ಆಗಸ್ಟ್ 26ಕ್ಕೆ ‘ವಿಕಿಪೀಡಿಯ’ ತೆರೆಗೆ

ಯುವ ಪ್ರತಿಭೆಗಳ ಚಿತ್ರ ‘ವಿಕಿಪೀಡಿಯ’ ಆಗಸ್ಟ್ 26 ರಂದು ಬಿಡುಗಡೆ ಆಗಲಿದೆ.

ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿದೆ. ಆಗಸ್ಟ್ 6 ರಂದು ಟ್ರೈಲರ್ ಬಿಡುಗಡೆಯಾಗಲಿದೆ.

ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ ‘ವಿಕಿಪೀಡಿಯ’ ಸಿನಿಮಾದ ಕೆಲಸಗಳು ಸದ್ದಿಲ್ಲದೆ ಪೂರ್ಣಗೊಂಡಿದೆ. ಈಗಾಗಲೇ ಸೆನ್ಸಾರ್‌ ಮಂಡಳಿಯಿಂದ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ.

ಕಿರುತೆರೆಯಲ್ಲಿ ‘ಸತ್ಯಂ ಶಿವಂ ಸುಂದರಂ’, ‘ಒಂದೂರಲ್ಲಿ ರಾಜರಾಣಿ’, ‘ಮಹಾದೇವಿ’, ‘ಶಾಂತಂ ಪಾಪಂ’, ‘ಯಾರೇ ನೀ ಮೋಹಿನಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಯಶವಂತ್‌ ‘ವಿಕಿಪೀಡಿಯ’ ಸಿನಿಮಾ ಮೂಲಕ ನಾಯಕ ನಟನಾಗಿ ಎಂಟ್ರಿ ನೀಡುತ್ತಿದ್ದಾರೆ. ‘ವಿಕಿಪೀಡಿಯ’ ಸಿನಿಮಾದಲ್ಲಿ ವಿಕಾಸ್‌ ಎಂಬ ಪಾತ್ರದಲ್ಲಿ ಯಶವಂತ್‌ ಬಣ್ಣ ಹಚ್ಚಿದ್ದಾರೆ. ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್‌ ಕಾಣಿಸಿಕೊಂಡಿದ್ದಾರೆ.

‘ರಫ್ ಕಟ್‌ ಪ್ರೊಡಕ್ಷನ್‌’ ಬ್ಯಾನರ್‌ ಅಡಿಯಲ್ಲಿ ನಿರ್ಮಾಣವಾಗಿರುವ ‘ವಿಕಿಪೀಡಿಯ’ ಸಿನಿಮಾಕ್ಕೆ ಸೋಮು ಹೊಯ್ಸಳ ಆಕ್ಷನ್‌-ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಚಿದಾನಂದ್‌ ಹೆಚ್‌.ಕೆ ಛಾಯಾಗ್ರಹಣ, ರವಿಚಂದ್ರನ್‌ ಸಿ. ಸಂಕಲನವಿದೆ. ಹಾಡುಗಳಿಗೆ ರಾಕೇಶ್‌ ಯು. ಪಿ ಮತ್ತು ನಿಲೀಮ ರಾವ್‌ ಸಂಗೀತ ಸಂಯೋಜಿಸಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ‘ವಿಕಿಪೀಡಿಯ’ ಸಿನಿಮಾದ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಇದರ ಬೆನ್ನಲ್ಲೆ ಸಿನಿಮಾ ತಂಡ ‘ತನು ಮನ’ ಹಾಡನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
___

 

Be the first to comment

Leave a Reply

Your email address will not be published. Required fields are marked *

Translate »
error: Content is protected !!