ನಿರ್ದೇಶಕ ಶ್ರೀಂಗೇರಿಸುರೇಶ್ 2-3 ಕತೆಗಳನ್ನು ನಿರ್ಮಾಪಕರಿಗೆ ಹೇಳಿದ್ದಾರೆ. ಅವರು ಒಂದನ್ನು ಆಯ್ಕೆ ಮಾಡಿ ಅನಂತ್ನಾಗ್ ಒಪ್ಪಿಕೊಂಡರೆ ಮಾತ್ರ ನಿರ್ಮಾಣ ಮಾಡುವುದಾಗಿ ಷರತ್ತು ಹಾಕಿದ್ದಾರೆ. ಕೊನೆಗೆ ಸಾಹಸ ಮಾಡಿ ಚಿತ್ರಕತೆ,ಸಂಭಾಷಣೆ ಬರೆದು, ಹಿರಿಯ ಕಲಾವಿದರನ್ನು ಒಪ್ಪಿಸಿ ಸಿದ್ದಗೊಂಡಿರುವ ಚಿತ್ರವೇ ‘ವೀಕೆಂಡ್’. ಸದರಿ ಮಾಹಿತಿಯನ್ನು ನಿರ್ದೇಶಕರು ಬಿಡುಗಡೆಪೂರ್ವ ಸುದ್ದಿಗೋಷ್ಟಿಯಲ್ಲಿ ಬಿಚ್ಚಿಟ್ಟರು. ಚಿತ್ರದ ಕುರಿತು ಹೇಳುವುದಾದರೆ ಇಂಜಿನಿಯರ್ಗಳನ್ನು ಚಿಕ್ಕದಾಗಿ ಟೆಕ್ಕಿಗಳು ಅಂತ ಕರೆಯುತ್ತಾರೆ. ಇವರ ಬದುಕು ನೀರಿನ ಮೇಲಿನ ಗುಳ್ಳೆಯಿದ್ದ ಹಾಗೆ ಅಂತ ಹೇಳುವುದುಂಟು. ಇವರುಗಳು ಶುರುವಿನಲ್ಲೆ 50-1 ಲಕ್ಷ ವೇತನ ಪಡೆಯಲಿದ್ದು, ದುಡ್ಡಿನ ಮಹತ್ವ ತಿಳಿದಿರುವುದಿಲ್ಲ. ಸೋಮವಾರದಿಂದ ಶುಕ್ರವಾರದ ತನಕ ಕಷ್ಟಪಟ್ಟು ಕೆಲಸ ಮಾಡಿ, ಬಾಕಿ ಎರಡು ದಿನಗಳನ್ನು ಸಾದ್ಯವಾದಷ್ಟು ಭವಿಷ್ಯವನ್ನು ಲೆಕ್ಕಿಸದೆ ಸುಖವನ್ನು ಅನುಭವಿಸುತ್ತಾರೆ. ಇದರಲ್ಲಿ ಒಳ್ಳೆಯದು ಕೆಟ್ಟದ್ದು ಇರಬಹುದು.
2016ರಲ್ಲಿ ಆರ್ಥಿಕ ಹಿನ್ನಡೆ ಉಂಟಾದಾಗ ಲಕ್ಷಾಂತರ ಉದ್ಯೋಗಿಗಳು ಕೆಲಸವನ್ನು ಕಳೆದುಕೊಳ್ಳಬೇಕಾಯಿತು. ಆಕಸ್ಮಿಕವಾಗಿ ನಡೆದ ಕಾರಣ ಕೆಲವರು ಕೆಟ್ಟ ಚಾಳಿಗೆ ಹೋದರು. ಅದಕ್ಕಾಗಿ ಪ್ರಾರಂಭದಿಂದ ಯೋಜನೆ ಹಾಕಿಕೊಂಡು ಉಳಿತಾಯ ಮಾಡಿದರೆ, ಕುಟುಂಬದೊಂದಿಗೆ ಸುಖವಾಗಿರಬಹುದೆಂದು ಸಂದೇಶದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಇದಕ್ಕಾಗಿ ಕೆಲಸದಲ್ಲಿ ಇರುವ, ಕಳೆದುಕೊಂಡವರನ್ನು ಭೇಟಿ ಮಾಡಿ ಅವರಿಂದ ಒಂದಷ್ಟು ಮಾಹಿತಿ ಸಂಗ್ರಹಿಸಿ ಸನ್ನಿವೇಶಗಳನ್ನು ಸೃಷ್ಟಿಸಲಾಗಿದೆ. ಪೋಷಕರಾದವರು ತಮ್ಮ ಮಕ್ಕಳನ್ನು ಸರಿಯಾದ ದಾರಿಯಲ್ಲಿ ಬೆಳಸಿದರೆ ಇಂತಹ ಸಮಸ್ಯೆ ಉದ್ಬವಿಸುವುದಿಲ್ಲ. ಸಾಫ್ಟ್ವೇರ್ ಕಂಪನಿ ನೌಕರರು ದುಡ್ಡು ಇದ್ದಾಗ ಹೇಗಿರುತ್ತಾರೆ. ಇಲ್ಲದಿದ್ದಾಗ ಏನಾಗುತ್ತಾರೆ ಎಂಬುದನ್ನು ಮುಖ್ಯವಾಗಿ ತೋರಿಸಲಾಗಿದೆ. ಅದೇ ತರಹದ ಪಾತ್ರವನ್ನು ನಾಯಕನ ಮೊಮ್ಮಗನಾಗಿ ಅನಂತ್ನಾಗ್ ಅಭಿನಯಿಸಿದ್ದಾರೆ.
ಮಿಲಂದ್, ಸಂಜನಾಬುರ್ಲಿ ಮುಖ್ಯ ಪಾತ್ರದಲ್ಲಿ ನಟಿಸಿರುವುದು ಹೊಸ ಅನುಭವ. ತಾರಗಣದಲ್ಲಿ ನೀನಾಸಂರಘು, ಸಚ್ಚಿನ್, ಕಾರ್ತಿಕ್, ಸಂಜಯ್ ಮುಂತಾದವರ ನಟನೆ ಇದೆ. ಮಗನನ್ನು ನಾಯಕ ಮಾಡುವ ಸಲುವಾಗಿ ಹಣ ಹೂಡಿರುವ ಮಂಜುನಾಥ್.ಡಿ ತನಿಖಾದಿಕಾರಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಧನಂಜಯ್,ಹೃದಯಶಿವ ಮತ್ತು ಕವಿರಾಜ್ ಸಾಹಿತ್ಯದ ಮೂರು ಗೀತೆಗಳಿಗೆ ಶ್ರೀಲಂಕ ಮೂಲದ ಮನೋಜ್.ಎಸ್. ಸಂಗೀತವಿದೆ. ಧೀರಜ್ ಎಂಟರ್ಪ್ರೈಸಸ್ ಮುಖಾಂತರ ಚಿತ್ರವು ಶುಕ್ರವಾರದಂದು 150 ಕೇಂದ್ರಗಳಲ್ಲಿ ತೆರೆಗೆ ಬರಲಿದೆ.

Pingback: sex and the city movie