‘ಯಲ್ಲೋ ಗ್ಯಾಂಗ್’ ಚಿತ್ರದ ಟೀಸರ್ ಬಿಡುಗಡೆ

ವಿಭಿನ್ನ ಸ್ಟುಡಿಯೋಸ್ ಕೀಲೈಟ್ಸ್ ಮತ್ತು ವಾಟ್‍ನೆಕ್ಟ್ ಮೂವೀಸ್ ಸಹಯೋಗದಲ್ಲಿ ನಿರ್ಮಾಣವಾಗಿರುವ, ಕ್ರೈಂ-ಥ್ರಿಲ್ಲರ್ ಕಥಾಹಂದರ ಹೊಂದಿದ ಯಲ್ಲೋ ಗ್ಯಾಂಗ್ಸ್ ಚಲನ ಚಿತ್ರದ ಟೀಸರನ್ನು ಕಲಾವಿದರ ಸಂಘದಲ್ಲಿ ನಿರ್ದೇಶಕ ಯೋಗರಾಜ ಭಟ್ಟರು ಬಿಡುಗಡೆ ಮಾಡಿದರು.

ಕೆಲ ದಿನಗಳ ಹಿಂದಷ್ಟೇ ಚಿತ್ರದ ಶೀರ್ಷಿಕೆಯನ್ನೂ ಯೋಗರಾಜ್ ಭಟ್ ಅವರೇ ಬಿಡುಗಡೆ ಮಾಡಿದ್ದರು. ಅಲ್ಲದೆ ನಟ ಧನಂಜಯ ಅವರು ಚಿತ್ರದ ಪಾತ್ರಗಳನ್ನು ಪರಿಚಯಿಸುವ ಪೋಸ್ಟರನ್ನು ಬಿಡುಗಡೆ ಮಾಡಿದ್ದರು.

ರವೀಂದ್ರ ಈಶ್ವರಪ್ಪ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿರುವ ಈ ಚಿತ್ರದಲ್ಲಿ ಹೊಸ ಕಲಾವಿದರ ದಂಡೇ ಇದೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಗಮನ ಸೆಳೆದಿರುವ ದೇವ್ ದೇವಯ್ಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಜೊತೆಗೆ ಅರ್ಚನಾ ಕೊಟಗಿ,ಅರುಣ್ ಕುಮಾರ್, ಸತ್ಯ, ನಾಟ್ಯರಂಗ, ಪ್ರದೀಪ್ ಪೂಜಾರಿ ಸೇರಿದಂತೆ 16 ಪಾತ್ರಗಳು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಶಿಷ್ಯನ ಚಿತ್ರದ ಟೀಸರ್ ರಿಲೀಸ್ ಮಾಡಿದ ಭಟ್ಟರು ರವೀಂದ್ರ ನನ್ಜೊತೆ ಮುಗುಳುನಗೆ ಚಿತ್ರದಲ್ಲಿ ಕೆಲಸ ಮಾಡಿದ್ದರು. ಇದೊಂದು ಅಚ್ಚ ಕನ್ನಡದ ಸಿನಿಮಾ. ಇಂಥ ಚಿತ್ರಗಳಿಗೆ ಹೆಚ್ಚಿನ ಪ್ರಚಾರ ಬೇಕು ಎಂದು ರವೀಂದ್ರ ಅವರ ಹೊಸ ಪ್ರಯತ್ನವನ್ನು ಮೆಚ್ಚಿಕೊಂಡರು.

ನಿರ್ದೇಶಕ ರವೀಂದ್ರ ಈಶ್ವರಪ್ಪ ಮಾತನಾಡಿ ಕಲಾವಿದರೆಲ್ಲ ಹೊಸಬರಾಗಿರುವುದರಿಂದ ಅವರಿಗೆ ಯಾವುದೇ ಕಾರ್ಯಗಾರ ಹಮ್ಮಿಕೊಂಡಿದ್ದಿಲ್ಲ, ಬದಲಾಗಿ ಅವರೇ ಮಾಡಿದ್ದ ವಿಡಿಯೋಗಳನ್ನು ತರಿಸಿಕೊಂಡು ಕಥೆಗೆ ಸೂಕ್ತವಾದವರನ್ನು ಆಯ್ಕೆ ಮಾಡಿಕೊಂಡೆವು. ಕಳೆದ ವರ್ಷವೇ ಚಿತ್ರವನ್ನು ಪೂರ್ಣಗೊಳಿಸಿದ್ದರೂ ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ರಿಲೀಸ್ ತಡವಾಯಿತು.

ಬರುವ ಫೆಬ್ರವರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಉದ್ದೇಶವಿದೆ ಎಂದು ಹೇಳಿದರು. ಚಿತ್ರದಲ್ಲಿ ಮೂರು-ನಾಲ್ಕು ಗ್ಯಾಂಗ್ ಕಥೆಯಿದೆ. ಇಲ್ಲಿ ಕಥೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಎಲ್ಲರೂ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು. ಛಾಯಾಗ್ರಹಣ ಮಾಡಿದ ಸುಜ್ಞಾನ್ ಮಾತನಾಡುತ್ತ ಮೊದಲು ಈ ಕಥೆ ಕೇಳಿಯೇ ನಾನು ಥ್ರಿಲ್ ಆಗಿಹೋದೆ. ಕಥೆಗೆ ಹೆಚ್ಚಿನ ಮಹತ್ವ ಕೊಟ್ಟು ಮಾಡಿರೋ ಚಿತ್ರ. ಕ್ಲೈಮ್ಯಾಕ್ಸ್‍ವರೆಗೆ ಗುಟ್ಟನ್ನು ಬಿಟ್ಟುಕೊಡದೆ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.

