ಇಡೀ ಚಿತ್ರರಂಗಕ್ಕೆ ಒಂದು ದೊಡ್ಡ ಸಂತೋಷದ ವಿಷಯ ಈಗ ಹೊರಬಂದಿದೆ. ಜನವರಿ 31ರoದು ಅಭಿನಯ ಚಕ್ರವರ್ತಿ , ಬಾದ್ ಷಾ, ಕಿಚ್ಚ ಸುದೀಪ್ ಅಭಿನಯಿಸುತ್ತಿರುವ ಫ್ಯಾಂಟಮ್ ಚಿತ್ರ ಶೀರ್ಷಿಕೆ ಈಗ ವಿಕ್ರಾಂತ್ ರೋಣ ಆಗಿದೆ. ಹಾಗಾಗಿ ಸುದೀಪ್ ರ “ವಿಕ್ರಾಂತ್ ರೋಣ” ಚಿತ್ರದ ಟೈಟಲ್ ಲೋಗೋ ಲಾಂಚ್ ದುಬೈನ ಬುರ್ಜ್ ಖಲೀಫಾದಲ್ಲಿ ಬಿಡುಗಡೆಯಾಗಲಿದೆ.
ಪ್ರಪಂಚದ ಅತಿ ಎತ್ತರದ ಕಟ್ಟಡದ ಮೇಲೆ ಕಿಚ್ಚ ಸುದೀಪ್ ಅವರ ಕಟೌಟ್ ಹೊರ ಬರಲಿದ್ದು , 2 ಸಾವಿರ ಅಡಿಯ ವರ್ಚ್ಯುವಲ್ ಕಟೌಟ್ ಹೊಂದಿರುವ ಮೊದಲ ನಟನಾಗಿ ಕಿಚ್ಚ ಸುದೀಪ್ ಹೊರ ಹೊಮ್ಮಲಿದ್ದಾರೆ. ಭಾರತೀಯರು ಹೆಮ್ಮೆ ಪಡುವಂಥ ವಿಷಯ ಇದಾಗಿದೆ.
ವಿಶೇಷ ಎಂದರೆ ಬುರ್ಜ್ ಖಲೀಫಾದ ಮೇಲೆ ಪ್ರಸಾರವಾಗುತ್ತಿರುವ 180 ಸೆಕೆಂಡ್ ಗಳನ್ನು ಹೊಂದಿರುವ ಮೊಟ್ಟ ಮೊದಲ ಚಲನಚಿತ್ರ ವಿಕ್ರಾಂತ್ ರೋಣ ಆಗಲಿದೆ. ಹಾಗೂ 25 ವರ್ಷಗಳ ಸಂಭ್ರಮ ಆಚರಣೆಯ ಗೌರವವನ್ನು ಬುರ್ಜ್ ಖಲೀಫಾದ ಮೇಲೆ ಪಡೆಯಲಿರುವ ಮೊಟ್ಟ ಮೊದಲ ನಟ ಕಿಚ್ಚ ಸುದೀಪ್ ಆಗಲಿದ್ದಾರೆ.
ಈ ಒಂದು ವಿಶೇಷ ದೃಶ್ಯ ವೈಭವ ಜನವರಿ 31 ರಂದು ರಾತ್ರಿ 9.30 ಕ್ಕೆ ಭಾರತದಲ್ಲಿ ನೇರ ಪ್ರಸಾರವಾಗಲಿದೆ. ಈಗಾಗಲೇ ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು , ಕಿಚ್ಚ ಸುದೀಪ್ ಅವರ ಯೂಟ್ಯೂಬ್ ಚಾನೆಲ್ ನಲ್ಲಿ ಕೂಡ ದೃಶ್ಯವನ್ನು ವೀಕ್ಷಿಸಬಹುದಾಗಿದೆ.
ಈ ಚಿತ್ರವನ್ನ ಜಾಕ್ ಮಂಜು ರವರು ನಿರ್ಮಾಣ ಮಾಡುತ್ತಿದ್ದು , ತಮ್ಮ ಶಾಲಿನಿ ಆರ್ಟ್ ಅಡಿಯಲ್ಲಿ ಈ ಚಿತ್ರವನ್ನು ಸಿದ್ಧಪಡಿಸುತ್ತಿದ್ದಾರೆ. ಅಲಂಕಾರ್ ಪಾಂಡಿಯನ್ ಕೂಡ ಸಹ ನಿರ್ಮಾಪಕ ರಾಗಿದ್ದಾರೆ. ಇನ್ನು ಈ ಚಿತ್ರವನ್ನು ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದು , ಈ ಚಿತ್ರದ ಶೀರ್ಷಿಕೆ ಬದಲಾವಣೆಯ ಹಿಂದಿನ ಉದ್ದೇಶವನ್ನು ನಿರ್ದೇಶಕರು ಇದೇ ತಿಂಗಳ 24 ರಂದು ತಿಳಿಸಲಿದ್ದಾರಂತೆ.
ಏನೇ ಇರಲಿ ಕನ್ನಡದ ಒಂದು ಅದ್ದೂರಿ ಚಿತ್ರದ ಟೈಟಲ್ ಲೋಗೋ ವಿಶ್ವದ ಅತಿ ಎತ್ತರದ ಕಟ್ಟಡದ ಮೇಲೆ ರಾರಾಜಿಸಲಿದೆ ಎಂಬುದೇ ದೊಡ್ಡ ವಿಷಯ. ಇಡೀ ಚಂದನವನವೇ ಹೆಮ್ಮೆ ಪಡುವ ವಿಷಯವಾಗಿದೆ. ಸದ್ಯ ಅಭಿಮಾನಿಗಳು ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ. ಒಟ್ಟಾರೆ ಇಡೀ ತಂಡದ ಶ್ರಮ ಎದ್ದು ಕಾಣುತ್ತದೆ ಅನ್ನೋದಂತೂ ಸತ್ಯ ವಾಗಿದೆ ಎನ್ನಬಹುದು.
Be the first to comment