‘ಯಜಮಾನ’ ಸೋಲಿಗೆ ಅಸಲಿ ಕಾರಣ ಏನು ಗೊತ್ತಾ?
‘ಮಿಡಿಯಾ ಹೌಸ್’ ನಿರ್ಮಾಣದ ದರ್ಶನ್ ಅಭಿನಯದ ‘ಯಜಮಾನ’ ಚಿತ್ರ ಬಿಡುಗಡೆಯಾದ ಕೆಲವೇ ದಿನಕ್ಕೆ ಕಲೆಕ್ಷನ್ ವಿಚಾರದಲ್ಲಿ ಗೋತ ಹೊಡೆದಿದೆ. ಇದಕ್ಕೆ ಕಾರಣ ಹಲವು ಇದ್ದರೂ, ನಿರ್ಮಾಪಕರಾದ ಬಿ.ಸುರೇಶ್ ಯಾನೆ ಬೀಸು ಮತ್ತು ಆತನ ಧರ್ಮಪತ್ನಿ ಶೈಲಾಜಾನಾಗ್ ಅವರ ಓವರ್ ಕಾನ್ಫಿಡೆನ್ಸ್ ಮತ್ತು ಮುದ್ರಣ ಮಾಧ್ಯದ ಬಗ್ಗೆ ಅವರಿಗಿರುವ ತಾತ್ಸಾರ ಬಹು ಮಖ್ಯ ಕಾರಣ ಎಂಬುದು ಸೋ ಸ್ಯಾಡ್ ಸಂಗ್ತಿ.
ಚಿತ್ರದ ಆರಂಭದಿಂದಲೂ ಚಿತ್ರ ನಿರ್ದೇಶಕನ ಬಗ್ಗೆ ಗೊಂದಲದಲಿದ್ದ ಬೀಸು. `ಯಜಮಾನ’ ಮಾತಿಗೆ `ಯಸ್ ಸರ್’ ಅಂತಸ್ಟೇ ಹೇಳುತ್ತಿದ್ದಾರೆಂಬುದು ಎಂಥಾ ಚಿಲ್ಟುಗಳಿಗೂ ಅರ್ಥವಾಗುತಿತ್ತು. ಇನ್ನು. ದರ್ಶನ್ ಇಂಟರ್‍ವ್ಯೂವ್‍ಗಳಲ್ಲಿ ‘ನಮ್ಮೊ ನಮ್ಮೊಳಗೆ ಸ್ಟಾರ್‍ವರ್ ಯಾಕೆ.. ನಾವೆಲ್ಲರೂ ಒಂದು..’ ಎಂಬ ಅರ್ಥದಲ್ಲಿ ಮಾತನಾಡುತ್ತಾರೆ. ಇದೇ ಡಿ ಬಾಸ್ ಸ್ಕ್ರೀನ್‍ಮೇಲ್ ಯಶ್ ಹೆಸರೇಳದೆ ಅವರಿಗೇ ಟಾಂಗ್ ಕೊಡುವ ಡೈಲಾಗ್‍ಗಳನ್ನು ಹೇಳುತ್ತಾರೆ. ಪಾಪ.. ಇರಲಿ ಬಿಡಿ ಅಸ್ತಿತ್ವದ ಪ್ರಶ್ನೆ ಅಲ್ವೇ? ಕೆ.ಜಿ.ಎಫ್’ ಎಲ್ಲಿ
ಯಜಮಾನ’ ಎಲ್ಲಿ ಅಲ್ವೇ?ಈಗ ಬೀಸು ಮತ್ತು ಶೈಲಾಜಾನಾಗ್ ಅವರ ಓವರ್ ಕಾನ್ಫಿಡೆನೆಸ್ ಮತ್ತು ಮುದ್ರಣ ಮಾಧ್ಯದ ಬಗ್ಗೆ ಅವರಿಗಿರುವ ತಾತ್ಸಾರದ ವಿಷ್ಯಕ್ಕೆ ಬರೋಣ. ಹೌದು. ಲೋ ಬಜೆಟ್‍ನಲ್ಲಿ ರೀಲ್ ಸುತ್ತಿ, ಅದಕ್ಕೆ ‘ಆರ್ಟ್‍ಸಿನ್ಮಾ’ ಎಂಬ ಲೇಬಲ್ ಹಾಕಿ ಒಂದಷ್ಟು ದುಡ್ಡು ಮಾಡಿಕೊಂಡು ಓಡಾಡಿಕೊಂಡಿದ್ದರು ಬೀಸು ಮಾಸ್ಟರ್.
