ವಿಜಯ ಸಂಕೇಶ್ವರ ಅವರ ಬದುಕನ್ನು ಆಧರಿಸಿದ ‘ ವಿಜಯಾನಂದ ‘ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಆಗಿದ್ದು ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ವಿಜಯ ಸಂಕೇಶ್ವರ ಅವರ ಹುಟ್ಟುಹಬ್ಬವಾದ ಆಗಸ್ಟ್ 2 ರಂದು ‘ ವಿಜಯಾನಂದ’ ಸಿನಿಮಾದ ಟೈಟಲ್ ಪೋಸ್ಟರ್ ಬಿಡುಗಡೆ ಮಾಡಲಾಗಿತ್ತು. ಮೋಷನ್ ಪೋಸ್ಟರ್ ಈಗ ಬಿಡುಗಡೆ ಆಗಿದ್ದು ಇಲ್ಲಿ ಟ್ರಕ್ ಜೊತೆಗೆ ಹೀರೋ ಕಾಣಿಸಿಕೊಂಡಿದ್ದಾರೆ.
ವಿಜಯ ಸಂಕೇಶ್ವರ ಅವರ ಪುತ್ರ ಆನಂದ ಸಂಕೇಶ್ವರ ಅವರು ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ರಿಷಿಕಾ ಶರ್ಮಾ ಅವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ.
ಟ್ರಂಕ್’ ಚಿತ್ರದಲ್ಲಿ ಮುಖ್ಯ ಪಾತ್ರ ಮಾಡಿದ್ದ ನಿಹಾಲ್ ಅವರು ವಿಜಯಾನಂದ ಚಿತ್ರದಲ್ಲಿ ವಿಜಯ ಸಂಕೇಶ್ವರ ಆಗಿ ನಟನೆ ಮಾಡುತ್ತಿದ್ದಾರೆ. ತೆಲುಗು ಮತ್ತು ಮಲಯಾಳಂ ಚಿತ್ರಗಳಲ್ಲಿ ಕೆಲಸ ಮಾಡಿರುವ ಗೋಪಿ ಸುಂದರ್ ಈ ಚಿತ್ರಕ್ಕೆ ಸಂಗೀತ, ಹಿನ್ನೆಲೆ ಸಂಗೀತ ನೀಡಲಿದ್ದಾರೆ.
ಕೀರ್ತನ್ ಪೂಜಾರಿ ಛಾಯಾಗ್ರಹಣ, ಹೇಮಂತ್ ಕುಮಾರ್ ಡಿ ಸಂಕಲನ, ಇರ್ಮಾನ್ ಸರ್ದಾರಿಯಾ ನೃತ್ಯ ಸಂಯೋಜನೆ, ರಘು ನಿಡುವಳ್ಳಿ ಸಂಭಾಷಣೆ ಚಿತ್ರಕ್ಕೆ ಇದೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭಿಸಲು ಯೋಜನೆ ರೂಪಿಸಲಾಗಿದ್ದು 2022ರಲ್ಲಿ ಚಿತ್ರ ತೆರೆಗೆ ಬರಲು ಯೋಜನೆ ರೂಪಿಸಲಾಗಿದೆ.
1976ರಲ್ಲಿ ಒಂದು ಟ್ರಕ್‌ನಿಂದ ತಮ್ಮ ಜೀವನ ಆರಂಭಿಸಿದ ವಿಜಯ ಸಂಕೇಶ್ವರ ಅವರ ವಿಆರ್‌ಎಲ್ ಸಂಸ್ಥೆ ಇಂದು ಭಾರತದ ಅತಿ ದೊಡ್ಡ ಲಾಜಿಸ್ಟಿಕ್ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ವಿಜಯವಾಣಿ ಪತ್ರಿಕೆ, ವಿಆರ್‌ಎಲ್ ಸಾರಿಗೆ, ದಿಗ್ವಿಜಯ ಸುದ್ದಿ ವಾಹಿನಿ ಇವರು ಸ್ಥಾಪಿಸಿದ ಸಂಸ್ಥೆಗಳಾಗಿವೆ.
ಇದರ ಜೊತೆಗೆ ವಿಜಯ ಸಂಕೇಶ್ವರ ಅವರು 3 ಬಾರಿ ಸಂಸದರಾಗಿ ಸಹ ಆಯ್ಕೆಯಾಗಿದ್ದರು.
https://youtu.be/jfTVhiwGhFY
Be the first to comment