ಬೆಂಗಳೂರು, 21 ಜೂನ್ 2019: ಕಮಾರ್ ಫಿಲಂ ಫ್ಯಾಕ್ಟರಿಯ ಪ್ರಸ್ತುತಿಯಲ್ಲಿ ಫ್ಯಾಷನ್ ಟಿ.ವಿ ಜಂಟಿಯಾಗಿ ನಡೆಸುತ್ತಿರುವ “ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್” ಕಾರ್ಯಕ್ರಮದ ಪ್ರತಿಭಾನ್ವೇಷಣೆ ನಡೆಸಲು ಚಾಲನೆ ನೀಡಲಾಯಿತು. “ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್” ಇದಕ್ಕೆ ಚಲನಚಿತ್ರ ತಾರೆಯರಾದ ಸಿಂಧೂ ಲೋಕನಾಥ್, ಪ್ರಿಯಾಂಕ ಉಪೇಂದ್ರ ಮತ್ತು ನಗರದ ಮಾಡೆಲ್‍ಗಳು ಅತಿಥಿಗಳಾಗಿ ಆಗಮಿಸಿದ್ದರು.
“ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್” ಇದು ಮಹಿಳೆಯರಿಗಾಗಿ ನಡೆಸುತ್ತಿರುವ ಕಾರ್ಯಕ್ರಮ. ಎಲೆಮರೆಯ ಕಾಯಂತೆ ಇರುವ ಟ್ಯಾಲೆಂಟ್‍ಗಳನ್ನು ಹೊರತರುವ ಪ್ರಯತ್ನ ಈ ವೇದಿಕೆಯದಾಗಿದೆ. ಫ್ಯಾಷನ್ ಜಗತ್ತಿಗೆ ಪ್ರವೇಶ ಪಡೆಯಬೇಕೆನ್ನುವ ಸ್ತ್ರೀಯರಿಗೆ ಇದು ಒಂದೆಡೆ ವೇದಿಕೆಯಾದರೆ. ಇನ್ನೊಂದೆಡೆ ಬೆಂಗಳೂರಿನಲ್ಲಿರುವ ಸಾಕಷ್ಟು ಯುವ ಡಿಸೈನ್‍ರ್‍ಗಳಿಗೂ ಅವಕಾಶ ನೀಡುವ ಉದ್ದೇಶ ಇದರದಾಗಿದೆ. ಇಲ್ಲಿ ರೆಟ್ರೋ ಕಾಲದಲ್ಲಿ ಮಿಂಚಿದ ಕಲಾವಿದರುಗಳಿರುತ್ತಾರೆ. ಟ್ರೆಂಡಿಂಗ್ ತಾರೆಯರು ಇರುತ್ತಾರೆ. ಕಾಲೇಜು ಹುಡುಗಿಯರೂ ಇರುತ್ತಾರೆ, ವರ್ಕಿಂಗ್ ಪ್ರೊಫೆಷನಲ್ಸ್ ಹಾಗೂ ಗೃಹಿಣಿಯರೂ ಇರುತ್ತಾರೆ.
“ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್” ಕಾರ್ಯಕ್ರಮದಲ್ಲಿ ನೀವು ನಿಮ್ಮ ಮಾರ್ಜಾಲ ನಡಿಗೆಯನ್ನು ಪ್ರದರ್ಶಿಸಬೇಕೇ, ನಿಮ್ಮಲ್ಲಡಗಿರುವ ಪ್ರತಿಭೆಯು ಅವಕಾಶಕ್ಕಾಗಿ ಹಂಬಲಿಸುತ್ತಿದ್ದರೆ, ನಿಮ್ಮ ವಯಸ್ಸು 18 ರಿಂದ 50 ವರ್ಷದೊಳಗಿದ್ದರೆ ಈಗಲೇ ನಿಮ್ಮ ಸಂಪೂರ್ಣವಾದ ವಿವರಗಳು, ಭಾವಚಿತ್ರದ ಜೊತೆಗೆ ವೈಟಲ್ ಸ್ಟ್ಯಾಟಿಕ್ಸ್ ನಮಗೆ ಜುಲೈ 30 ರೊಳಗೆ ಇಮೇಲ್ ಮಾಡಿ:
ಫ್ಯಾಷನ್ ಟಿ.ವಿ.ಯ ಭಾರತದ ಮಾಲೀಕ ಕಮಾರ್ ಹೇಳುವಂತೆ, “ಫ್ಯಾಷನ್ ಜಗತ್ತು ಈಗ ಅತಿ ವೇಗದಲ್ಲಿ ಸಾಗುತ್ತಿದೆ. ರಾಷ್ಟ್ರೀಯ ಮಟ್ಟದಲ್ಲಿ ಕಾಣುತ್ತಿರುವ ಬೆಳವಣಿಗೆಯನ್ನು ನಮ್ಮ ನಗರಕ್ಕೂ ಬೆಂಗಳೂರಿಗರಿಗೂ ತಲುಪಿಸಬೇಕು, ಪ್ರತಿಯೊಬ್ಬ ಸ್ತ್ರೀಯಲ್ಲೂ ಹುದುಗಿರುವ ಪ್ರತಿಭೆಯನ್ನು ಹೊರತರಬೇಕು ಎಂಬ ಮಹಾತ್ವಾಕಾಂಕ್ಷೆಯಿಂದ ಈ “ವುಮೆನ್ಸ್ ಡೇ ಔಟ್ ವಿಥ್ ಫ್ಯಾಷನ್” ಕಾರ್ಯಕ್ಕೆ ಮುಂದಾಗಿದ್ದೇವೆ. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರೀಯೆ ದೊರೆಯುವುದು ಎಂಬ ಭರವಸೆ ನಮ್ಮದು.”
ಎಫ್ ಟಿವಿ ಬಗ್ಗೆ: 1997ರಲ್ಲಿ ಪ್ರಾರಂಭವಾದಾಗಿನಿಂದಲೂ ಎಫ್ ಟಿ ವಿ ಫ್ಯಾಷನ್ ಮತ್ತು ಲೈಫ್ ಸ್ಟೈಲ್ ಗಳಲ್ಲಿ ಅತ್ತುತ್ತಮ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿ ಅದನ್ನು ಅತ್ಯುನ್ನತ ಮಟ್ಟಕ್ಕೆ ತೆಗೆದುಕೊಂಡ ಹೆಗ್ಗಳಿಕೆಯನ್ನು ಸೃಷ್ಟಿಸಿದೆ. ಬೇರೆ ಯಾವ ಜಾಲತಾಣಗಳಲ್ಲೂ ದೊರೆಯದ ಫ್ಯಾಷನ್ ಕುರಿತ ಮಾಹಿತಿಯನ್ನು ವಸ್ತುನಿಷ್ಠವಾಗಿ ನೀಡುವ ಏಕೈಕ ವಾಹಿನಿಯಾಗಿದ್ದು ಫ್ಯಾಷನ್ ಜಗತ್ತಿನ ಅತ್ಯದ್ಭುತ ಚಿತ್ರಗಳು ಮತ್ತು ಅದರ ಕುರಿತ ಪ್ರತ್ಯೇಕ ಮಾಹಿತಿಗಳೊಂದಿಗೆ ತಿಳುವಳಿಕೆ ಮೂಡಿಸಿ ವಿಶ್ವಮಟ್ಟದ ಬ್ರಾಂಡ್ಗಜಳನ್ನು ತನ್ನತ್ತ ಸೆಳೆಯುತ್ತಿರುವ ವಾಹಿನಿ ಎಫ್.ಟಿ.ವಿ. ಆಗಿದೆ.
Pingback: CI-CD