ಮರ್ಫಿ ನಿರ್ದೇಶಕರ ಚಿತ್ರದಲ್ಲಿ ವಿನಯ್

ಮರ್ಫಿ ಚಿತ್ರ ನಿರ್ದೇಶಕ ಬಿಎಸ್‌ಪಿ ವರ್ಮಾರೊಂದಿಗೆ ವಿನಯ್ ರಾಜ್‌ಕುಮಾರ್  ಚಿತ್ರ ಮಾಡಲು ಮಾತುಕತೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಸ್‌ಪಿ ವರ್ಮಾ ಅವರ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಮರ್ಫಿ ಚಿತ್ರ ಮೆಚ್ಚುಗೆ ಗಳಿಸಿತು. ಒಟಿಟಿ ವೇದಿಕೆಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಬಿಎಸ್‌ಪಿ ವರ್ಮಾ ಅವರು ಮೊದಲ ಬಾರಿಗೆ ವಿನಯ್ ರಾಜ್‌ಕುಮಾರ್ ಅವರೊಂದಿಗೆ ಚಿತ್ರ ಮಾಡಲು ಮುಂದಾಗಿದ್ದಾರೆ.  ಇವರಿಬ್ಬರು ಈಗಾಗಲೇ  ಚರ್ಚೆ  ನಡೆಸಿದ್ದು, ವರ್ಮಾ ಅವರ ವಿಶಿಷ್ಟ ಕಥೆಯ ಬಗ್ಗೆ ಚಿತ್ರ ಮಾಡಲು ವಿನಯ್ ರಾಜ್‌ಕುಮಾರ್   ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ.

ಸ್ಕ್ರಿಪ್ಟ್ ಕಮರ್ಷಿಯಲ್ ಅಂಶಗಳನ್ನು ಒಳಗೊಂಡಿದೆ. ವಿನಯ್ ಅವರ ವ್ಯಕ್ತಿತ್ವದೊಂದಿಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ ಎಂದು ಹೇಳಲಾಗುತ್ತಿದೆ.  ಚಿತ್ರವು ಸದ್ಯ ಪ್ರೀ-ಪ್ರೊಡಕ್ಷನ್ ಹಂತದಲ್ಲಿದ್ದು, ಸ್ಕ್ರಿಪ್ಟ್ ನ್ನು ಇನ್ನಷ್ಟು ಉತ್ತಮಗೊಳಿಸಲಾಗುತ್ತಿದೆ. ನಿರ್ದೇಶಕ ಮತ್ತು ನಟರಿಂದ ಅಂತಿಮ ದೃಢೀಕರಣಕ್ಕಾಗಿ ಕಾಯಲಾಗುತ್ತಿದೆ.

ವಿನಯ್ ರಾಜ್‌ಕುಮಾರ್, ಗ್ರಾಮಾಯಣ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ‘ಒಂದು ಸರಳ ಪ್ರೇಮ ಕಥೆ’ ಚಿತ್ರದ ಅಭಿನಯಕ್ಕಾಗಿ ವಿನಯ್ ರಾಜ್‌ಕುಮಾರ್ ಮೆಚ್ಚುಗೆ ಪಡೆದಿದ್ದರು. ವಿನಯ್ ಇತ್ತೀಚೆಗಷ್ಟೇ ಬಿಡುಗಡೆಯಾದ ಪೆಪೆ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!