ಯುವ ಪ್ರತಿಭೆಗಳ ಚಿತ್ರ ‘ವಿಕಿಪೀಡಿಯ’ ದ ಟ್ರೈಲರ್ ಬಿಡುಗಡೆ ಆಗಿದ್ದು, ಕುತೂಹಲ ಮೂಡಿಸಿದೆ.
ಜಗತ್ತಿನಲ್ಲಿ ಎರಡು ರೀತಿ ಜನ ಇರ್ತಾರೆ. ಒಂದು ವಿಕಿಪೀಡಿಯದಲ್ಲಿ ಇಲ್ಲದೇ ಇರುವವರು. ಮತ್ತೊಬ್ರು ವಿಕಿಪೀಡಿಯಲ್ಲಿ ಇರುವವರು. ವಿಕಿಪೀಡಿಯದಲ್ಲಿ ಇಲ್ಲದೇ ಇರುವ ವಿಕಾಸ್ ಕಥೆಯನ್ನು ಚಿತ್ರ ಹೊಂದಿದೆ. ವಿಕಾಸ್ ಪಾತ್ರದಲ್ಲಿ ಯಶವಂತ್ ಅದ್ಭುತವಾಗಿ ನಟಿಸಿದ್ದಾರೆ. ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ.
ಯಶವಂತ್ ಅವರು ಕಿರುತೆರೆಯಲ್ಲಿ ‘ಸತ್ಯಂ ಶಿವಂ ಸುಂದರಂ’, ‘ಒಂದೂರಲ್ಲಿ ರಾಜರಾಣಿ’, ‘ಮಹಾದೇವಿ’, ‘ಶಾಂತಂ ಪಾಪಂ’, ‘ಯಾರೇ ನೀ ಮೋಹಿನಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ.
ಟ್ರೈಲರ್ ಬಗ್ಗೆ ಮಾತನಾಡಿರುವ ಯಶವಂತ್, ಪ್ರಪಂಚದಲ್ಲಿ ಮೂರು ರೀತಿ ಜನ ಇರ್ತಾರೆ. ಆ ಮೂರನೇಯವರೇ ನಾವು. ವಿಕಿಪೀಡಿಯದಲ್ಲಿ ತಮ್ಮ ಹೆಸರು ಬರಲು ಹೊರಟವರ ಗುಂಪಿಗೆ ನಾನು ನನ್ನ ತಂಡ ಸೇರುತ್ತದೆ ಅನಿಸುತ್ತದೆ. ಕಷ್ಟಪಟ್ಟು ಮೂರು ವರ್ಷ ಸಿನಿಮಾ ಮಾಡಿದ್ದೇವೆ. ಈ ತಿಂಗಳ 26ಕ್ಕೆ ಸಿನಿಮಾ ತೆರೆಗೆ ಬರುತ್ತಿದೆ ಎಂದಿದ್ದಾರೆ.
‘ರಫ್ ಕಟ್ ಪ್ರೊಡಕ್ಷನ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ‘ವಿಕಿಪೀಡಿಯ’ ಸಿನಿಮಾಕ್ಕೆ ಸೋಮು ಹೊಯ್ಸಳ ಆಕ್ಷನ್-ಕಟ್ ಹೇಳಿದ್ದಾರೆ. ಚಿತ್ರಕ್ಕೆ ಚಿದಾನಂದ್ ಹೆಚ್.ಕೆ ಛಾಯಾಗ್ರಹಣ, ರವಿಚಂದ್ರನ್ ಸಿ. ಸಂಕಲನವಿದೆ. ಹಾಡುಗಳಿಗೆ ರಾಕೇಶ್ ಯು. ಪಿ ಮತ್ತು ನಿಲೀಮ ರಾವ್ ಸಂಗೀತ ಸಂಯೋಜಿಸಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ‘ವಿಕಿಪೀಡಿಯ’ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಕೆಲ ದಿನಗಳ ಹಿಂದೆ ಸಿನಿಮಾ ತಂಡ ‘ತನು ಮನ’ ಹಾಡನ್ನು ಬಿಡುಗಡೆ ಮಾಡಿತ್ತು. ಚಿತ್ರಕ್ಕೆ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯೆ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
___
Be the first to comment