ಕರೋನಾ ಹಾವಳಿಯಿoದ ಇಡೀ ಚಿತ್ರರಂಗವು ಸಂಕಷ್ಟಕ್ಕೆ ಸಿಲುಕಿದೆ. ಕಳೆದ ವರ್ಷದಿಂದಲೂ ಪ್ರತಿ ಒಬ್ಬರ ಜೀವನದ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರಿದೆ. ಅದರಲ್ಲೂ ಚಿತ್ರರಂಗಕ್ಕಾಗಿರುವ ನಷ್ಟ ಅಷ್ಟಿಷ್ಟಲ್ಲ. ಸಿನಿರಂಗದ ಸಾವಿರಾರು ಕಾರ್ಮಿಕರು ಇಷ್ಟು ದಿವಸ ಕೆಲಸವಿಲ್ಲದೇ ಇದ್ದದ್ದು, ಇದೇ ಮೊದಲು ಎನ್ನಬಹುದು. ಇಂತಹ ಸಂದರ್ಭದಲ್ಲಿ ನೊಂದವರಿಗೆ ಆಸರೆಯಾಗುವ ವ್ಯಕ್ತಿಗಳು ಬಹಳ ವಿರಳ. ಸಿನಿಮಾ ಉದ್ಯೋಗಿಗಳನ್ನು ತಮ್ಮವರೇ ಅಂದುಕೊಳ್ಳುವವರು ಬೆರಳೆಣಿಕೆಯಷ್ಟು.
ಹೊಂಬಾಳೆ ಸಂಸ್ಥೆಯ ಮಾಲೀಕರಾದ ವಿಜಯ್ ಕಿರಗಂದೂರು ಅವರು ಕೊರೋನಾ ಸಂದರ್ಭದಲ್ಲಿ ಯಾವುದೇ ಪ್ರಚಾರವಿಲ್ಲದೇ ಮಾಡಿರುವ ಸತ್ಕಾರ್ಯಗಳು ನಿಜಕ್ಕೂ ಆದರ್ಶನೀಯ. ಕಳೆದ ವರ್ಷವೇ ಪ್ರಾರಂಭವಾದ ಈ ಸಾಂಕ್ರಾಮಿಕ ರೋಗದ ಪ್ರಭಾವದಿಂದಾಗಿ ಇಡೀ ದೇಶವೇ ಎರಡು ತಿಂಗಳು ಸ್ತಬ್ಧವಾಗಿತ್ತು. ಈ ಸಂದರ್ಭದಲ್ಲಿ ವಿಜಯ್ ಕಿರಂಗದೂರು ಅವರು ತಮ್ಮ ನಿರ್ಮಾಣದ ಕೆ.ಜಿ.ಎಫ್ ಹಾಗೂ ಯುವರತ್ನ ಚಿತ್ರತಂಡದ ಸದಸ್ಯರ ಖಾತೆಗೆ ಉತ್ತಮ ಮೊತ್ತವನ್ನು ಎರಡು ತಿಂಗಳು ವರ್ಗಾಯಿಸಿದ್ದರು ಹಾಗೂ ಕನ್ನಡ ಚಲನಚಿತ್ರ ಕಾರ್ಮಿಕರ ಸಂಕಷ್ಟ ಕ್ಕೂ ನರೆವಾಗಿದ್ದರು.
ಈ ವರ್ಷ ಮತ್ತೆ ಕೊರೋನದ ಎರಡನೇ ಅಲೆ ಜೋರಾಗಿ ಇದೆ. ಲಸಿಕೆ ಬಂದಿದೆಯಾದರೂ, ಹರಡುವಿಕೆಯ ಪ್ರಮಾಣ ಕಳೆದಭಾರಿಗಿಂತ ಹೆಚ್ಚು. ಅದೇ ರೀತಿ ಕೊರೋನದೊಂದಿಗೆ ಜನರ ಸಮಸ್ಯೆಗಳು ಹೆಚ್ಚಾಗುತ್ತದೆ. ಈ ಸಮಯದಲ್ಲಿ ಯಾವುದೇ ಅಪೇಕ್ಷೆ ಇಲ್ಲದೇ ನಿರ್ಮಾಪಕ ವಿಜಯ್ ಅವರು ಮಾಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯ.
