ಇಂದು ‘ಯಶೋಧ’ ಟೀಸರ್ ರಿಲೀಸ್

ಹರೀಶ್ ನಿರ್ದೇಶನದ ಸಮಂತಾ ಅಭಿನಯದ ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ‘ಯಶೋಧ’ ಚಿತ್ರದ ಟೀಸರ್ ಇಂದು ಬಿಡುಗಡೆ ಆಗಲಿದೆ.

ತೆಲುಗು ಸೇರಿದಂತೆ ಕನ್ನಡ, ಮಲಯಾಳಂ, ತಮಿಳು, ಹಾಗೂ ಹಿಂದಿ ಭಾಷೆಯಲ್ಲಿ ಟೀಸರ್ ಇಂದು ಸಂಜೆ ರಿಲೀಸ್ ಆಗಲಿದೆ.

ಈ ಕುರಿತು ಸಮಂತಾ ಮಾಹಿತಿ ನೀಡಿದ್ದಾರೆ.

ಶ್ರೀದೇವಿ ಮೂವೀಸ್ ಬ್ಯಾನರ್ ನಡಿ ಶಿವಲೆಂಕ ಕೃಷ್ಣಪ್ರಸಾದ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಮಣಿಶರ್ಮ ಸಂಗೀತ ಸಂಯೋಜನೆ ಮಾಡಿದ್ದಾರೆ.

ಯಶೋಧ ಎಂಬ ಮಹಿಳೆಯ ಪಾತ್ರದಲ್ಲಿ ಸಮಂತಾ ಕಾಣಿಸಿಕೊಂಡಿದ್ದು, ಉನ್ನಿ ಮುಕುಂದನ್, ವರಲಕ್ಷ್ಮೀ ಶರತ್ ಕುಮಾರ್, ಮುರಳಿ ಶರ್ಮಾ, ರಾವ್ ರಮೇಶ್, ಪ್ರಿಯಾಂಕಾ ಶರ್ಮಾ, ಸಂಪತ್ ರಾಜ್, ಕಲ್ಪಿಕ ಗಣೇಶ್ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಸಿನಿಮಾ ಎಂದು ಹೇಳಲಾಗಿದೆ.
__

 

Be the first to comment

Leave a Reply

Your email address will not be published. Required fields are marked *

Translate »
error: Content is protected !!