರಿ-ಹರೀಶ್ ಈ ಚಿತ್ರವನ್ನು ಜಂಟಿಯಾಗಿ ನಿರ್ದೇಶಿಸಿದ್ದಾರೆ.
ಸಮಂತಾ ಜತೆಗೆ ಈ ಚಿತ್ರದಲ್ಲಿ ವರಲಕ್ಷ್ಮೀ ಶರತ್ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್, ಮುರಳಿ ಶರ್ಮ, ಸಂಪತ್ ರಾಜ್, ಶತ್ರು, ಮಧಿರಿಮಾ, ಕಲ್ಪಿಕಾ ಗಣೇಶ್, ದಿವ್ಯ ಶ್ರೀಪಾದ, ಪ್ರಿಯಾಂಕಾ ಶರ್ಮ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಎಂ. ಸುಕುಮಾರ್ ಛಾಯಾಗ್ರಹಣವಿದೆ.
_____

Be the first to comment