ಶಿವಣ್ಣ ನಟನೆಯ ಘೋಸ್ಟ್ ಚಿತ್ರಕ್ಕೆ ವಿಜಯ್ ಸೇತುಪತಿ ಅವರನ್ನ ಕರೆ ತರುವ ಪ್ರಯತ್ನ ಮಾಡಲಾಗಿದೆ ಎಂದು ನಿರ್ದೇಶಕ ಶ್ರೀನಿ ಹೇಳಿದ್ದಾರೆ.
ಅವರನ್ನು ಅಪ್ರೋಚ್ ಮಾಡಿರೋದು ಸತ್ಯ. ಆದರೆ ಯಾವುದು ಇನ್ನೂ ಫೈನಲ್ ಆಗಿಲ್ಲ ಎಂದು ಶ್ರೀನಿ ತಿಳಿಸಿದ್ದಾರೆ.
ಮೂರನೇ ಕೊನೆ ಹಂತದ ಶೂಟಿಂಗ್ ಇದೇ ತಿಂಗಳ 10 ರಂದು ಶುರು ಆಗಲಿದೆ. ಬೆಂಗಳೂರಲ್ಲಿಯೇ ಚಿತ್ರದ ಚಿತ್ರೀಕರಣ ಮಾಡೋ ಯೋಚನೆಯನ್ನು ಶ್ರೀನಿ ಮಾಡಿದ್ದಾರೆ. ಚಿತ್ರದ ನಿರ್ಮಾಪಕ ಸಂದೇಶ್ ಶ್ರೀನಿ ಕಲ್ಪನೆಗೆ ಸಪೋರ್ಟ್ ಮಾಡಿದ್ದಾರೆ.
ಕನ್ನಡದ ಘೋಸ್ಟ್ ಚಿತ್ರದ ತಾರಾ ಬಳಗದ ವಿಷಯ ಒಂದೊಂದಾಗಿಯೇ ರಿವೀಲ್ ಆಗುತ್ತಿದೆ. ಅನುಪಮ್ ಖೇರ್ ನಟಿಸುವುದು ಸುದ್ದಿ ಆಗಿತ್ತು.
ಕೆಜಿಎಫ್ ಚಿತ್ರದ ಅಮ್ಮನ ಪಾತ್ರಧಾರಿ ಅರ್ಚನಾ ಜೋಯಿಸ್ ಈ ಚಿತ್ರದಲ್ಲಿ ಪತ್ರಕರ್ತೆ ಪಾತ್ರ ಮಾಡಿದ್ದಾರೆ ಅನ್ನೋ ಸುದ್ದಿ ಕೂಡ ಹರಿದಾಡಿದೆ.
___

Be the first to comment