ರಶ್ಮಿಕಾ – ದೇವರಕೊಂಡ ಮದುವೆಗೆ ಕಠಿಣ ನಿಯಮ

ದಕ್ಷಿಣ ಭಾರತ ಚಿತ್ರರಂಗದ ಜನಪ್ರಿಯ ತಾರಾ ಜೋಡಿ ವಿಜಯ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಅವರ ಮದುವೆಗೆ ಬರುವ ಅತಿಥಿಗಳಿಗೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತಿದೆ ಎನ್ನುವ ಮಾಹಿತಿ ಹೊರ ಬಿದ್ದಿದೆ.

ತಾರಾ ಜೋಡಿ ಶೀಘ್ರದಲ್ಲೇ ಖಾಸಗಿ ಸಮಾರಂಭದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದೆ. ಮದುವೆ ಸಮಾರಂಭ ರಾಜಸ್ಥಾನದ ಉದಯಪುರದಲ್ಲಿ ನಡೆಯಲಿದೆ. ಇದು ಸಂಪೂರ್ಣವಾಗಿ ಖಾಸಗಿ ಕಾರ್ಯಕ್ರಮವಾಗಿರಲಿದೆ.

ಮದುವೆಯಲ್ಲಿ ಭಾಗವಹಿಸುವ ಅತಿಥಿಗಳಿಗೆ ಮೊಬೈಲ್ ಫೋನ್‌ಗಳಿಗೆ ಸಂಪೂರ್ಣ ನಿಷೇಧ ವಿಧಿಸಲಾಗಿದೆ. ಯಾವುದೇ ಫೋಟೋ ಅಥವಾ ವಿಡಿಯೋಗಳು ಸಾಮಾಜಿಕ ಜಾಲತಾಣಗಳಿಗೆ ಸೋರಿಕೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಮದುವೆಗೆ ಸಿನಿ ಕ್ಷೇತ್ರದ ಸೆಲೆಬ್ರಿಟಿಗಳನ್ನು ಆಹ್ವಾನಿಸಲಾಗುತ್ತಿಲ್ಲ. ಕುಟುಂಬ ಸದಸ್ಯರು ಮತ್ತು ಅತ್ಯಂತ ಆತ್ಮೀಯ ವಲಯದ ಸ್ನೇಹಿತರು ಮಾತ್ರ ಭಾಗವಹಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿವಾಹ ಸಮಾರಂಭದಲ್ಲಿ ಕಾರ್ಯನಿರ್ವಹಿಸುವ ಛಾಯಾಗ್ರಹಣ ತಂಡಕ್ಕೆ ಪೋಟೋ ಹಾಗೂ ವಿಡಿಯೋ ಲೀಕ್ ಆಗದಂತೆ ಗೌಪ್ಯತಾ ಒಪ್ಪಂದ ಮಾಡಿಸಲಾಗಿದೆ ಎನ್ನಲಾಗಿದೆ.

ಮದುವೆಯ ನಂತರ ತಾರಾ ಜೋಡಿ ಹೈದರಾಬಾದ್ ನಲ್ಲಿ ಆತ್ಮೀಯರು ಮತ್ತು ಚಿತ್ರರಂಗದ ಸ್ನೇಹಿತರಿಗೆ ರಿಸೆಪ್ಷನ್ ಆಯೋಜಿಸುವ ತಯಾರಿ ನಡೆಸಿದೆ ಎಂದು ಮಾಹಿತಿ ಹೊರಬಿದ್ದಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!