ರಮ್ಯಾ ಜೊತೆ ವಿನಯ್ ಮಸ್ತ್ ಫೋಟೋಶೂಟ್!

ಮೋಹಕ ತಾರೆ ರಮ್ಯಾ ಜೊತೆ ದೊಡ್ಮನೆ ಕುಡಿ ವಿನಯ್ ರಾಜ್‌ಕುಮಾರ್  ಮಸ್ತ್ ಆಗಿ ಫೋಟೋಶೂಟ್ ಮಾಡಿದ್ದಾರೆ.

‘ಸ್ವಾಸ ಲೈಫ್’ ಮ್ಯಾಗಜಿನ್‌ಗಾಗಿ ರಮ್ಯಾ ಮತ್ತು ವಿನಯ್ ರಾಜ್‌ಕುಮಾರ್ ಫೋಟೋಶೂಟ್ ಮಾಡಿದ್ದಾರೆ. ವಿನಯ್ ಅವರು ಸ್ಟೈಲಿಶ್ ಲುಕ್‌ನಲ್ಲಿ ಮಿಂಚಿದ್ದಾರೆ. ರಮ್ಯಾ ಫೋಟೋಶೂಟ್‌ನಲ್ಲಿ ಸಖತ್ ಗ್ಲಾಮರ್  ವೈಖರಿಯಿಂದ ಗಮನ ಸೆಳೆದಿದ್ದಾರೆ.

ರಮ್ಯಾ ಮತ್ತು ವಿನಯ್‌ಗೆ ಆರಂಭದಿಂದಲೂ ಪರಿಚಯವಿದೆ. ‘ಅಪ್ಪು’ ಸಿನಿಮಾದ ರೀ-ರಿಲೀಸ್ ಸಮಯದಲ್ಲಿ ಇಬ್ಬರೂ ಒಟ್ಟಿಗೆ ಸಿನಿಮಾ ವೀಕ್ಷಿಸಿದ್ದರು. “ಅವಕಾಶ ಸಿಕ್ಕರೆ ವಿನಯ್ ಜೊತೆ ನಟಿಸ್ತೀನಿ” ಎಂಬ ಮಾತನ್ನೂ ರಮ್ಯಾ ಒಂದು ವೇಳೆ ಹೇಳಿದ್ದರು. ‘ಅಭಿ’ ಸಿನಿಮಾದ ಸಮಯದಿಂದಲೂ ರಮ್ಯಾ, ವಿನಯ್ ಅವರನ್ನು ನೋಡುತ್ತ ಬಂದಿದ್ದಾರೆ. ವಿನಯ್  ರಾಜ್‌ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಸಿನಿಮಾ ಸೆಟ್‌ಗೆ ರಮ್ಯಾ ಭೇಟಿ ನೀಡಿದ್ದರು.

ರಮ್ಯಾ ಅವರ   ಕಂಬ್ಯಾಕ್ ಬಗ್ಗೆ ಈಗಾಗಲೇ ಸಿಹಿಸುದ್ದಿ ಬಂದಿದೆ. 21 ವರ್ಷಗಳ ನಂತರ ನಿರ್ದೇಶಕ ಯೋಗರಾಜ್ ಭಟ್  ಅವರ ಜೊತೆ ರಮ್ಯಾ ಕೆಲಸ ಮಾಡಲು ಸಿದ್ಧರಾಗಿದ್ದಾರೆ. 2004ರಲ್ಲಿ ತೆರೆಕಂಡ ಸುದೀಪ್ ನಟನೆಯ ‘ರಂಗ ಎಸ್‌ಎಸ್‌ಎಲ್‌ಸಿ’ ಚಿತ್ರದಲ್ಲಿ ರಮ್ಯಾ ನಟಿಸಿದ್ದರು. ಅದು ಯೋಗರಾಜ್ ಭಟ್ ನಿರ್ದೇಶಿಸಿದ 2ನೇ ಸಿನಿಮಾ. ಇದೀಗ ಮತ್ತೆ ಯೋಗರಾಜ್ ಭಟ್ – ರಮ್ಯಾ ಕಾಂಬಿನೇಶನ್ ಸಿನಿಮಾ ಕುರಿತಾಗಿ ಮಾತುಕತೆ ನಡೆಯುತ್ತಿದೆ.

—-

Be the first to comment

Leave a Reply

Your email address will not be published. Required fields are marked *

Translate »
error: Content is protected !!