ಮಿಡಿಯಾಹೌಸ್ ನಿರ್ಮಿಸಿದ ಇವರ ಚಿತ್ರಗಳನ್ನು, ದು’ರ್ಬುದ್ಧಿ’ ಜೀವಿಗಳು ಫಿಲ್ಮ್ ಫೆಸ್ಟಿವಲ್ ಗಳಲ್ಲಿ ನೋಡಿದ್ದು ಬಿಟ್ಟರೆ, ಯಾವ ಚಿತ್ರವೂ ಜನಮಾನಸದಲ್ಲಿ ನೆಲೆ ನಿಲ್ಲಲಿಲ್ಲ. ಇಂತಹ ಚಿತ್ರಗಳಿಗೆ ಖಂಡಿತಾ ಪ್ರಮೋಷನ್‍ಗಾಗಿ ದುಡ್ಡು ಹಾಕುವುದು ಹೆಡ್ಡತನ, ಆದರೆ ದರ್ಶನ್ ಅನ್ನು ಮುಂದಿಟ್ಟುಕೊಂಡು ಒಂದು ಕಮರ್ಶಿಯಲ್ ಚಿತ್ರ ಮಾಡಲು ಹೊರಟಾಗಲೂ ತನ್ನ ‘ಆರ್ಟ್’ ಪಾಲಿಸಿಯನ್ನು ಇಲ್ಲಿ ಅಪ್ಲೈ ಮಾಡಿದ್ರೆ ಜನ ಥೀಯೆಟರ್ ಬಂದಾರೆಯೇ?’ನಾನು ಯಾವ ಸಿನ್ಮಾ ಪತ್ರಿಕೆಯನ್ನೂ ಓದುವುದಿಲ್ಲ. ಇಲ್ಲಿನ ಸಿನ್ಮಾ ಪತ್ರಿಕೆ ನೆನೆದುಕೊಂಡರೆ ವಾಕರಿಕೆ ಬರುತ್ತದೆ.. ಓದುವುದು ಬೀಡಿ ಸಿನಿಮಾ ಪತ್ರಿಕೆಯನ್ನು ಕಣ್ಣೆತ್ತಿಯೂ ನೋಡಲಾರೆ..’ ಎಂಬರ್ಥದಲ್ಲಿ ತಾನೋಬ್ಬ ಡಿಫೆರೆಂಟು ತುಂಡು ಎಂದು ಪೋಸು ಕೋಡುತ್ತಾರೆ ಗ್ರೇಟ್ ಪ್ರೋಡ್ಯೂಸರ್ ಬೀಸು. ಇನ್ನು, ಶೈಲಾಜ್ ಮೇಡಂ ವಿಚಾರಕ್ಕೆ ಬಂದ್ರೆ. ಸಿನಿಮಾ ಜಾಹಿರಾತಿಗಾಗಿ ಇವರನ್ನು ಸಂಪರ್ಕಿಸಿದರೆ..`ನಾವು ರಿಯಲ್ ಎಷ್ಟೇಟ್ ದುಡ್ಡಿನಿಂದ ಅಥವಾ ಬ್ಲಾಕ್‍ಮನಿಯಿಂದ ದರ್ಶನ್ ಸಿನ್ಮಾ ನಿರ್ಮಿಸಿಲ್ಲ. ಇದು ನಮ್ಮ ಶ್ರಮದ ದುಡ್ಡು. ಆದ್ದರಿಂದ ಪತ್ರಿಕೆಯ ಜಾಹಿರಾತಿಗೆ ನಾವು ಜೋತು ಬೀಳುವ ಅಗತ್ಯವಿಲ್ಲ..’ ಅಂತ ಮಾತನಾಡುತ್ತಾರೆ. ಹಾಗಿದ್ದರೆ ದರ್ಶನ್ ಅಭಿನಯಿಸಿದ ಇಲ್ಲಿವರಗಿನ ಚಿತ್ರ ತಯಾರಾಗಿದ್ದು ಇನ್ನಯಾರದ್ದೋ ಪಾಪದ ಹಣದಿಂದಲಾ? ಈ ಬೀಸು ದಂಪತಿಗಳು ಮಾತ್ರ ಇಂಡಸ್ಟ್ರಿಯ ಸಾಚಾಗಳಾ? ಹೀಗೆ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ದರ್ಶನ್ ಡೇಟ್ಸ್ ಸಿಕ್ಕದೆ ಅನ್ನೋ ಕಾರಣಕ್ಕೆ ಇಡೀ ಪತ್ರಿಕಾ ಸಮೂಹವನ್ನೇ ಕಡೆಗೆಣಿಸುವಷ್ಟು ಹೆಡ್‍ವೈಟ್ ತಂದಿಕೊಂಡಿರುವ ಈ ದಂಪತಿಗಳು ತಮ್ಮ ಕೂಸನ್ನು ತಮ್ಮ ಕೈಯಾರೆ ಕೊಲ್ಲಲು ಹೊರಟಿರುವುದು ಸದ್ಯಕ್ಕೆ ಇವರ ಅರಿವಿಗೆ ಬಂದಿಲ್ಲ.
ದರ್ಶನ್‍ರಿಗೂ ಇವರ ಧೋರಣೆ ಅರ್ಥವಾಗಿರಬೇಕು. ಅದಕ್ಕೇ ಚಾನೆಲ್ ಕರೆದಾಗಲೆಲ್ಲಾ ಕ್ಯಾಮರಾ ಮುಂದೆ ಕೂತು..’ಅದು ಹಾಗಲ್ಲಮ್ಮಾ.. ನೋಡಮ್ಮಾ.. ಹೌದಮ್ಮಾ..’ ಹೀಗೆ ಬೇಸರ ಹುಟ್ಟಿಸುವಷ್ಟು ಸಲ ಅಮ್ಮ ಅಮ್ಮ ಎಂದು ಬೋರ್ ಹೊಡೆಸುತ್ತಿರುವುದು. ಚಿತ್ರದ ಗಳಿಕೆ ದಿನದಿಂದ ದಿನಕ್ಕೆ ಇಳಿಮುಖ ವಾಗುತ್ತಿರುವುದರ ಬಗ್ಗೆ ಕೇಳಿದರೆ `ಅಭಿನಂದನ್ ಎಫೆಕ್ಟ್’ ಎಂಬ ರೀಸನ್ ಮುಂದಿಡುವ ಚಿತ್ರತಂಡ ಚಿತ್ರವೊಂದನ್ನು ಜನರ ಮಡಿಲಿಗೆ ತಲುಪಿಸುವ ವಿಚಾರದಲ್ಲಿ ಸಾಕಷ್ಟು ತಿಳಿದುಕೊಳ್ಳಬೇಕಿದೆ.
ಸದ್ಯಕ್ಕೆ ಮೊದಲ ಮೂರುದಿನ ಚೆನ್ನಾಗಿ ಪ್ರದರ್ಶನ ಕಂಡಿದೆ. ಆದರೆ ಅದು ದರ್ಶನ್ ಹೆಸರಿನ ಕರಾಮತ್ತು. ಆದರೆ ಈ ಕ್ರೇಜ್ ಮುಂದುವರಿಯುವ ಸಾಧ್ಯತೆ ಇಲ್ಲವೆನ್ನಲಾಗುತ್ತಿದೆ. ಕಪ್ತಾನನಿಲ್ಲದ ಯಜಮಾನ ಎಂಬ ಶಿಪ್ಪು ಪ್ರೇಕ್ಷಕರ ಕೈಗೆ ಚಿಪ್ಪು ನೀಡಿರುವುದು ಸತ್ಯ.
#Yajamana,#Darshan_Thugudeep,#Rashamika_Mandanna,
Be the first to comment