‘ಟಾಕ್ಸಿಕ್’ ಹಾಡಿನಲ್ಲಿ ಯಶ್, ಕಿಯಾರಾ ರೊಮ್ಯಾನ್ಸ್

‘ಟಾಕ್ಸಿಕ್’ ಸಿನಿಮಾದ ಮೊದಲ ಹಾಡಿನಲ್ಲಿ ಯಶ್, ಕಿಯಾರಾ ಅಡ್ವಾನಿ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.

ಟಾಕ್ಸಿಕ್’ ಸಿನಿಮಾದ ಮೊದಲ ಹಾಡು ಮಾರ್ಚ್ 2ರಂದು ರಿಲೀಸ್ ಆಗಲಿದೆ. ‘ತಬಾಹಿ’ ಎಂಬ ಈ  ಹಾಡಿನಲ್ಲಿ ಯಶ್ ಮತ್ತು ಕಿಯಾರಾ ಅಡ್ವಾಣಿ  ಕಾಣಿಸಿಕೊಂಡಿದ್ದಾರೆ.  ಹಾಡು ಸಖತ್ ಹಾಟ್ ಮತ್ತು ರೊಮ್ಯಾಂಟಿಕ್ ಆಗಿರಲಿದೆ ಎಂಬುದನ್ನು ಪೋಸ್ಟರ್​ನಲ್ಲಿ ಸೂಚಿಸಲಾಗಿದೆ.

ಹಾಡಿನ ಪೋಸ್ಟರ್​ನಲ್ಲಿ ಯಶ್ ಅವರು ಕಿಯಾರಾ ಅಡ್ವಾಣಿ ಅವರನ್ನು ಎತ್ತಿಕೊಂಡು ಹೋಗುತ್ತಿರುವ ದೃಶ್ಯ ಇದೆ. ಈ ಪೋಸ್ಟರ್​​ನಲ್ಲಿ ಕಿಯಾರಾ ಮುಖ ಕಾಣಿಸಿಲ್ಲ.  ಅವರು ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ‘ತಬಾಹಿ’ ಹಾಡಿನ ಪೋಸ್ಟರ್ ನೋಡುತ್ತಿದ್ದಂತೆ ಯಶ್ ಅಭಿಮಾನಿಗಳ ಕೌತುಕ ಹೆಚ್ಚಾಗಿದೆ. ಸಾವಿರಾರು ಕಮೆಂಟ್​​ಗಳ ಮೂಲಕ ತಮ್ಮ ಎಗ್ಸೈಟ್​ಮೆಂಟ್ ತೋರಿಸಿದ್ದಾರೆ.ಈ  ಹಾಡಿಗೆ ಖ್ಯಾತ ಸಂಗೀತ ನಿರ್ದೇಶಕ ವಿಶಾಲ್ ಮಿರ್ಶಾ ಅವರು  ಸಂಗೀತ ನೀಡಿದ್ದಾರೆ.

ಜೀ ಮ್ಯೂಸಿಕ್’ ಮೂಲಕ ‘ಟಾಕ್ಸಿಕ್’ ಸಿನಿಮಾದ ಎಲ್ಲ ಭಾಷೆಯ ಹಾಡುಗಳು ರಿಲೀಸ್ ಆಗಲಿವೆ. ವಿಶಾಲ್ ಮಿಶ್ರಾ ಅವರು 4 ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿ ಬಸ್ರೂರು ಅವರು ಒಂದು ಹಾಡಿಗೆ ಸಂಗೀತ ನೀಡುವುದರ ಜೊತೆಗೆ ಹಿನ್ನೆಲೆ ಸಂಗೀತದ ಜವಾಬ್ದಾರಿ ನಿಭಾಯಿಸಿದ್ದಾರೆ. ತನಿಷ್ಕ್ ಬಾಗ್ಜಿ ಅವರು ಅರ್ಸ್ಲಾನ್ ನಿಜಾಮಿ ಮತ್ತು ಫಹೀಮ್ ಅಬ್ದುಲ್ಲಾ ಜೊತೆ ಸೇರಿ ಒಂದು ಹಾಡಿಗೆ ಸಂಗೀತ ನೀಡಿದ್ದಾರೆ. ಈ ಸಿನಿಮಾಗೆ ಒಟ್ಟು 5 ಮಂದಿ ಸಂಗೀತ ನಿರ್ದೇಶಕರು ಕೆಲಸ ಮಾಡಿದ್ದಾರೆ.

‘ಟಾಕ್ಸಿಕ್’ ಮಾರ್ಚ್ 19ರಂದು ವಿಶ್ವಾದ್ಯಂತ ರಿಲೀಸ್ ಆಗಲಿದೆ.  ಸಿನಿಮಾವನ್ನು ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ ನಿರ್ಮಾಣ ಮಾಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!