ವಿಮೋವೆ ಫೌಂಡೇಶನ್ ಆಯೋಜಿಸಿದ ಆಲ್ಟರ್ನೇಟಿವ್ ವೈಬ್ರೆಂಟ್ ಕಾರ್ಯಕ್ರಮ ಯಶಸ್ವಿ

ಬೆಂಗಳೂರು : ವಿಮೋವೆ ಫೌಂಡೇಶನ್ ಆಯೋಜಿಸಿದ್ದ 5 ನೇ ವರ್ಷದ ಕಾರ್ಯಕ್ರಮ ಕ್ಕೆ ಸರ್ಕಾರ ದ ಹಲವಾರು ಇಲಾಖೆಗಳು ಫೌಂಡೇಶನ್ ಜೊತೆಗೆ ಕೈ ಜೋಡಿಸಿದೆ. ಮುಖ್ಯವಾಗಿ ಬಿಬಿಎಂಪಿ ,ಅರಣ್ಯ ಇಲಾಖೆ , ಕರ್ನಾಟಕ ಯೂಥ್ ಸೆಲ್ ಘಟಕ ಹಾಗು ರಾಮಯ್ಯ ಯೂನಿವರ್ಸಿಟಿ ವಿಮೋವೆ ಫೌಂಡೇಶನ್ ಜೊತೆ ಕೈ ಜೋಡಿಸಿವೆ.

ಈ ಕಾರ್ಯಕ್ರಮಕ್ಕೆ ಬಿಬಿಎಂಪಿ ಯ ಮುಖ್ಯ ಆಯುಕ್ತರಾದ ಶ್ರೀ ತುಷಾರ್ ಗಿರಿ ನಾಥ್ ರವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತಾಡಿದರು.

ಪರಿಸರ ರಕ್ಷಣೆ ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದ್ದು, ತಾವುಗಳು ಪರಿಸರ ರಕ್ಷಣೆಯಲ್ಲಿ ಜಾಗೃತರಾಗಿರಬೇಕು. ಮುಂದಿನ ಪೀಳಿಗೆಯು ಆರೋಗ್ಯಕರ ಜೀವನ ಸಾಗಿಸಬೇಕಾದರೆ ಉತ್ತಮ ಪರಿಸರ ನಿರ್ಮಿಸವುದು ಮುಖ್ಯ. ಅದಕ್ಕೆ ಯುವಕರ ಕೊಡುಗೆ ಹೆಚ್ಚು ಮುಖ್ಯವೆಂದು ಹೇಳಿದರು.

ಪರಿಸರ ರಕ್ಷಣೆಗೆ ನಾವು ಮಾಡಬೇಕಾಗಿರುವ ಕೆಲಸಗಳೆಂದರೆ ಮೊದಲು ಗಿಡ ಮರಗಳನ್ನು ನೆಟ್ಟು ಹಸಿರನ್ನು ಹೆಚ್ಚಿಸಬೇಕು. ನಾಗರೀಕರೆಲ್ಲರೂ ತಮ್ಮ ಮನೆಗಳಲ್ಲಿ ತಪ್ಪದೆ ಮಳೆ ನೀರು ಕೊಯ್ಲು ಅಳವಡಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ಸಾರ್ವಜನಿಕರು ಭಾಗಿಯಾಗಬೇಕು. ದಿನ ನಿತ್ಯ ಸಾಮಗ್ರಿಗಳನ್ನು ತರಲು ಪ್ಲಾಸ್ಟಿಕ್ ಕವರ್ ಬಳಸದೇ ಪೇಪರ್/ ಬಟ್ಟೆ ಬ್ಯಾಗ್ ಬಳಸಬೇಕೆಂದು ತಿಳಿಸಿದರು.
ಕಾರ್ಯಕ್ರಮಕ್ಕೆ ಇನ್ನೊಬ್ಬ ಅತಿಥಿಯಾಗಿ ಆಗಮಿಸಿದ್ದ
ಜಲಮಂಡಳಿ ಅಧ್ಯಕ್ಷರಾದ ರಾಮ್ ಪ್ರಸಾತ್ ಮನೋಹರ್ ರವರು ಮಾತನಾಡಿ, ನಗರದಲ್ಲಿರುವ ಜನಸಂಖ್ಯೆಯಲ್ಲಿ ಶೇ. 65 ರಷ್ಟು ಯುವಕರಿದ್ದು, ಎಲ್ಲಾ ಯುವಕರು ಜಲಮಂಡಳಿಯ ಜೊತೆ ಕೈ ಜೋಡಿಸಿದರೆ “ವಾಟರ್ ಸರ್‌ಫ್ಲಸ್” ಬೆಂಗಳೂರನ್ನಾಗಿ ಮಾಡಬಹುದೆಂದು ತಿಳಿಸಿದರು.

ಬೆಂಗಳೂರು ಸಮುದ್ರ ಮಟ್ಟಕ್ಕಿಂದ ಸುಮಾರು 1000 ಮೀ. ಎತ್ತರದಲ್ಲಿರುವ ಕಾರಣ 100 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಿಂದ ಎತ್ತರದ ಪ್ರದೇಶಕ್ಕೆ ನೀರು ತರುವುದು ತುಂಬಾ ಕಷ್ಟ. ನಗರದಲ್ಲಿ ವೃಷಭಾವತಿ ನದಿ, ಅರ್ಕಾವತಿ ನದಿ, ದಕ್ಷಿಣ ಪಿನಾಕಿನಿ ಹಾಗೂ ಸ್ವರ್ಣಮುಖಿ ನದಿಗಳಿದ್ದು, ಅವುಗಳಿಗೆ ಪುನರ್ಜೀವ ನೀಡಿದರೆ ನಗರದಲ್ಲಿ ನೀರಿನ ಸಮಸ್ಯೆನ್ನು ನಿವಾರಿಸಬಹುದಾಗಿದೆ ಎಂದರು.

ಈ ವೇಳೆ ಅರಣ್ಯ, ಪರಿಸರ ಮತ್ತು ಹವಾಮಾನ ವೈಪರೀತ್ಯ ನಿರ್ವಹಣೆಯ ವಿಶೇಷ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಬೆಂಗಳೂರು ಉತ್ತರ ಸಂಚಾರ ಡಿಸಿಪಿ ಸಿರಿ ಗೌಡ, ರಾಜ್ಯ ಎನ್‌ಎಸ್‌ಎಸ್ ಅಧಿಕಾರಿಯಾದ ಡಾ. ಪ್ರತಾಪ್ ಲಿಂಗಯ್ಯ, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯ ಕಾರ್ಯದರ್ಶಿಯಾದ ಬಾಲಚಂದ್ರ, ಗೋಕುಲ ಶೈಕ್ಷಣಿಕ ಫೌಂಡೇಷನ್ ನ ಮುಖ್ಯ ಕಾರ್ಯನರ‍್ವಾಹಕ ಶ್ರೀನಿವಾಸ ಮೂರ್ತಿ, ವಿಮೋವೆ ಫೌಂಡೇಶನ್ ಸಂಸ್ಥಾಪಕ ಮತ್ತು ಆಲ್ಟರ್ನೇಟಿವ್ 24 ಕಾರ್ಯಕ್ರಮದ ಮುಖ್ಯ ರೂವಾರಿಯಾದ ವಿನಯ ಶಿಂಧೆ, ದಿ ನ್ಯಾಚುರಲ್ ಸ್ಕೂಲ್ ನ ಸಂಸ್ಥಾಪಕರಾದ ಪ್ರಿಯಾ ವೆಂಕಟೇಶ್, ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published. Required fields are marked *

Translate »
error: Content is protected !!