ರಾಕಿಂಗ್ ಸ್ಟಾರ್ ಯಶ್ ನಟನೆಯ ಟಾಕ್ಸಿಕ್ ಟೀಸರ್ ನೋಡಿದ ಸ್ಯಾಂಡಲ್ವುಡ್ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಫುಲ್ ಫಿದಾ ಆಗಿದ್ದಾರೆ.
ರಿಷಬ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಲ್ಲದೇ ನಿರ್ದೇಶಕ ಯೋಗರಾಜ್ ಭಟ್ ಕೂಡ ಟೀಸರ್ ನೋಡಿ ಹೊಗಳಿದ್ದಾರೆ.
“ಇದೊಂದು ಅಸಾಧಾರಣ ಹೆಜ್ಜೆ. ನಮ್ಮೂರ ಹೆಮ್ಮೆಯ ನಟನ ಅಭೂತಪೂರ್ವ ಸಾಹಸಮಯ ಜಾಗತಿಕ ಜರ್ನಿ” ಎಂದು ಯೋಗರಾಜ್ ಭಟ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಟಾಕ್ಸಿಕ್ ಟೀಸರ್ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ಅಪ್ಪ–ಮಗನ ಥೀಮ್ ಗಮನ ಸೆಳೆದಿದೆ. ರಾಯಲ್ ಸರ್ಕಸ್ ಸೆಟ್ಅಪ್ ಕತ್ತಲ ರಾತ್ರಿಯಲ್ಲಿ ಝಗಮಗಿಸುತ್ತಿದ್ದು, ಜೋಕರ್, ಡ್ಯಾನ್ಸರ್, ಆನೆಗಳ ನಡುವೆ ನಡೆಯುವ ರಹಸ್ಯಮಯ ಕೃತ್ಯಗಳ ಫೀಲ್ ಟೀಸರ್ಗೆ ಮೆರಗು ನೀಡಿದೆ.
ಮೊದಲ ಟೀಸರ್ನಲ್ಲಿ ಯಶ್ ಹೇಳುವ “ಡ್ಯಾಡಿ ಈಸ್ ಹೋಮ್” ಡೈಲಾಗ್ಗೆ ವಿರುದ್ಧವಾಗಿ ಈ ಬಾರಿಯ ಟೀಸರ್ ನಲ್ಲಿ “ಡ್ಯಾಡಿ ಆ್ಯಮ್ ಹೋಮ್” ಎಂದು ಹೇಳುವಾಗ ಇರುವ ಯಶ್ ಲುಕ್ನಲ್ಲಿ ಕಾಣುವ ವ್ಯತ್ಯಾಸ ಅಭಿಮಾನಿಗಳ ಗಮನ ಸೆಳೆದಿದೆ.
‘ಟಾಕ್ಸಿಕ್’ ಮೂಲಕ ಯಶ್ ಮತ್ತೊಮ್ಮೆ ಜಾಗತಿಕ ಮಟ್ಟದಲ್ಲಿ ಅಬ್ಬರ ತೋರಲು ವೇದಿಕೆ ಸಿದ್ಧ ಮಾಡಿದ್ದಾರೆ





Be the first to comment