‘ರಾಮಾಯಣ’ದ ರಾವಣ ಪಾತ್ರಕ್ಕಾಗಿ ಯಶ್ ದಾಖಲೆಯ 200 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.
ಬಾಲಿವುಡ್ ನ್ ಶಾರುಖ್ ಖಾನ್, ಸಲ್ಮಾನ್, ರಣಬೀರ್ ಕಪೂರ್ ಸೇರಿದಂತೆ ದಕ್ಷಿಣ ನಟರ ಸಂಭಾವನೆಯನ್ನು ಮೀರಿಸಿ ಕನ್ನಡ ನಟ ಯಶ್ ಇತಿಹಾಸ ಬರೆದಿದ್ದಾರೆ.
ಬಾಲಿವುಡ್ ನ ನಿತೇಶ್ ತಿವಾರಿ ನಿರ್ದೇಶದಲ್ಲಿ ಮೂಡಿ ಬರುತ್ತಿರುವ ರಾಮಾಯಣದಲ್ಲಿ ಚಿತ್ರದಲ್ಲಿ ಯಶ್ ರಾವಣ ಪಾತ್ರ ನಿರ್ವಹಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಾಮನ ಪಾತ್ರಧಾರಿ ರಣಬೀರ್ ಕಪೂರ್ ಗಿಂತ ದುಪಟ್ಟು ಸಂಭಾವನೆ ಯಶ್ ಪಾತ್ರದ್ದು ಎಂದು ಹೇಳಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ನಟರ ಪಾತ್ರಕ್ಕಿಂತ ವಿಲನ್ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಬಂದಿದೆ. ನಾಯಕರ ಸಂಭಾವನೆಯೂ ಹೆಚ್ಚಾಗಿರುವುದರಿಂದ ಖಳನಾಯಕರ ಸಂಭಾವನೆಯೂ ಹೆಚ್ಚಿದೆ. ಈಗ ಹೈ ಬಜೆಟ್ ಚಿತ್ರಗಳಲ್ಲಿ ಮುಖ್ಯವಾಹಿನಿಯ ಹೀರೋಗಳು ವಿಲನ್ ಆಗುವ ಸಂಖ್ಯೆ ಹೆಚ್ಚುತ್ತಿದೆ.
ಯಶ್ ರಾವಣನಾಗಿ ಕಾಣಿಸಿಕೊಂಡಿರುವ ಬಹುಕೋಟಿ ವೆಚ್ಚದ ಚಿತ್ರ ಎರಡು ಭಾಗಗಳಾಗಿ ತೆರೆ ಮೇಲೆ ಬರಲಿದೆ. ರಾಮಾಯಣದ ಭಾಗ-1 2026ರ ದೀಪಾವಳಿಯಂದು ಬಿಡುಗಡೆಯಾದರೆ ಭಾಗ -2 2027 ರ ದೀಪಾವಳಿಗೆ ಬಿಡುಗಡೆಯಾಗಲಿದೆ ಎಂದು ಚಿತ್ರ ತಂಡ ತಿಳಿಸಿದೆ.
ಯಶ್ ಒಡೆತನದ ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ಮತ್ತು ನಮಿತ್ ಮಲ್ಹೋತ್ರಾ ಮಾಲೀಕತ್ವದ ಫ್ರೈಮ್ ಪೋಕಸ್ ಸ್ಟುಡಿಯೊ ಜಂಟಿ ಸಹಭಾಗಿತ್ವದಲ್ಲಿ ರಾಮಾಯಣ ಚಿತ್ರ ನಿರ್ಮಾಣವಾಗುತ್ತಿದೆ.
Be the first to comment