ಜುಗಲ್ ಬಂದಿ’ ಸಿನಿಮಾದ ಮೊದಲ ಹಾಡು ಬಿಡುಗಡೆ

ಕುತೂಹಲಕಾರಿ ಕಥಾಹಂದರದೊಂದಿಗೆ ಸೆಟ್ಟೇರಿದ ‘ಜುಗಲ್‌ಬಂದಿ’. ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ.

ದಿವಾಕರ್ ಡಿಂಡಿಮ ಎಂಬ ಹೊಸ ಪ್ರತಿಭೆ ಆಕ್ಷನ್-ಕಟ್ ಹೇಳಿ ನಿರ್ಮಾಣ ಮಾಡಿದ  ‘ಜುಗಲ್ ಬಂದಿ’ ಸಿನಿಮಾದ ಆಡಿಯೋ ರೈಟ್ಸ್ ಉತ್ತಮ ಮೊತ್ತಕ್ಕೆ ಸೇಲ್ ಆಗಿದೆ.

ಜುಗಲ್ ಬಂದಿ ಸಿನಿಮಾ ಅಂಗಳದಿಂದ ಮನಮುಟ್ಟುವ ಮೊದಲ ಹಾಡು ಬಿಡುಗಡೆಯಾಗಿದ್ದು, ಸಂಗೀತ ಪ್ರಿಯರಿಗೆ ಮೆಚ್ಚುಗೆ ಪಡೆದುಕೊಂಡಿದೆ.

‘ಇಂಥವರ ಸಂತಾನ ಭಾಗ್ಯ’ ಎಂದು ಶುರುವಾಗುವ ಅದ್ಭುತ ಸಾಹಿತ್ಯ ಎಂತಹ ಕಲ್ಲು ಮನಸನ್ನು ಕರಿಸುವಂತಿದೆ. ನಿರ್ದೇಶಕ ದಿವಾಕರ್ ಅವರು ಪೊಣಿಸಿರುವ ಅರ್ಥಪೂರ್ಣ ಸಾಲುಗಳಿಗೆ ಪ್ರದ್ಯೋತನ್ ಸಂಗೀತದ ಕಿಕ್.. ಮಾನಸಿ ಸುಧೀರ್ ಅವರ ಅಭಿನಯದ ಮ್ಯಾಜಿಕ್.. ಎಸ್ ಕೆ ರಾವ್ ಕ್ಯಾಮೆರಾ ವರ್ಕ್.. ಡಾ.ವೈಕಂ ವಿಜಯಲಕ್ಷ್ಮೀ ಗಾಯನ ಎಲ್ಲವೂ ಅತ್ಯಧ್ಬುತವಾಗಿ ಮೂಡಿ ಬಂದಿದೆ. ತಾಯಿ ಹೃದಯವನ್ನು ವರ್ಣಿಸುವ ಈ ಹಾಡಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಸೃಷ್ಟಿಸಿರುವ ಅಲ್ಲು ರಘು ಸುಪುತ್ರಿ ಆರು ತಿಂಗಳ ಮಗು ಯುಕ್ತ ನಟಿಸಿದ್ದು, ಮನಸಿ ಸುಧೀರ್ ಅವರ ಮನೋಜ್ಞ ಅಭಿನಯ ಸಿನಿಮಾ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

‘ಸೂಜಿದಾರ’, ‘ಸಲಗ’, ‘ಏಕ್ ಲವ್‌ ಯಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಗಮನಸೆಳೆದಿರುವ ಯಶ್ ಶೆಟ್ಟಿ ಹೀರೋ ಆಗಿ ಕಾಣಿಸಿಕೊಳ್ಳಲಿದ್ದು ನಾಯಕಿಯಾಗಿ ಅರ್ಚನಾ ಕೊಟ್ಟಿಗೆ ನಟಿಸುತ್ತಿದ್ದಾರೆ. ಉಳಿದಂತೆ ಅಶ್ವಿನ್ ರಾವ್ ಪಲ್ಲಕ್ಕಿ , ಸಂತೋಷ್ ಆಶ್ರಯ್ ನಟಿಸಿದ್ದಾರೆ. ಈ ಹಿಂದೆ ಹಲವು ಸಿನಿಮಾಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ನಿರ್ವಹಿಸಿದ್ದ ಡಿಂಡಿಮ ಜುಗಲ್ ಬಂದಿ ಸಿನಿಮಾ ಮೂಲಕ ನಿರ್ದೇಶನಾಗಿ ಬಡ್ತಿ ಪಡೆದಿದ್ದಾರೆ.

ಉಳಿದಂತೆ ಕೋ ಡೈರೆಕ್ಟರ್ ಆಗಿ ಬಾಲಕೃಷ್ಣ ಯಾದವ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಸಂತೋಷ್, ಶ್ರೀನಿವಾಸ್,ಕೆಲಸ ನಿರ್ವಹಿಸಲಿದ್ದಾರೆ. ಡಿಂಡಿಮ ಕ್ರಿಯೇಷನ್ ನಡಿ ನಿರ್ಮಾಣವಾಗ್ತಿರುವ ಜುಗಲ್ ಬಂದಿ ಸಿನಿಮಾಗೆ ದಿವಾಕರ್ ಡಿಂಡಮ ನಿರ್ದೇಶನದ ಜೊತೆ ಬಂಡವಾಳ ಕೂಡ ಹಾಕಿದ್ದಾರೆ.

https://youtu.be/GTa2zKoN4BU

 

 

 

Be the first to comment

Leave a Reply

Your email address will not be published. Required fields are marked *

Translate »
error: Content is protected !!