Simhapriya: ಯದಾ ಯದಾಹಿ ಪ್ರೀಮಿಯರ್ ಶೋಗೆ ಕೇವಲ ಒಂದು ರೂ.!

ಮದುವೆಯ ಬಳಿಕ ಮೊದಲ ಬಾರಿಗೆ ವಸಿಷ್ಟ ಸಿಂಹ ಹಾಗೂ ಹರಿಪ್ರಿಯ ಜೊತೆಯಾಗಿ ಕಾಣಿಸಿಕೊಂಡಿರುವ ಯದಾ ಯದಾಹಿ ಚಿತ್ರದ ಪ್ರೀಮಿಯರ್ ಶೋಗೆ ಕೇವಲ ಒಂದು ರೂಪಾಯಿ ನಿಗದಿಪಡಿಸಲಾಗಿದೆ.

ಮೇ 31 ರಂದು ಸಂಜೆ ಯದಾ ಯದಾಹಿ ಸಿನಿಮಾದ ಪ್ರೀಮಿಯರ್ ಶೋವನ್ನು ಬೆಂಗಳೂರಿನ ವೀರೇಶ ಚಿತ್ರಮಂದಿರ ಹಾಗೂ ಹುಬ್ಬಳ್ಳಿಯ ಸುಧಾ ಚಿತ್ರಮಂದಿರಗಳಲ್ಲಿ ನಿಗದಿ ಮಾಡಲಾಗಿದೆ. ಕೇವಲ ಒಂದು ರೂಪಾಯಿ ನೀಡಿ ಇಲ್ಲಿ ಸಿನಿಮಾ ನೋಡುವ ಅವಕಾಶವನ್ನು ಚಿತ್ರತಂಡ ನೀಡಿದೆ.

ಚಿತ್ರದಲ್ಲಿ ಹರಿಪ್ರಿಯಾ ಅವರು ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯಾ ಅವರ ಪಾತ್ರದ ಮೇಲೆ ಇಡೀ ಚಿತ್ರ ನಿಂತಿದೆ. ಇದು ಕುತೂಹಲ ಉಂಟು ಮಾಡಿದೆ.

ಶಾಲಿನಿ ಎಂಟರ್ಪ್ರೈಸಸ್ ಮೂಲಕ ಜಾಕ್ ಮಂಜು ಅವರು ಚಿತ್ರವನ್ನು ರಿಲೀಸ್ ಮಾಡುತ್ತಿದ್ದಾರೆ. ತೆಲುಗು ಮೂಲದ ಅಶೋಕ ತೇಜ ಅವರು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗೈಸ್ ಆಂಡ್ ಡಾಲ್ಸ್ ಕ್ರಿಯೇಶನ್ ಮೂಲಕ ರಾಜೇಶ್ ಅಗರವಾಲ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರದ ಟೈಟಲ್ ಸಾಂಗ್ ಅನ್ನು ವಸಿಷ್ಠ ಸಿಂಹ ಹಾಗೂ ಹರಿಪ್ರಿಯ ಅವರು ಜೊತೆಯಾಗಿ ಹಾಡಿರುವುದು ವಿಶೇಷ ಆಗಿದೆ.
__

Be the first to comment

Leave a Reply

Your email address will not be published. Required fields are marked *

Translate »
error: Content is protected !!