ಸರೋಜಾ ದೇವಿ ಅಂತಿಮ ದರ್ಶನದಲ್ಲಿ ಫೋಟೋ ಸೆಷನ್‌ ವಿರುದ್ಧ ಆಕ್ರೋಶ

ಅಭಿನಯ ಸರಸ್ವತಿ ಬಿ.ಸರೋಜಾ ದೇವಿ ಅಂತಿಮ ದರ್ಶನದಲ್ಲಿ ಶಿಷ್ಟಾಚಾರ ಪಾಲಿಸಬೇಕಿದ್ದ ಹಿರಿಯರೇ ಸಾವಿನ ಮನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ  ನಗುತ್ತಾ ಓಡಾಡಿಕೊಂಡಿರುವ ವಿಡಿಯೋ ವೈರಲ್‌ ಆಗಿದೆ.

ವಿಡಿಯೋದಲ್ಲಿ ಜಗ್ಗೇಶ್, ಶ್ರೀನಾಥ್ ಮತ್ತು ರಾಕ್ ಲೈನ್ ವೆಂಕಟೇಶ್ ಕ್ಯಾಮರಾಗಳಿಗೆ ಜೊತೆಯಾಗಿ ನಿಂತು ಫೋಸ್ ಕೊಡುತ್ತಿದ್ದಾರೆ. ಈ ಮೂವರ  ನಡೆ ಹಲವರನ್ನು ಕೆರಳಿಸಿದೆ.   ಕನ್ನಡ ಚಿತ್ರರಂಗದ ಈ ಹಿರಿಯರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಮರಣಕ್ಕೆ ಬಂದ್ರಾ, ಫೋಟೋ ಸೆಷನ್ ಗಾ?’,  ‘ಇವರು ಫೋಟೋ ತಗುಸ್ಕೊಣಕೆ ಹೋಗಿರೋದು ಎಲ್ಲಿಗೆ?’ ಎಂಬ ಟೀಕೆಗಳು ವ್ಯಕ್ತವಾಗಿವೆ. ಸಾವಿನ ಮನೆಯಲ್ಲಿ ನೋವಿನ ವರ್ತನೆ ತೋರುವುದನ್ನು ಬಿಟ್ಟು ಫೋಟೋಗೆ ಪೋಸ್‌ ಕೊಟ್ಟಿರುವ ಹಿರಿಯರಿಗೆ ನೆಟ್ಟಿಗರು ಛೀಮಾರಿ ಹಾಕುತ್ತಿದ್ದಾರೆ.

ಬಿ ಸರೋಜಾ ದೇವಿ ಅವರು ನಿನ್ನೆ ಅಗಲಿದ್ದಾರೆ.  ಅವರ ಅಂತ್ಯಕ್ರಿಯೆ ಇಂದು ಅವರ ಹುಟ್ಟೂರು ರಾಮನಗರ ಜಿಲ್ಲೆಯ ದಶವಾರ ಗ್ರಾಮದಲ್ಲಿ ಮಧ್ಯಾಹ್ನ 1.30ಕ್ಕೆ ಅಂತ್ಯಕ್ರಿಯೆ ನೆರವೇರಲಿದೆ.  ತಾಯಿ ರುದ್ರಮ್ಮ ಸಮಾಧಿ ಪಕ್ಕದಲ್ಲಿ ಒಕ್ಕಲಿಗ ಸಂಪ್ರದಾಯದಂತೆ  ಅಂತ್ಯಕ್ರಿಯೆ ನಡೆಯಲಿದೆ. ಈಗಾಗಲೇ ಜಿಲ್ಲಾಡಳಿತ ಅಂತಿಮ ನಮನಕ್ಕೆ ಬ್ಯಾರಿಕೇಡ್, ಶಾಮಿಯಾನ ಹಾಕಿ ಸಿದ್ಧತೆ ಮಾಡಿಕೊಂಡಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!