Vilas Rao :ವಿಲಾಸ್ ರಾವ್
ಕಿರುತೆರೆಯಿಂದ ಹಿರಿತೆರೆಯಲ್ಲಿ ಮಿಂಚಲು ಸಿಲ್ಲಿ ಲಲ್ಲಿ ಧಾರಾವಾಹಿಯ ಖ್ಯಾತಿಯ ವಿಲಾಸ್ ರಾವ್ ಹೆಜ್ಜೆ ಇಟ್ಟಿದ್ದಾರೆ.
ಸಿಲ್ಲಿ ಲಲ್ಲಿ ಯಲ್ಲಿ ಕಾಮಿಡಿ ಮಾಡಿದ್ದರು, ಸಿರಿಯಸ್ ಯಾಗಿ ಅಪ್ರೋಚ್ ಆಗಬೇಕು ಅಂತ ಹೇಳಿ ಶಾರ್ಟ್ ಮೂವಿ ಮಾಡಿದ್ಧಾರೆ ಪ್ರಜೆಂಟ್ ಲವ್’, ಡಿವೋರ್ಸ್, ‘ಹಾರ್ಟ ಫಾರ್ ಸೆಲ್’ ಶಾರ್ಟ್ ಮೂವಿಗಳಿಗೆ ತುಂಬಾ ಜನ ಖ್ಯಾತ ನಿರ್ದೇಶಕರಾದ ಜಯತೀರ್ಥ ,ಎಪಿ ಅರ್ಜುನ್, ಶಶಾಂಕ್ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.
ಹೈಸ್ಕೂಲಿನಲ್ಲಿ ಓದುವಾಗಲಿ ವೇದಿಕೆ ಕಾರ್ಯಕ್ರಮಗಳಲ್ಲಿ ಆಸಕ್ತಿ ಹೊಂದಿದ್ದ ವಿಲಾಸ್ ರಾವ್ ಬಳಿಕ ತುಮಕೂರಿನ ಚಂದ್ರೋದಯ ಕಲಾಸಂಘದಲ್ಲಿ ನಾಟಕದಲ್ಲಿ ಅಭಿನಯಿಸಿದರು. ಬಿಸಿಎ ಓದುವ ವೇಳೆ ಇವರು ನಟನೆಯ ಕಡೆಗೆ ಹೆಚ್ಚು ಆಸಕ್ತಿ ತೋರಿ, ಬೆಂಗಳೂರಿನ ಕಡೆಗೆ ಬಂದರು.
ಸಿನಿಮಾಕ್ಕಾಗಿ ಅವಕಾಶ ಕೇಳಿದಾಗ ಅವರಿಗೆ ನಿರೀಕ್ಷಿತ ಮಟ್ಟದಲ್ಲಿ ಸ್ಪಂದನೆ ಸಿಗಲಿಲ್ಲ. ಅದರಿಂದಾಗಿ ಅವರು ಕಿರುತೆರೆಯತ್ತ ಮುಖ ಮಾಡಿದರು.
ಮೊದಲಿಗೆ ಅವರು ಸಿಹಿ ಕಹಿ ಚಂದ್ರು ನಿರ್ದೇಶನದ ಸಿಲ್ಲಿ ಲಲ್ಲಿ ಸೀಸನ್ 2 ರಲ್ಲಿ ಅವಕಾಶ ಪಡೆದರು. ಕಲರ್ ವಾಹಿನಿಯ ಕನ್ನಡತಿ ಧಾರಾವಾಹಿಯಲ್ಲಿ ಹೀರೊಯಿನ್ ತಮ್ಮನ ಪಾತ್ರ ಮಾಡಿದರು. ಬಳಿಕ ಜೀ ವಾಹಿನಿಯ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಸಂಪತ್ ಎನ್ನುವ ಹೀರೋಯಿನ್ ಲವರ್ ಕ್ಯಾರೆಕ್ಟರ್ ಮಾಡಿದರು.
ಇವರು ಉದಯ ಟಿವಿಯ ಸುಂದರಿ ಸೀರಿಯಲ್ ನಲ್ಲಿ ಸೆಕೆಂಡ್ ಲೀಡ್ ಕ್ಯಾರೆಕ್ಟರ್ ಮಾಡಿದ್ದಾರೆ.
ವಿಲಾಸ್ ಸಿನಿಮಾದಲ್ಲಿ ನಟಿಸಬೇಕು ಎನ್ನುವ ನಿಟ್ಟಿನಲ್ಲಿ ಬಾಡಿ ಟ್ರಾನ್ಸ್ ಫಾಮೇಶನ್ ಮಾಡಿದ್ದಾರೆ. ಸಾಗರ್ ಇವರ ಫಿಟ್ ನೆಸ್ ಟ್ರೈನರ್. ಇವರು ಸಿನಿಮಾಕ್ಕಾಗಿ 15 ಕೆಜಿ ಏರಿಕೆ ಮಾಡಿದ್ದಾರೆ.
ಇವರು ಪ್ರಜ್ವಲ್ ದೇವರಾಜ್ ಅವರ ಮಾಫಿಯಾ, ಅಭಿಷೇಕ್ ಅವರ ಇದು ನಿಮ್ಮ ಕಥೆ ಚಿತ್ರದಲ್ಲಿ ನಟಿಸಿದ್ದಾರೆ. ಒಂದಷ್ಟು ಸಿನಿಮಾಗಳಲ್ಲಿ ಅವಕಾಶಗಳು ಬಂದಿವೆ.
ಸಿನಿಮಾ ರಂಗದಲ್ಲಿ ಉತ್ತಮ ಸಾಧನೆ ಮಾಡಬೇಕು ಅನ್ನುವುದು ಇವರ ಬಯಕೆ ಆಗಿದೆ.
______
Be the first to comment