ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪನ್ನ ಮೂಡಿಸಿರುವ ಅದ್ಬುತ ಕಲಾವಿದ ಕಮಲ್ ಹಾಸನ್ ಅಭಿನಯದ “ವಿಕ್ರಮ್” ಚಿತ್ರ ರಾಜ್ಯಾದ್ಯಂತ ಇದೇ 03ರಿಂದ ಬಿಡುಗಡೆಯಾಗಿದೆ. ಸರಿಸುಮಾರು 4 ವರ್ಷಗಳ ನಂತರ ಯೂನಿವರ್ಸಲ್ ಹೀರೋ ಕಮಲ್ ಹಾಸನ್ ಅವರು ತಮ್ಮ ಹೋಮ್ ಪ್ರೊಡಕ್ಷನ್ “ವಿಕ್ರಮ್” ಮೂಲಕ ಬೆಳ್ಳಿತೆರೆಗೆ ಮರಳಿದ್ದಾರೆ. ಇದನ್ನು ಲೋಕೇಶ್ ಕನಕರಾಜ್ ಬರೆದು ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ವಿಜಯ್ ಸೇತುಪತಿ, ಫಹದ್ ಫಾಸಿಲ್ ಮತ್ತು ಸೂರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರ ಬಿಡುಗಡೆಯ ಮುನ್ನಾದಿನದಂದು ಡಾ. ಕಮಲ್ ಹಾಸನ್ ಬೆಂಗಳೂರಿನ ಮಂತ್ರ ಸ್ಕ್ವೇರ್ ಮಾಲ್ನಲ್ಲಿ ಚಿತ್ರದ ಪೂರ್ವ ಬಿಡುಗಡೆ ಕಾರ್ಯಕ್ರಮಕ್ಕಾಗಿ ಹರೈಸನ್ ಸ್ಟುಡಿಯೋ ಪರಿಕಲ್ಪನೆ ಮತ್ತು ಆಯೋಜಿಕರ ಮೂಲಕ ಕರ್ಪಗ ವಿನಯಗ ಫಿಲಂಸ್ ರವರು ಕರ್ನಾಟಕದಲ್ಲಿ “ವಿಕ್ರಮ್” ಚಿತ್ರದ ವಿತರಕಣೆ ಮಾಡಿದ್ದಾರೆ.
ಸಮಾರಂಭದಲ್ಲಿ ಮಾತನಾಡಿದ ಡಾ. ಕಮಲ್ ಹಾಸನ್ ಅವರು ಪುಟ್ಟಣ್ಣ ಕಣಗಾಲ್ ನಿಂದ ತಮ್ಮ ವೃತ್ತಿ ಜೀವನದ ಹಾದಿಯ ನೆನಪಿಸಿಕೊಳ್ಳುತ್ತಾ , ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಗಿರೀಶ್ ಕಾರ್ನಾಡ್, ವರನಟ ಡಾ. ರಾಜ್ ಕುಮಾರ್ ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಬಗ್ಗೆ ನೆನಪಿಸಿಕೊಳುತ್ತಾ , ಬೆಂಗಳೂರಿನ ಒಡನಾಟ ಕೆಂಪೇಗೌಡ ಸರ್ಕಲ್ ಹೀಗೆ ನಾನಾ ಭಾಗಗಳ ಬಗ್ಗೆ ಮಾತನಾಡುತ್ತಾ ರಮೇಶ್ ಅರವಿಂದ್ ಮತ್ತು ಕನ್ನಡ ಇಂಡಸ್ಟ್ರಿಯಲ್ಲಿನ ಇತರರೊಂದಿಗೆ ತಮ್ಮ ನೆನಪುಗಳನ್ನು ಹಂಚಿಕೊಂಡರು.
ಡಾ. ಕಮಲ್ ಹಾಸನ್ ಅವರೊಂದಿಗೆ ಹೊರೈಜನ್ ಸ್ಟುಡಿಯೊದ ಸಂಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶ್ರೀ ಟೋನಿ.ಎ. ರಾಜ್, ಶ್ರೀ ಅಶ್ವಿನ್ ಮತ್ತು ಶ್ರೀ ರಮೇಶ್, ಕರ್ಪಗ ವಿನಾಯಗಂ ಫಿಲ್ಮ್ಸ್, ಶ್ರೀಮತಿ ಕಾಮಾಕ್ಷಿ ಮಂತ್ರಿ, ಹೆಡ್ ಮಾರ್ಕೆಟಿಂಗ್, ಮಂತ್ರಿ ಡೆವಲಪರ್ಸ್ ಪ್ರೈ.ಲಿ. ಕೂಡ ಜೊತೆಗಿದ್ದರು. ಆರಂ ಎಕ್ಸ್ಪೀರಿಯೆನ್ಸ್ನ ಎಮ್ಸಿ ಅರುಳ್ ಗೋವನ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.
ಸದ್ಯ ಬಿಡುಗಡೆಯಾಗಿರುವ ವಿಕ್ರಮ್ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದು ಯಶಸ್ವಿಯಾಗಿ ಮುನ್ನುಗುತ್ತಿದೆ.
Be the first to comment