ವಿಜಯ ಸಂಕೇಶ್ವರ ಅವರ ಜೀವನ ಚರಿತ್ರೆ ಆಧರಿಸಿದ ‘ವಿಜಯಾನಂದ’ ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಬಾರೀ ಸದ್ದು ಮಾಡುತ್ತಿದೆ.
ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಒಂದೇ ದಿನದಲ್ಲಿ ಸುಮಾರು 40 ಲಕ್ಷ ವೀಕ್ಷಣೆ ಕಂಡಿದೆ. ಡಿ.9ರಂದು ಐದು ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.
ವಿಜಯಾನಂದ’ ಚಿತ್ರದ ಟ್ರೇಲರ್ ಬಿಡುಗಡೆ ವೇಳೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಸಂಕೇಶ್ವರ ಅವರ ಸಮಯಪ್ರಜ್ಞೆ ಅಮೋಘ. ಯಾವುದು ಆಗುವುದಿಲ್ಲವೋ ಅದಕ್ಕೆ ನೇರವಾಗಿ ಇಲ್ಲ ಎನ್ನುವ ಸ್ವಭಾವ ಅವರಿಗೆ ಇದೆ. ಅವರ ಬದುಕನ್ನು ಹತ್ತಿರದಿಂದ ನೋಡಿದ್ದೇನೆ. ಅವರ ಕಥೆ ಮ್ಯಾನೇಜ್ ಮೆಂಟ್ ಇನ್ಸಿಸ್ಟೂಟ್ಯೂಟ್‌ಗಳಿಗೆ ಪಾಠ ಆಗಬೇಕು ಎಂದರು.
ನಿರ್ಮಾಪಕ ಆನಂದ ಸಂಕೇಶ್ವರ ಅವರು, ‘ಪ್ರತಿಯೊಬ್ಬ ಮಗನ ಹೀರೋ ತಂದೆಯೇ ಆಗಿರುತ್ತಾರೆ. ನನ್ನ ಹೀರೋ ನನ್ನ ತಂದೆ. ಬಹಳ ಶ್ರಮದಿಂದ ಉದ್ಯಮ ಕಟ್ಟಿದ್ದಾರೆ. ನಮ್ಮ ಸಂಸ್ಥೆಯಿಂದ ಮುಂದೆಯೂ ಸಿನಿಮಾ ಮಾಡುತ್ತೇವೆ’ ಎಂದರು.
ನಿರ್ದೇಶಕಿ ರಿಷಿಕಾ ಶರ್ಮಾ ಮಾತನಾಡಿ, ‘ನನಗೆ ಇದೊಂದು ದೊಡ್ಡ ಅವಕಾಶ ಅಥವಾ ಆಶೀರ್ವಾದ ಇದ್ದ ಹಾಗೆ. ಇದು ಕನ್ನಡದ ಮೊದಲ ಅಧಿಕೃತ ಬಯೋಪಿಕ್. ಈ ಸಿನೆಮಾ ವಿಜಯ ಸಂಕೇಶ್ವರ ಅವರ ಬದುಕಿನ ಹೈಲೈಟ್ಸ್ ಆಗಿದೆ’ ಎಂದು ಹೇಳಿದರು.
ವಿಜಯ ಸಂಕೇಶ್ವರ ಮಾತನಾಡಿ, ಸಿನೆಮಾ ಚೆನ್ನಾಗಿ ಮೂಡಿ ಬಂದಿದೆ. ಅನಂತ್ ನಾಗ್ ಅವರು ನನ್ನ ತಂದೆಯವರ ಪಾತ್ರದಲ್ಲಿ ಜೀವಿಸಿದ್ದಾರೆ. ರಿಷಿಕಾ ಮತ್ತು ತಂಡ ಬಹಳ ಒಳ್ಳೆಯ ಕೆಲಸ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
__
Be the first to comment