ಮೈಸೂರಿನ ವಾಣಿಜ್ಯೋದ್ಯಮಿ ಮಂಜುನಾಥ್‍ಸ್ವಾಮಿ ಅವರು ತಮ್ಮ ಅಳಿಯ ವಿದ್ಯಾಭರಣರನ್ನು ನಾಯಕನಟನನ್ನಾಗಿಸಿ ನಿರ್ಮಿಸಿರುವ ವಿರಾಜ್ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಆಗಮಿಸಿದ ದಿ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್, ಸುರೇಶ್‍ಬಾಬು, ಕೃಷ್ಣಮೂರ್ತಿ, ಆನಂದ್ ಆಡಿಯೋ ಶ್ಯಾಂ, ಬಾಲಕೃಷ್ಣ, ಹುಚ್ಚೇಗೌಡ ಅವರು ಧ್ವನಿಸುರುಳಿ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಚಿತ್ರದ ನಿರ್ದೇಶಕ ನಾಗೇಶ್ ನಾರದಾಸಿ ಮತನಾಡಿ, ವಿರಾಜ್ ಒಂದು ಪಕ್ಕಾ ಫ್ಯಾಮಿಲಿ ಆ್ಯಕ್ಷನ್, ಕಾಮಿಡಿ ಚಿತ್ರವಾಗಿದ್ದು ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಲಿದೆ. ನಿರ್ಮಾಪಕರು ಯಾವುದೇ ಕಟ್ಟುಪಾಡು ಹಾಕಿಕೊಳ್ಳದೆ ಚಿತ್ರಕ್ಕೆ ತುಂಬಾ ಸಹಕಾರ ನೀಡಿದ್ದರಿಂದ ನಾನು ಅಂದುಕೊಂಡ ರೀತಿಯೇ ಚಿತ್ರ ಹೊಮ್ಮಿಬಂದಿದೆ. ನಟ ವಿದ್ಯಾಭರಣರಿಗೆ ಉತ್ತಮ ಭವಿಷ್ಯವಿದೆ. ಇದು ಪ್ರೇಕ್ಷಕರಿಗೆ ಫುಲ್‍ಮೀಲ್ಸ್ ಇದ್ದಂತೆ ಎಂದರು.
ಮುಖ್ಯ ಅತಿಥಿಯಾಗಿ ಬಂದಿದ್ದ ಸಿ.ಆರ್.ಮನೋಹರ್ ಮತನಾಡಿ, ವಿದ್ಯಾಭರಣ ಸ್ಫೂರದ್ರೂಪಿ ನಾಟನಾಗಿದ್ದು, ಇಂತಹ ಸುಂದರ ನಟರು ನಮ್ಮ ಚಿತ್ರರಂಗಕ್ಕೆ ಬರಬೇಕು, ಜೊತೆಗೆ ವಿದ್ಯಾಭರಣ ಅವರು ಪ್ರತಿಭಾವಂತರಾಗಿದ್ದು ಅವರಿಗೆ ಚಿತ್ರರಂಗದಲ್ಲಿ ಉತ್ತಮ ಭವಿಷ್ಯವಿದೆ ಎಂದರು. ನಮ್ಮ ಪುತ್ರಿ ಈ ಚಿತ್ರದಲ್ಲಿ ಒಂದು ಪುಟ್ಟ ಪಾತ್ರದಲ್ಲಿ ನಟಿಸಿದ್ದು ಈ ಚಿತ್ರದಲ್ಲರುವ ಗಣೇಶನ ಹಾಡು ಎಲ್ಲರಿಗೂ ಇಷ್ಟವಾಗುತ್ತದೆ ಎಂದು ನಿರ್ಮಾಪಕ ಮಂಜುನಾಥಸ್ವಾಮಿ ಹೇಳಿದರು.
