ರಿಷಬ್ ಶೆಟ್ಟಿ ಅವರ ನಿರ್ದೇಶನದ ‘ಕಾಂತಾರ’ ಸಿನಿಮಾದ ಬಗ್ಗೆ ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
” ಕಂಬಳದ ಕುರಿತು ಎರಡು ವರ್ಷದ ಹಿಂದೆ ‘ವೈರಮುಡಿ’ ಸಿನಿಮಾ ಘೋಷಣೆ ಮಾಡಿದ್ದೆ. ಈಗ ಅದೇ ವಿಷಯದ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ ಘೋಷಣೆ ಮಾಡಿದ್ದಾರೆ. ಒಂದೇ ವಿಷಯದ ಬಗ್ಗೆ ಸಿನಿಮಾ ಮಾಡುವಾಗ ಕನಿಷ್ಠ ಸೌಜನ್ಯಕ್ಕಾದರೂ ಮಾತನಾಡಬಹುದಿತ್ತು’ ಎಂದು ಚಂದ್ರಶೇಖರ್ ಬೇಸರದಿಂದ ಹೇಳಿದ್ದಾರೆ.
ನಿರ್ದೇಶಕ ಚಂದ್ರಶೇಖರ್ ಬಂಡಿಯಪ್ಪ ಅವರು ‘ವೈರಮುಡಿ’ ಸಿನಿಮಾವನ್ನು ಶಿವರಾಜ್ ಕುಮಾರ್ ಜೊತೆ ಮಾಡಲು ನಿರ್ಧರಿಸಿ ಶಿವಣ್ಣ ಅವರ ಹುಟ್ಟುಹಬ್ಬದ ದಿನ ಪೋಸ್ಟರ್ ಬಿಡುಗಡೆ ಮಾಡಿದ್ದರು. ಆದರೆ ಈಗ ಕಂಬಳ ಬಗ್ಗೆ ಸಿನೆಮಾ ಬರುತ್ತಿರುವುದು ಅವರಿಗೆ ಬೇಸರ ತರಿಸಿದೆ.
” ನಮ್ಮಲ್ಲಿ ಸ್ಟೋರಿ ರಿಜಿಸ್ಟರ್ ಮಾಡಲು ಯಾವುದೇ ವ್ಯವಸ್ಥೆ ಇಲ್ಲ. ನಿರ್ದೇಶಕ ಸಂಘ ಕೂಡಾ ಇಲ್ಲ. ಕಳೆದ ಮೂರು ವರ್ಷದಿಂದ ಕಷ್ಟಪಟ್ಟು ಕಥೆ ಮಾಡಿದ್ದೇನೆ. ಒಂದು ವಿಷಯದ ಬಗ್ಗೆ ಸಿನಿಮಾ ಬಂದ ಮೇಲೆ ನಾನು ಅದೇ ವಿಷಯದ ಮೇಲೆ ಸಿನಿಮಾ ಮಾಡಲ್ಲ. ಇದು ಸರಿಯಲ್ಲ. ಸದ್ಯಕ್ಕೆ ವೈರಮುಡಿ ಮಾಡುವುದಿಲ್ಲ. ಕಾಂತಾರ ಬಿಡುಗಡೆಯಾದ ಮೇಲೆ ಹೇಗಿದೆ ಎಂದು ನೋಡುವೆ” ಎಂದು ತಿಳಿಸಿದ್ದಾರೆ.
ಕಾಂತಾರ ಚಿತ್ರತಂಡ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
__________

Be the first to comment