ಯಶ್ ಅವರು ತಮಿಳಿನ ಸ್ಟಾರ್ ನಿರ್ದೇಶಕ ಮಿತ್ರನ್ ಜೊತೆ ಕೈ ಜೋಡಿಸಿದ್ದಾರೆ ಎಂದು ಕಾಲಿವುಡ್ ಅಂಗಳದಿಂದ ಸುದ್ದಿ ಹೊರ ಬಿದ್ದಿದೆ.
ಎಸ್ ಮಿತ್ರನ್ 2022ರಲ್ಲಿ ರಿಲೀಸ್ ಆದ ‘ಸರ್ದಾರ್’ ಸಿನಿಮಾನ ಮಿತ್ರನ್ ನಿರ್ದೇಶನ ಮಾಡಿದ್ದರು. ಈಗ ಈ ಚಿತ್ರದ ಸೀಕ್ವೆಲ್ನಲ್ಲಿ ಅವರು ಬ್ಯುಸಿ ಆಗಿದ್ದಾರೆ. ಮಿತ್ರನ್ ಸಿನಿಮಾಗೆ ಯಶ್ ಓಕೆ ಎಂದಿದ್ದಾರೆ ಎಂದು ಸುದ್ದಿ ಹೊರ ಬಿದ್ದಿದೆ.
ನಿರ್ದೇಶಕ ಮಿತ್ರನ್ ಪ್ರಸ್ತುತ ಕಾರ್ತಿ ನಾಯಕನಾಗಿ ನಟಿಸುತ್ತಿರುವ ಸರ್ದಾರ್ 2 ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ನಂತರ ಅವರು ಯಶ್ ಜೊತೆ ಹೊಸ ಚಿತ್ರ ಮಾಡುತ್ತಾರೆ ಎಂಬ ಮಾತು ಕಾಲಿವುಡ್ ನಲ್ಲಿ ಕೇಳಿಬರುತ್ತಿದೆ. ಈ ಚಿತ್ರ ಒಂದು ದೊಡ್ಡ ಆಕ್ಷನ್ ಎಂಟರ್‌ಟೈನರ್ ಆಗಿರುತ್ತದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಶೀಘ್ರದಲ್ಲೇ ಸ್ಪಷ್ಟತೆ ಬರಲಿದೆ. ಈ ಚಿತ್ರ ಕನ್ನಡದಲ್ಲೇ ತಯಾರಾಗಲಿದೆ ಎಂದು ಹೇಳಲಾಗುತ್ತಿದೆ.
ಯಶ್ ಹಾಗೂ ಮಿತ್ರನ್ ಸಿನಿಮಾ ಮಾಡುತ್ತಾರೆ ಎನ್ನುವ ಸುದ್ದಿ 2023ರಲ್ಲಿ ಹುಟ್ಟಿಕೊಂಡು ತಣ್ಣಗಾಗಿತ್ತು. ಯಶ್ ಅವರು ಸದ್ಯ ‘ಟಾಕ್ಸಿಕ್’ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಅದೇ ರೀತಿ ಯಶ್ ‘ರಾಮಾಯಣ’ ಚಿತ್ರದಲ್ಲೂ ತೊಡಗಿಕೊಂಡಿದ್ದಾರೆ.

Be the first to comment