‘ಚಿನ್ನಾರಿ ಮುತ್ತ ‘ವಿಜಯ ರಾಘವೇಂದ್ರ ಅವರು ನಾಡಿನ ಸಾಂಸ್ಕೃತಿಕ ಇತಿಹಾಸ, ಕಲೆಯನ್ನು ಬಿಂಬಿಸುವ ‘ ರುದ್ರಾಭಿಷೇಕಂ’ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದಾರೆ.
ಇತ್ತೀಚೆಗೆ ಚಿತ್ರ ಸೆಟ್ಟೇರಿದೆ. ಚಿತ್ರದ ಕುರಿತು ಮಾತನಾಡಿರುವ ವಿಜಯ ರಾಘವೇಂದ್ರ ಅವರು, ಈ ಚಿತ್ರದಲ್ಲಿ ಮೊದಲ ಬಾರಿಗೆ ನಾನು ಒಬ್ಬ ವೀರಗಾಸೆ ಕಲಾವಿದನಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಇದು ತುಂಬಾ ಖುಷಿ ಕೊಟ್ಟಿದೆ. ಚಿತ್ರದಲ್ಲಿ ನನಗೆ ಹಲವು ಗೆಟಪ್ ಗಳಿವೆ ಎಂದು ಹೇಳಿದ್ದಾರೆ.
ರುದ್ರಾಭಿಷೇಕಂ ಚಿತ್ರ ಕಮರ್ಷಿಯಲ್ ಅಂಶ ಹೊಂದಿದೆ. ಅಲ್ಲದೇ ಇದು ಭಕ್ತಿ ಪ್ರಧಾನ ಚಿತ್ರ ಆಗಿದೆ. ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ವಸಂತ್ ಕುಮಾರ್ ಅವರು ವೀರಗಾಸೆ ಕಲೆಯ ಹಿನ್ನೆಲೆ ಇಟ್ಟುಕೊಂಡು ಚಿತ್ರವನ್ನು ಮಾಡಿದ್ದಾರೆ.
ಈ ಚಿತ್ರಕ್ಕೆ ಫ್ಯಾನ್ ಇಂಡಿಯಾ ಕ್ರಿಯೇಶನ್ಸ್ ಬ್ಯಾನರ್ ಬಂಡವಾಳ ಹೂಡುತ್ತಿದೆ. ಮೈಸೂರು ಮೂಲದ ರಂಗಭೂಮಿ ಕಲಾವಿದೆ ಪ್ರೇರಣಾ ಅವರು ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ವಿ ಮನೋಹರ್ ಅವರು ನಾಲ್ಕು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಚಿತ್ರಕ್ಕೆ ಮುತ್ತುರಾಜ್ ಅವರ ಛಾಯಾಗ್ರಹಣವಿದೆ.
ಸಾಂಸ್ಕೃತಿಕ ಇತಿಹಾಸ, ನಾಡಿನ ಆಚರಣೆ, ಕಲೆಯನ್ನು ಪ್ರತಿಬಿಂಬಿಸುವ ರುದ್ರಾಭಿಷೇಕಂ ಚಿತ್ರ ಕುತೂಹಲ ಮೂಡಿಸಿದೆ.
_
Be the first to comment