ವಿನಯ್ ರಾಜಕುಮಾರ್ “ಗ್ರಾಮಾಯಣ” ಚಿತ್ರದ 2ನೇ ಟೀಸರ್ ಬಿಡುಗಡೆ

ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿರುವ ಅಣ್ಣಾವ್ರ ಮೊಮ್ಮಗ ವಿನಯ್ ರಾಜಕುಮಾರ್ ಅಭಿನಯದ ಗ್ರಾಮಾಯಣ ಚಿತ್ರದ ಎರಡನೇ ಟೀಸರ್ ಬಿಡುಗಡೆಯಾಗಿದೆ. ಇಂದು ವಿನಯ್ ರಾಜಕುಮಾರ್ ಹುಟ್ಟು ಹಬ್ಬದ ಸಂದರ್ಭಕ್ಕಾಗಿ ಈ ಟೀಸರನ್ನು ಬಿಡುಗಡೆ ಮಾಡಲಾಗಿದೆ.

ದೇವನೂರು ಚಂದ್ರು ನಿರ್ದೇಶನ ದ ಗ್ರಾಮಾಯಣ ಸಿನಿಮಾವನ್ನು ಎನ್. ಎಲ್. ಎನ್ ಮೂರ್ತಿ ನಿರ್ಮಿಸುತ್ತಿದ್ದಾರೆ. ಅನಂತು ವರ್ಸಸ್​ ನುಸ್ರುತ್ ಚಿತ್ರದ ನಂತರ ಬಹಳಷ್ಟು ನಿರೀಕ್ಷೆಯನ್ನು ಮೂಡಿಸುವಂತ ಚಿತ್ರ ಗ್ರಾಮಾಯಣ.

ಈ ಮೊದಲು ಚಿತ್ರದ ಟೀಸರ್ ಬಿಡುಗಡೆಯಾಗಿತ್ತು. ಈಗ ಎರಡನೇ ಟೀಸರ್​ ಬಿಡುಗಡೆ ಮಾಡಿದೆ ಚಿತ್ರತಂಡ. ವಿನಯ್​ ರಾಜ್​ ಕುಮಾರ್ ತನ್ನ ಮೊದಲ ಟೀಸರ್​ನಲ್ಲಿ ಹಳ್ಳಿ ಬಿಟ್ಟು ಬೇರೆ ದೇಶ ಹಾಗೂ ನಗರಗಳಲ್ಲಿ ವಾಸಿಸುತ್ತಿರುವವರು ತಮ್ಮ ಹಳ್ಳಿಗಳನ್ನು ನೆನೆಪಿಸಿಕೊಳ್ಳುವ ತುಣುಕುಗಳಿದ್ದವು.

ಈಗಿನ ಟೀಸರ್​ನಲ್ಲಿ ದೇಶಿ ಸ್ಟೈಲ್​ ಫೈಟಿಂಗ್​ ಸೀನ್​ ಇದೆ. ​ ಈ ಟೀಸರ್​ನಲ್ಲಿರುವುದು ಒಂದೇ ಒಂದು ಡೈಲಾಗ್​. ಈ ಸಿನಿಮಾದ ವಿನಯ್​ ರಾಜ್​ಕುಮಾರ್​ ಗೆ ಜೋಡಿಯಾಗಿ ಅಮೃತಾ ನಾಯರ್​ ಕಾಣಿಸಿಕೊಂಡಿದ್ದಾರೆ.

ಇನ್ನು ಪೂರ್ಣಚಂದ್ರ ತೇಜಸ್ವಿ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಅಭಿಷೇಕ್.ಜಿ. ಕಾಸರಗೋಡು ಛಾಯಾಗ್ರಹಣ ಮಾಡಿರುವ ಈ ಚಿತ್ರದ ಟೀಸರ್ ಪಿ.ಆರ್.ಕೆ ಆಡಿಯೋ ಸಂಸ್ಥೆ ಮೂಲಕ ಯೂಟ್ಯೂಬ್ ನಲ್ಲಿ ನೋಡಬಹುದಾಗಿದೆ.

This Article Has 1 Comment
  1. Pingback: qa automated testing tools

Leave a Reply

Your email address will not be published. Required fields are marked *

Translate »
error: Content is protected !!