ತಮ್ಮ ತವರು ಜಿಲ್ಲೆ ಮಂಡ್ಯ ಆಸ್ಪತ್ರೆಗೆ ಎರಡು ಆಕ್ಸಿಜನ್ ಪ್ಲಾಂಟ್ ಹಾಗೂ ಇಪ್ಪತ್ತು ಆಕ್ಸಿಜನ್ ಸೇರಿದಂತೆ ಉತ್ತಮ ಸೌಲಭ್ಯವುಳ್ಳ ಹಾಸಿಗೆ ನೀಡಿದ್ದಾರೆ. ಕನ್ನಡ ಚಲನಚಿತ್ರ ಕಾರ್ಮಿಕರ, ತಂತ್ರಜ್ಞರ ಹಾಗೂ ಕಲಾವಿದರ ಒಕ್ಕೂಟದ ಸುಮಾರು 3200ಕ್ಕೂ ಅಧಿಕ ಮಂದಿಗೆ ಧನಸಹಾಯ ಮಾಡುತ್ತಿದ್ದಾರೆ.
ಎಲ್ಲಕ್ಕಿಂತಲೂ ಮಿಗಿಲಾಗಿ ಹೊಂಬಾಳೆ ಸಂಸ್ಥೆಯಲ್ಲಿ ಕೆಲಸ ಮಾಡುವ 600 ಕ್ಕೂ ಅಧಿಕ ಕಾರ್ಮಿಕರಿಗೆ ಹಾಗೂ ಅವರ ಕುಟುಂಬದವರಿಗೆ ಉಚಿತ ಕೊರೋನ ಲಸಿಕೆ ಹಾಕಿಸಿದ್ದಾರೆ ಹಾಗೂ ಅವರ ಎಲ್ಲಾ ಕಷ್ಟಗಳಿಗೂ ಸ್ಪಂದಿಸಿದ್ದಾರೆ.
ಇವರ ಸಹಾಯ ಬರೀ ಕರ್ನಾಟಕಕಷ್ಟೇ ಸೀಮಿತವಾಗಿಲ್ಲ. ತಮ್ಮ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ತೆಲುಗಿನ “ಸಲಾರ್” ಚಿತ್ರಕ್ಕೆ ಕಾರ್ಯನಿರ್ವಹಿಸುತ್ತಿರುವ ಸುಮಾರು 150ಕ್ಕೂ ಅಧಿಕ ಚಿತ್ರತಂಡದ ಸದಸ್ಯರಿಗೂ ಇಲ್ಲಿನ ಹಾಗೆ ಎಲ್ಲಾ ಸೌಲಭ್ಯ ನೀಡಿದ್ದಾರೆ. ಹೊಂಬಾಳೆ ಸಂಸ್ಥೆಯಿಂದ ನಿರ್ಮಾಣವಾಗಿದ್ದ “ರಾಜಕುಮಾರ” ಚಿತ್ರದ ಹಾಡೊಂದರಲ್ಲಿ ನೀನೇ ರಾಜಕುಮಾರ ಎಂಬ ಸಾಲಿದೆ.
ಎಲ್ಲರ ಕಷ್ಟಗಳನ್ನು ತನ್ನ ಕಷ್ಟ ಎಂದು ತಿಳಿದು, ಯಾವುದೇ ಪಾಲಾಪೇಕ್ಷೆ ಇಲ್ಲದೇ ಸಹಾಯ ಮಾಡುತ್ತಿರುವ ಸಹೃದಯಿ ವಿಜಯ್ ಕಿರಂಗದೂರು ಅವರಿಗೆ ಈ ಮೇಲಿನ ಸಾಲು ನಿಜಕ್ಕೂ ಅನ್ವಯವಾಗುತ್ತದೆ. ಒಟ್ಟಾರೆ ಚಿತ್ರೋದ್ಯಮದ ಕಲಾವಿದರು , ತಂತ್ರಜ್ಞಾನರು, ಮಾದ್ಯಮದವರು, ಸಿನಿಮಾ ಪ್ರಚಾರರ್ಕತರು ಸೇರಿದಂತೆ ಹಲವರಿಗೆ ಈ ಸಮಯದಲ್ಲಿ ಸಹಾಯ ಮಾಡಿರುವ ನಿರ್ಮಾಪಕರ ಈ ಕಾರ್ಯ ಮೆಚ್ಚುವoತದಾಗಿದೆ.
Be the first to comment