ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮದುವೆಯಲ್ಲಿ ಪಾಲ್ಗೊಳ್ಳಲು ರಾಕಿಂಗ್ ಸ್ಟಾರ್ ಯಶ್ ಪತ್ನಿ ರಾಧಿಕಾ ಸಮೇತ ಮುಂಬೈಗೆ ಬಂದಿದ್ದ ವೇಳೆ ಅವರ ಹೊಸ ಲುಕ್ ವೈರಲ್ ಆಗಿದೆ.
ಜಿಎಫ್ ಸಿನಿಮಾದಲ್ಲಿ ಯಶ್ ಉದ್ದನೆಯ ತಲೆಕೂದಲು ಬಿಟ್ಟುಕೊಂಡು ದಾಡಿ ಬಿಟ್ಟಿದ್ದರು. ಆದರೆ ಈಗ ಉದ್ದನೆಯ ಕೂದಲು ಟ್ರಿಮ್ ಆಗಿದೆ. ಆದರೆ ದಾಡಿ ಮಾತ್ರ ಹೊಸ ರೂಪದಲ್ಲಿ ಎಂದಿನಂತೇ ಇದೆ. ಯಶ್ ರ ಹೊಸ ಹೇರ್ ಸ್ಟೈಲ್ ಎಲ್ಲರ ಗಮನ ಸೆಳೆದಿದೆ.
ಹೊಸ ಲುಕ್ ನಲ್ಲಿ ಯಶ್ ಇನ್ನೂ ಯಂಗ್ ಆಗಿ ಕಾಣುತ್ತಿದ್ದಾರೆ. ಟಾಕ್ಸಿಕ್ ಸಿನಿಮಾಗಾಗಿ ಯಶ್ ಈ ಲುಕ್ ಮಾಡಿಸಿಕೊಂಡಿರಬಹುದು ಎನ್ನಲಾಗಿದೆ. ಸದ್ಯಕ್ಕೆ ಟಾಕ್ಸಿಕ್ ಸಿನಿಮಾ ಕೆಲಸಗಳು ನಡೆಯುತ್ತಿದೆ.
ರಾಕಿಂಗ್ ಸ್ಟಾರ್ ಯಶ್ ಕಳೆದ ಕೆಲವು ಸಮಯದಿಂದ ಸಾರ್ವಜನಿಕವಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಆದರೆ ಈಗ ಅವರು ಬಹಳ ದಿನಗಳ ನಂತರ ಪಪ್ಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಈ ವೇಳೆ ಅವರು ಪಪ್ಪಾರಾಜಿಗಳತ್ತ ನಗುತ್ತಲೇ ಕೈ ಬೀಸಿದರು. ಜೊತೆಗೆ ತಮ್ಮನ್ನು ಸುತ್ತುವರೆದ ಕ್ಯಾಮರಾ ಮ್ಯಾನ್ ಗಳಿಗೆ ಹುಷಾರು ಎಂದೂ ಕಾಳಜಿ ತೋರಿದರು.
—-
Post Views:
109
Be the first to comment