ದೊಡ್ಡಮಟ್ಟದ ಜೀವನಾಂಶ ನೀಡಲು ಮುಂದಾದ ವಿಜಯ್

ತಮಿಳು ನಟ ವಿಜಯ್ ಅವರು ಪತ್ನಿ ಸಂಗೀತಾ, ಪುತ್ರ ಜಾಸನ್ ಸಂಜಯ್ ಹಾಗೂ ಪುತ್ರಿ ದಿವ್ಯಾ ಶಾಸಾ ಅವರಿಗೆ ಒಟ್ಟು ₹250 ಕೋಟಿ ಪರಿಹಾರ ನೀಡಲು ಮುಂದಾಗಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ.

ಆರಂಭದಲ್ಲಿ ವಿಚ್ಛೇದನಕ್ಕೆ ಸಮ್ಮತಿಸದ ವಿಜಯ್ ಇತ್ತೀಚೆಗೆ ತಮ್ಮ ನಿಲುವು ಬದಲಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಜೀವನಾಂಶವನ್ನು ಮೊತ್ತವನ್ನು ಪತ್ನಿ ಮತ್ತು ಮಕ್ಕಳ ನಡುವೆ ಹಂಚಿಕೆ ಮಾಡಲಾಗುತ್ತದೆ ಎನ್ನಲಾಗಿದೆ.

1999ರಲ್ಲಿ ಕುಟುಂಬದ ಒಪ್ಪಿಗೆ ಪಡೆದು ವಿಜಯ–ಸಂಗೀತಾ ವಿವಾಹವಾಗಿದ್ದರು. ಶ್ರೀಲಂಕನ್ ತಮಿಳು ಮೂಲದ ಸಂಗೀತಾ, ವಿಜಯ ಅವರ ಅಭಿಮಾನಿಯಾಗಿ ಪರಿಚಯವಾಗಿ ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ವಿಜಯ್ ಅವರಿಗೆ ನಟಿ ತ್ರಿಶಾ ಜೊತೆ ಅಫೇರ್ ಇದೆ ಎಂಬ ವದಂತಿಗಳು ಹರಿದಾಡುತ್ತಿವೆ. ಈ ಕುರಿತು ಯಾವುದೇ ಅಧಿಕೃತ ದೃಢೀಕರಣ ಇಲ್ಲ. ಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಆ ನಟಿಯ ಹೆಸರನ್ನು ವಿಜಯ್ ಪತ್ನಿ ಬಹಿರಂಗಪಡಿಸಿಲ್ಲ ಎಂದು ತಿಳಿದು ಬಂದಿದೆ.

ವಿಜಯ್ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ಚೆಂಗಲ್‌ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಪತಿ ವಿವಾಹೇತರ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ. ಪರಸ್ಪರ ಸಮ್ಮತಿಯ ಮೇರೆಗೆ ವಿವಾಹ ವಿಚ್ಛೇದನ ಮಂಜೂರು ಮಾಡಬೇಕೆಂದು ಸಂಗೀತಾ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Be the first to comment

Leave a Reply

Your email address will not be published. Required fields are marked *

Translate »
error: Content is protected !!