‘ರಾಮಾಯಣ’ ಶೂಟಿಂಗ್‌ ಆರಂಭಿಸಿದ ಯಶ್‌

ರಾಕಿಂಗ್‌ ಸ್ಟಾರ್‌ ಯಶ್‌, ನಿತೇಶ್‌ ತಿವಾರಿ ಅವರ ‘ರಾಮಾಯಣ’ ಚಿತ್ರದ ಶೂಟಿಂಗ್‌ ಆರಂಭಿಸಿದ್ದಾರೆ.

ಯಶ್‌ ಅವರು ಫೆ. 21ರಿಂದ   ಶೂಟಿಂಗ್‌ನಲ್ಲಿ ಭಾಗಿಯಾಗಿದ್ದಾರೆ.  2 ದಿನಗಳ ಹಿಂದೆ ಅವರ ಕಾಸ್ಟ್ಯೂಮ್‌ ಟ್ರಯಲ್‌ ನಡೆದಿತ್ತು ಎಂದು ಮೂಲಗಳು ತಿಳಿಸಿವೆ.

ಸದ್ಯ ಚಿತ್ರದ ಪ್ರಮುಖ ಭಾಗವಾದ ಯುದ್ಧದ ದೃಶ್ಯಗಳ ಶೂಟಿಂಗ್‌ ನಡೆಸಲಾಗುತ್ತಿದೆ. ಯುದ್ಧದ ಕೆಲವು ಭಾಗಗಳನ್ನು ಮುಂಬೈಯ ಅಕ್ಸಾ ಬೀಚ್‌ನಲ್ಲಿ ಚಿತ್ರೀಕರಿಸಲು ಸಿನಿಮಾತಂಡ ಪ್ಲ್ಯಾನ್‌ ಮಾಡಿಕೊಂಡಿದೆ.  ಬಳಿಕ ದಹಿಸರ್‌ನಲ್ಲಿ ಸ್ಟುಡಿಯೊದಲ್ಲಿ ಚಿತ್ರೀಕರಣ ನಡೆಯಲಿದೆ.

ಈಗಾಗಲೇ ರಣಬೀರ್‌ ಕಪೂರ್‌ ಮತ್ತು ಸಾಯಿ ಪಲ್ಲವಿ ರಾಮಾಯಣ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಾಮನಾಗಿ ರಣಬೀರ್‌ ಕಪೂರ್‌, ಸೀತೆಯಾಗಿ ಸಾಯಿ ಪಲ್ಲವಿ ನಟಿಸುತ್ತಿದ್ದು, ಯಶ್‌ ರಾವಣನಾಗಿ ಅಬ್ಬರಿಸಲಿದ್ದಾರೆ.  ʼರಾಮಾಯಣʼ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದೆ.

ʼರಾಮಾಯಣʼ 2 ಭಾಗಗಳಲ್ಲಿ ತೆರೆಗೆ ಬರಲಿದ್ದು, ಮೊದಲ ಭಾಗ 2026ರ ದೀಪಾವಳಿಯಂದು ಮತ್ತು 2ನೇ ಭಾಗ 2027ರ ದೀಪಾವಳಿಯಂದು ಬಿಡುಗಡೆಯಾಗಲಿದೆ.

ಸಾಕಷ್ಟು ಕುತೂಹಲ ಮೂಡಿಸಿರುವ ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾದ ಶೂಟಿಂಗ್‌ ಭರದಿಂದ ಸಾಗುತ್ತಿದ್ದುಈ ವರ್ಷಾಂತ್ಯದಲ್ಲಿ ʼಟಾಕ್ಸಿಕ್‌ʼ ರಿಲೀಸ್‌ ಆಗಲಿದೆ.

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!