ವಿಜಯ ಸೂರ್ಯನ ‘ವೀರಪುತ್ರ’

ವಿಜಯ ಸೂರ್ಯ ಮತ್ತೆ ಬಂದಿದ್ದಾರೆ. ಕಿರುತೆರೆಯಲ್ಲಿ ‘ಅಗ್ನಿಸಾಕ್ಷಿ’, ‘ಪ್ರೇಮಲೋಕ’ ಮೊದಲಾದ ಪ್ರೇಮಮಯ ಧಾರಾವಾಹಿಗಳಲ್ಲಿ ಜನಪ್ರಿಯತೆ ಪಡೆದಿರುವ ವಿಜಯ ಸೂರ್ಯ ಈ ಬಾರಿ ಸಿನಿಮಾದಲ್ಲಿ ಆಂಗ್ರಿ ಯಂಗ್ ಮ್ಯಾನ್ ಇಮೇಜ್ ಮೂಲಕ ಕಾಣಿಸಿಕೊಳ್ಳಲಿದ್ದಾರೆ. ಚಿತ್ರಕ್ಕೆ ‘ವೀರಪುತ್ರ’ ಎಂದು ಹೆಸರಿಡಲಾಗಿದ್ದು, ನಾಯಕ ವಿಜಯ ಸೂರ್ಯ ಅವರ ಅವರ ಜನ್ಮದಿನದ ಪ್ರಯುಕ್ತ ಮಾಧ್ಯಮದ ಮುಂದೆ ವಿಶೇಷ ಪ್ರೊಮೊ ಲಾಂಚ್ ಮಾಡಲಾಯಿತು.

“ನಾನು ಬಣ್ಣದ ಲೋಕಕ್ಕೆ ಬಂದು ಹನ್ನೊಂದು ವರ್ಷಗಳಾಗಿವೆ. ಸೈಡ್ ಡಾನ್ಸರಾಗಿ, ಸಣ್ಣ ಪಾತ್ರಗಳನ್ನು ಮಾಡಿ, ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿ ಹಂತ ಹಂತವಾಗಿ ಜನರ ಪ್ರೀತಿ, ಮೆಚ್ಚುಗೆ ಪಡೆದುಕೊಂಡಿದ್ದೇನೆ” ಎಂದರು ವಿಜಯಸೂರ್ಯ. ಮಾತು ಮುಂದುವರಿಸಿದ ಅವರು, “ಸಿನಿಮಾಗಳಲ್ಲಿ ಕೂಡ ನಾಯಕನ ಪಾತ್ರ ಮಾಡಿದ್ದರೂ, ಲವ್ವರ್ ಬಾಯ್ ಇಮೇಜ್ ಮೀರಿದ ಪಾತ್ರ ದೊರಕಿರಲಿಲ್ಲ. ಆದರೆ ವೀರ ಪುತ್ರ ಚಿತ್ರದಲ್ಲಿ ನನ್ನ ಪಾತ್ರಕ್ಕೆ ಮೂರು ಶೇಡ್ಸ್ ಇವೆ. ಇಂಥದೊಂದು ಒಳ್ಳೆಯ ಪಾತ್ರ ಮಾಡುವ ಆಸೆ ಮೊದಲಿಂದಲೇ ಇತ್ತು. ಯಾಕೆ ಒಳ್ಳೆಯ ಕತೆ ಸಿಗುತ್ತಿಲ್ಲ ಎಂದುಕೊಂಡಿದ್ದೆ. ಇವತ್ತು ಅಂಥ ಅವಕಾಶ ದೊರಕಿದೆ. ನಿರ್ಮಾಪಕರಿಗೆ ತ್ಯಾಂಕ್ಸ್ ಹೇಳಬೇಕು. ಏನೇ ಇದ್ದರೂ ನಾವು ಚಿತ್ರರಂಗಕ್ಕೆ ಹೊಸಬರೇನೇ. ಹಾಗಾಗಿ ಈ ಪ್ರೊಮೊವನ್ನು ಒಂದು ಪ್ರಯೋಗದಂತೆ ಮಾಡಿದ್ದೇವೆ. ಇದರಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ಚಿತ್ರವನ್ನು ಚೆನ್ನಾಗಿ ಮಾಡಲಿದ್ದೇವೆ ಎನ್ನುವ ಭರವಸೆ ಇದೆ. ಇದು ತುಂಬ ಡೆಪ್ತ್ ಇರುವ ಪಾತ್ರ. ಅಷ್ಟು ಸುಲಭವಲ್ಲ. ಈ ಹಿಂದೆ `ಅಗ್ನಿಸಾಕ್ಷಿ’ ಧಾರಾವಾಹಿಯಲ್ಲಿ ಸಿಕ್ಕಂಥ ಪಾಸಿಟಿವ್ ಫೀಲ್ ಇಲ್ಲಿ ದೊರಕುತ್ತಿದೆ” ಎಂದು ವಿಜಯ ಸೂರ್ಯ ಖುಷಿ ವ್ಯಕ್ತಪಡಿಸಿದರು.

https://youtu.be/XIuakNOZrjQ

ಆಯುರ್ವೇದಿಕ್ ಮತ್ತು ಅಲೊಪತಿ ಔಷಧಿಗಳ ಕುರಿತಾದ ಒಳ್ಳೆಯ ಕಂಟೆಂಟ್ ಅನ್ನು ಸಣ್ಣ ಲೈನಾಗಿರಿಸಿಕೊಂಡ ಈ ಕತೆಯಲ್ಲಿ ಅದರ ಸುತ್ತ ಎಂಟರ್ಟೇನ್ಮೆಂಟ್ ಇರುತ್ತದೆ. ಚಿತ್ರದಲ್ಲಿ ಲವ್ ಶೇಡ್ ತುಂಬ ಕಡಿಮೆ ಇದೆ. ಸಮಾಜದಲ್ಲಿ ತಪ್ಪು ನಡೆದಾಗ ಅದನ್ನು ಪ್ರಶ್ನಿಸುವಂಥ ಪಾತ್ರ. ಉದಯ ಆದಿತ್ಯ ಎನ್ನುವ ಛಾಯಾಗ್ರಾಹಕರು ಎಂದು ಚಿತ್ರ ತಂಡ ಒಂದೊಂದೇ ಮಾಹಿತಿಗಳನ್ನು ನೀಡಿತು. ಡಾ. ದೇವರಾಜ್ ಅವರು ಚಿತ್ರವನ್ನು ನಿರ್ದೇಶಿಸುತ್ತಿದ್ದು, ಗುರುಬಂಡಿಯವರು ನಿರ್ಮಾಪಕರು

This Article Has 2 Comments
  1. Pingback: sex in the city movie videos nigerian film

Leave a Reply

Your email address will not be published. Required fields are marked *

Translate »
error: Content is protected !!