ಯಶ್

‘ರಾವಣ’ನ ಪಾತ್ರದಲ್ಲಿ ಯಶ್

ರಣಬೀರ್ ಕಪೂರ್ ಅಭಿನಯದ ‘ರಾಮಾಯಣ’ದಲ್ಲಿ ರಾವಣನ ಪಾತ್ರಧಾರಿಯಾಗಿ ನಟಿಸುತ್ತಿರುವುದಾಗಿ ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟಪಡಿಸಿದ್ದಾರೆ.

ಸಂದರ್ಶನದಲ್ಲಿ ಮಾತನಾಡಿರುವ  ಯಶ್, ನಿತೇಶ್ ತಿವಾರಿ ನಿರ್ದೇಶನದ ‘ರಾಮಾಯಣ’ದಲ್ಲಿ ತಾವು ರಾವಣನ ಪಾತ್ರದಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿಸಲು ಖುಷಿಯಾಗುತ್ತಿದೆ. ರಾವಣ ಪಾತ್ರದಲ್ಲಿ ನಟಿಸಲು ಸಾಕಷ್ಟು ಉತ್ಸುಕನಾಗಿದ್ದೇನೆ’ ಎಂದಿದ್ದಾರೆ.

‘ರಾವಣ’  ಅದ್ಭುತ ಪಾತ್ರ. ರಾಮಾಯಣದಲ್ಲಿ ಬೇರೆ ಯಾವುದೇ ಪಾತ್ರ ಮಾಡುತ್ತೀರಾ? ಎಂದು ಕೇಳಿದ್ದರೆ ನನಗೆ ರಾವಣ ಪಾತ್ರ  ಮುಖ್ಯ ಎನ್ನುತ್ತಿದ್ದೆ. ನಟನಾಗಿ ರಾವಣನ ಪಾತ್ರದಲ್ಲಿ ನಟಿಸುವುದು ಚಾಲೆಂಜಿಂಗ್ ಹಾಗೂ ರೋಮಾಂಚನಕಾರಿ. ರಾಮಾಯಣ ಒಂದು ದೊಡ್ಡ ಪ್ರಾಜೆಕ್ಟ್.   ರಾವಣನ ಪಾತ್ರಕ್ಕೆ ಕಥೆಗೆ ತಕ್ಕಂತೆ ನ್ಯಾಯ, ಗೌರವ ಒದಗಿಸುವ ನಿಟ್ಟಿನಲ್ಲಿ ಯತ್ನಿಸುವುದಾಗಿ ಯಶ್ ತಿಳಿಸಿದ್ದಾರೆ.

ರಾಮಾಯಣದಲ್ಲಿ ನಟ ರಣಬೀರ್ ಕಪೂರ್ ರಾಮನ ಪಾತ್ರದಲ್ಲಿ ಹಾಗೂ ನಟಿ ಸಾಯಿ ಪಲ್ಲವಿ ಸೀತೆ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ರಣಬೀರ್ ಮತ್ತು ಸಾಯಿ ಪಲ್ಲವಿ ಅವರ ರಾಮ ಮತ್ತು ಸೀತೆಯ ಚಿತ್ರಗಳು ಸೋಷಿಯ ಮೀಡಿಯಾಗಳಲ್ಲಿ  ವೈರಲ್ ಆಗಿವೆ.

ಯಶ್ ರಾವಣನಾಗಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಸಿನಿರಂಗದಲ್ಲಿ ಭಾರಿ ಸುದ್ದಿಯಾಗಿತ್ತು.

Be the first to comment

Leave a Reply

Your email address will not be published. Required fields are marked *

Translate »
error: Content is protected !!