ರಾಕಿಭಾಯ್ ಯಶ್ ‘ರಾಮಾಯಣ’ ಮೊದಲ ಭಾಗದಲ್ಲಿ ರಾವಣನಾಗಿ 15 ನಿಮಿಷವಷ್ಟೇ ದರ್ಶನ ಕೊಡಲಿದ್ದಾರೆ ಎಂದು ಹೇಳಲಾಗಿದೆ. ಇದು ರಾಕಿಭಾಯ್ ಫ್ಯಾನ್ಸ್ ಗೆ ಬೇಸರದ ಸಂಗತಿ ಎಂದು ಹೇಳಲಾಗಿದೆ.
ರಾಮಾಯಣವನ್ನು ಯಶ್ ಹಾಗೂ ನಿಮಿತ್ ಮಲ್ಹೋತ್ರಾ ನಿರ್ಮಾಣ ಮಾಡುತ್ತಿದ್ದಾರೆ. ಸಿನಿಮಾ ಬಜೆಟ್ 1500 ಕೋಟಿ ರೂ. ಎನ್ನಲಾಗ್ತಿದೆ. ಶ್ರೀರಾಮನಾಗಿ ರಣ್‌ಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ನಟಿಸುತ್ತಿದ್ದು ಭಾರೀ ಮೊತ್ತದ ಸಂಭಾವನೆ ಪಡೆಯುತ್ತಿದ್ದಾರೆ. ಮುಂದಿನ ದೀಪಾವಳಿಗೆ ಪ್ಯಾನ್ ವರ್ಲ್ಡ್ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.
ನಿತೇಶ್ ತಿವಾರಿ ನಿರ್ದೇಶನದ ಬಹು ನಿರೀಕ್ಷಿತ ರಾಮಾಯಣ ಚಿತ್ರದ ಮೊದಲ ಟೀಸರ್ ಗೆ ಸಖತ್ ರೆಸ್ಪಾನ್ಸ್ ಸಿಕ್ಕಿದೆ. ಇದರಿಂದ ನಮಿತ್ ಮಲ್ಹೋತ್ರಾ ಅವರ ಪ್ರೈಮ್ ಫೋಕಸ್ ಸ್ಟುಡಿಯೋಸ್ ಕಂಪನಿಗೆ ಭಾರೀ ಹಣಕಾಸು ಲಾಭ ದೊರೆತಿದೆ. ಟೀಸರ್ ಬಿಡುಗಡೆಯಿಂದಾಗಿ ಕಂಪನಿಯ ಷೇರು ಮೌಲ್ಯವು ಕೇವಲ ಎರಡು ದಿನಗಳಲ್ಲಿ 1 ಸಾವಿರ ಕೋಟಿಯಷ್ಟು ಹೆಚ್ಚಳ ಕಂಡಿದೆ.
ರಾಯಾಯಣದಲ್ಲಿ ಮರ್ಯಾದಾ ಪುರುಷೋತ್ತಮ ರಾವಣನಾಗಿರುವ ಬಣ್ಣ ಹಚ್ಚಿರುವ ರಣ್ಬೀರ್ ಕೂಡ ಪ್ರೈಮ್ ಫೋಕಸ್ ಕಂಪನಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಕಂಪನಿಯ ಹೊಸ ಷೇರುಗಳ ಹಂಚಿಕೆಯಲ್ಲಿ ರಣಬೀರ್‌ಗೆ 12 ಲಕ್ಷ ಷೇರುಗಳನ್ನು ನೀಡಲಾಗುತ್ತಿದ್ದು, ಇದನ್ನು ಪ್ರಸ್ತುತ ದರದಲ್ಲಿ ಲೆಕ್ಕ ಹಾಕಿದರೆ 20 ಕೋಟಿ ಹೂಡಿಕೆ ಎಂದು ಹೇಳಲಾಗುತ್ತಿದೆ.
—-





Be the first to comment