ನಟ ದೇವ್ ದೇವಯ್ಯ ಮಾತನಾಡಿ, ನಿರ್ದೇಶಕರು ಯಾವ ವಿಷಯದಲ್ಲಿಯೂ ಗೊಂದಲ ಇಟ್ಟುಕೊಳ್ಳದೆ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಥ್ರಿಲ್ಲರ್ ಚಿತ್ರ ಜನರಿಗೆ ಖಂಡಿತ ಇಷ್ಟವಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಚಿತ್ರದ ನಾಯಕಿ ಅರ್ಚನಾ ಕೊಟಗಿ ಮಾತನಾಡಿ, ಒಳ್ಳೆಯ ತಂಡದಲ್ಲಿ ಭಾಗಿಯಾಗಿರುವುದಕ್ಕೆ ಖುಷಿಯಾಗಿದೆ. ಪ್ರಿಯಾ ಎಂಬ ಜರ್ನಲಿಸ್ಟ್ ಪಾತ್ರ ನನ್ನದು ಎಂದರು.

ಈ ಚಿತ್ರಕ್ಕೆ 25 ದಿನಗಳ ಕಾಲ ಎರಡು ಹಂತಗಳಲ್ಲಿ ಸಂಪೂರ್ಣವಾಗಿ ಬೆಂಗಳೂರಿನಲ್ಲಿಯೇ ಚಿತ್ರೀಕರಣ ನಡೆಸಲಾಗಿದೆ. ಅಲ್ಲದೆ ಚಿತ್ರಕ್ಕೆ ರೋಹಿತ್ ಸೋವರ್ ಅವರ ಸಂಗೀತ ಸಂಯೋಜನೆ, ಸುರೇಶ್ ಆರ್ಮುಗಂ ಅವರ ಸಂಕಲನವಿದೆ.ಚಿತ್ರದ ಸಂಭಾಷಣೆಯನ್ನು ರವೀಂದ್ರ ಪರಮೇಶ್ವರಪ್ಪ ಹಾಗೂ ಪ್ರವೀಣ್‍ಕುಮಾರ್ ಜಿ ಅವರು ಬರೆದಿದ್ದಾರೆ. ಮನೋಜ್ ಪಿ, ಜಿ.ಎಂ.ಆರ್. ಕುಮಾರ್ (ಕೆವಿಜಿ), ಡಿ.ಎಸ್. ಪ್ರವೀಣ್ ಹಾಗೂ ಜೆ.ಎನ್.ವಿ, ಶಿವಮೊಗ್ಗ ಶಾಲೆಯ ಮಾಜಿ ವಿದ್ಯಾರ್ಥಿಗಳು ಈ ಚಿತ್ರದ ಸಹ ನಿರ್ಮಾಪಕರಾಗಿದ್ದಾರೆ. ಲೋಕೇಶ್ ಹಿತ್ತಲಕೊಪ್ಪ ಕಾರ್ಯಕಾರಿ ನಿರ್ಮಾಪಕರು. ಚಿತ್ರಕ್ಕೆ ಚೇತನ್ ಡಿಸೋಜಾ ಅವರ ಸಾಹಸ ಸಂಯೋಜನೆ ಮತ್ತು ದಿಲೀಪ್ ಶಿವಾನಂದ ಅವರ ವಸ್ತ್ರ ವಿನ್ಯಾಸವಿದೆ.

ಪ್ರಮುಖ ತಾರಾಗಣದಲ್ಲಿ ದೇವ್ ದೇವಯ್ಯ, ಅರ್ಚನಾ ಕೊಟ್ಟಿಗೆ, ಬಲ ರಾಜ್ವಾಡಿ , ನಾಟ್ಯರಂಗ, ಸತ್ಯ ಉಮ್ಮತ್ತಾಲï, ಪ್ರದೀಪ್ ಪೂಜಾರಿ, ವಿನೀತ್ ಕಟ್ಟಿ, ಮಲ್ಲಿಕಾರ್ಜುನ ದೇವರಮನೆ, ನಂದಗೋಪಾಲï, ರವಿ ಗಜ ಜಿಗಣಿ, ನೀನಾಸಂ ದಯಾನಂದ್, ಸತ್ಯ ಬಿ.ಜಿ, ವಿಠ್ಠಲ್ ಪರೀಟ, ಅರುಣ್ ಕುಮಾರ್, ಶ್ರೀಹರ್ಷ, ಸಂಚಾರಿ ಮಧು, ಪ್ರವೀಣ್ ಕೆ.ಬಿ, ಪವನ್ ಕುಮಾರ್ ಕೆ. ಮುಂತಾದವರಿದ್ದಾರೆ. ಚಿತ್ರಕ್ಕಾಗಿ ಪ್ರವೀಣ್ ಮೇಗಳಮನಿ ಅವರು ಮಾಡಿದ ಪ್ರಚಾರ ವಿನ್ಯಾಸದ ಪೋಸ್ಟರುಗಳು ವೀಕ್ಷಕರನ್ನು ಸೆಳೆಯುತ್ತಿವೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!