ಯಶ್ ನಟನೆಯ ‘ಟಾಕ್ಸಿಕ್’ ಸಿನಿಮಾದ ಟ್ರೇಲರ್ ಮಾರ್ಚ್ 8ರಿಂದ 10ರ ವೇಳೆಗೆ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಆಲೋಚನೆ ಮಾಡುತ್ತಿದೆ.
‘ಟಾಕ್ಸಿಕ್’ ಸಿನಿಮಾ ರಿಲೀಸ್ ಮಾರ್ಚ್ 19ರಂದು ರಿಲೀಸ್ ಆಗಲಿದೆ. ಅದಕ್ಕೂ 8-10 ದಿನ ಮೊದಲು ಟ್ರೇಲರ್ ರಿಲೀಸ್ ಮಾಡಿದರೆ ಟಾಕ್ ಜೋರಾಗಿಯೇ ಇರುತ್ತದೆ. ಆ ದೃಷ್ಟಿಯಲ್ಲಿ ಪ್ಲ್ಯಾನಿಂಗ್ಗಳು ನಡೆಯುತ್ತಿವೆ.
ಟಾಕ್ಸಿಕ್’ ಸಿನಿಮಾದ ಟೀಸರ್ ರಿಲೀಸ್ ಆಗಿ ಹಲವು ದಿನಗಳು ಕಳೆದರೂ ಅದರ ಬಗ್ಗೆ ಶುರುವಾದ ಚರ್ಚೆ ನಿಂತಿಲ್ಲ. ಟೀಸರ್ನಲ್ಲಿ ಯಶ್ ಅವರನ್ನು ಮಾತ್ರ ತೋರಿಸಲಾಗಿದೆ. ಚಿತ್ರದಲ್ಲಿ ನಯನತಾರಾ, ರುಕ್ಮಿಣಿ ವಸಂತ್, ಕಿಯಾರಾ ಅಡ್ವಾಣಿ ಸೇರಿದಂತೆ ಅನೇಕರಿದ್ದಾರೆ. ಅವರೆಲ್ಲರನ್ನೂ ಟ್ರೇಲರ್ನಲ್ಲಿ ಜನರ ಎದುರು ಬರಲಿದ್ದಾರೆ ಎಂದು ವರದಿ ಆಗಿದೆ.
ಕೆಲವರು ‘ಟಾಕ್ಸಿಕ್ ಟೀಸರ್ ಬಗ್ಗೆ ನೆಗೆಟಿವ್ ಆಗಿ ಮಾತನಾಡುತ್ತಿದ್ದರೂ ಇದರಿಂದ ಚಿತ್ರಕ್ಕೆ ಪ್ರಚಾರ ಆಗಿದೆ. ಸಿನಿಮಾದ ಟೀಸರ್ ಈಗಾಗಲೇ ಸಾಕಷ್ಟು ಸದ್ದು ಮಾಡುತ್ತಿದೆ. ಟೀಸರ್ ನ ಬೋಲ್ಡ್ ದೃಶ್ಯಗಳು ಚರ್ಚೆ ಹುಟ್ಟುಹಾಕಿದ್ದವು. ಈಗ ಟ್ರೇಲರ್ ರಿಲೀಸ್ಗೆ ಅಭಿಮಾನಿಗಳು ಕಾದಿದ್ದಾರೆ.
ಬಾಲಿವುಡ್ನ ‘ಧುರಂಧರ್ 2’ ಮಾರ್ಚ್ 19ರಂದು ತೆರೆಗೆ ಬರುತ್ತಿದೆ. ಈ ಚಿತ್ರಕ್ಕಿಂತ ಹೆಚ್ಚಿನ ಮೈಲೇಜ್ ಪಡೆಯೋ ಅಗತ್ಯ ‘ಟಾಕ್ಸಿಕ್’ ಚಿತ್ರಕ್ಕೆ ಇದೆ.
—–





Be the first to comment