ವಿದ್ಯಾಭರಣ ಮಾತನಾಡಿ, ನಾನು ನಟಿಸುತ್ತಿರುವ ಮೊದಲ ಚಿತ್ರ ಎಂಬ ಖುಷಿ ಒಂದೆಡೆಯಾದರೆ, ಈ ಪಾತ್ರಕ್ಕೆ ಜೀವ ತುಂಬಿದೆನಲ್ಲ ಎಂಬ ಖುಷಿ ಮತ್ತೊಂದೆಡೆ, ಜೊತೆಗೆ ಈ ಕಾರ್ಯಕ್ರಮಕ್ಕೆ ಸಿನಿಮಾ ಹಾಗೂ ರಾಜಕೀಯ ಮುಖಂಡರು ಬಂದಿರುವುದು ಸಂತಸ ತಂದಿದೆ ಎಂದರು. ಚಿತ್ರದ ನಾಯಕಿಯರುಗಳಾಗಿ ಶಿರಿನ್ ಕಾಂಚವಾಲ್, ನಿಖಿತಾ ಬೆಸ್ಟ್, ಅತಿಥಿ ಪಾತ್ರದಲ್ಲಿ ಕೃಷಿ ತಾಪಂಡ ನಟಿಸಿದ್ದಾರೆ. ವಿರಾಜ್ ಚಿತ್ರದ ಏಳು ಹಾಡುಗಳಿಗೆ ಸುಭಾಷ್ ಆನಂದ್ ಸಂಗೀತ ನೀಡಿದ್ದಾರೆ.
ಊರಿನ ಎರಡು ಕುಟುಂಬಗಳಲ್ಲಿ ಒಂದು ಕುಟುಂಬವು ಬಡವ, ಬಲ್ಲಿದ ಎಂದು ನೋಡದೆ ಎಲ್ಲರನ್ನು ಒಂದೇ ಸ್ಥಾನದಲ್ಲಿ ಗೌರವಿಸುತ್ತಿರುತ್ತದೆ. ಮತ್ತೊಂದು ಕುಟುಂಬ ವಿದೇಶದಿಂದ ಹಿಂತಿರುಗಿರುವುದರಿಂದ ಜನರ ಸ್ಥಾನಮಾನಗಳನ್ನು ನೋಡಿಕೊಂಡು ಅದರಂತೆ ನಡೆದುಕೊಳ್ಳುತ್ತಿರುತ್ತಾರೆ. ಈ ಎರಡು ಮನೆಯಿಂದ ಇಬ್ಬರು ಪ್ರೇಮಿಗಳು ಹುಟ್ಟಿಕೊಳ್ಳುತ್ತಾರೆ. ಮುಂದೆ ಉಂಟಾದ ಸಣ್ಣ ಭಿನ್ನಾಭಿಪ್ರಾಯ, ಸಂಶಯದಿಂದ ಆ ಎರಡು ಮನೆಯವರು ವಿರೋಧಿಗಳಾಗುತ್ತಾರೆ. ಈ ಎರಡು ಕಡೆಯುವರು ನಾನು ಒಳ್ಳೆಯವನೆಂದು ಹೇಳಿಕೊಳ್ಳುತ್ತಿರುತ್ತಾರೆ.
ಇವರಿಬ್ಬರ ನಡುವೆ ಈ ಮುಗ್ಧ ಪ್ರೇಮಿಗಳ ಕಥೆ ಏನಾಗುತ್ತದೆ, ಅವರು ಒಂದಾಗ್ತಾರಾ, 2 ಕುಟುಂಬಗಳ ಬಾಂದವ್ಯ ಮತ್ತೆ ಹೇಗೆ ಸರಿಹೋಗುತ್ತದೆ ಎನ್ನುವುದೇ ವಿರಾಜ್ ಚಿತ್ರದ ಸಾರಾಂಶ. ಕೆಲಸದವರನ್ನು ಗೌರವಿಸಿ, ಅನ್ನದಾತ ರೈತ ದೇಶದ ಬೆನ್ನಲುಬು ಎಂಬ ಸಂದೇಶವನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಪ್ರಮುಖವಾಗಿ ಮೈಸೂರು, ಹಾಸನ ಮತ್ತು ಬೆಂಗಳೂರು ಸುತ್ತಮುತ್ತ ಈ ಚಿತ್ರಕ್ಕೆ ಚಿತ್ರೀಕರಣ ನಡೆಸಲಾಗಿದೆ. ವಿರಾಜ್ ಚಿತ್ರದ ಮೂಲಕ ಚಿತ್ರರಂಗದಲ್ಲಿ ಮೆರೆಯಲು ಹೊರಟಿರುವ ವಿದ್ಯಾಭರಣರಿಗೆ ಸಕ್ಸಸ್ ದೊರೆಯುವಂತಾಗಲಿ.
Pingback: http://www.sahabatqqq.club/